ನಮ್ಮ ಗಂಗಾಮತ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವ ಅಪೇಕ್ಷಿತ ಆಕಾಂಕ್ಷಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ.


ನಮ್ಮ ಗಂಗಾಮತ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವ ಅಪೇಕ್ಷಿತ ಆಕಾಂಕ್ಷಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ.

ಕಳೆದ ಹಲವು ದಶಕಗಳಿಂದ ನಮ್ಮ ಸಮಾಜದ ಬಂಧುಗಳು ರಾಜ್ಯದಲ್ಲಿ ಎಲ್ಲಾ ಪಕ್ಷಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡು ಬಂದಿರುತ್ತಾರೆ. ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಸಂಖ್ಯೆಯಲ್ಲಿರುವ, ಅತೀ ಹಿಂದುಳಿದ ವರ್ಗಕ್ಕೆ ಸೇರಿದ 39 ಪರ್ಯಾಯ ಪದಗಳಿಂದ ಗುರುತಿಸಿಕೊಂಡಿರುವ ಗಂಗಾಮತ, ಕೋಲ, ಬೆಸ್ತ, ಮೊಗವೀರ, ಸುಣಗಾರ, ಮೀನುಗಾರ ಹಾಗೂ ಇನ್ನಿತರ ಪರ್ಯಾಯ ಪದಗಳಿಂದ ಗುರುತಿಸ್ಪಟ್ಟಿರುವ ನಮ್ಮ ಸಮಾಜದ ಮುಖಂಡರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು 15-20 ಜನ ಪ್ರಬಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುತ್ತಾರೆ. ತಾವುಗಳು ನಮ್ಮ ಸಮಾಜಕ್ಕೆ ಪ್ರೀತಿ, ವಿಶ್ವಾಸ, ಗೌರವ ಮತ್ತು ರಾಜಕೀಯ ಸ್ಥಾನಮಾನವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೀರಿ. ಈ ನಿಟ್ಟಿನಲ್ಲಿ ನಾವು ನಿಮಗೆ ಚಿರಖುಣಿಗಳಾಗಿದ್ದೇವೆ. 10-11 ಕ್ಷೇತ್ರಗಳಲ್ಲಿ ನಾವುಗಳು ಸ್ಪರ್ಧಿಸಿ ಗೆಲ್ಲುವ ಅವಕಾಶವಿದೆ. ಆ ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಬಂಧುಗಳ ಮತದಾರರ ಸಂಖ್ಯೆಯು ಹೆಚ್ಚಾಗಿರುವುದರಿಂದ ನಾವು ಆ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಅವಕಾಶ ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಗೆಲ್ಲುವ ಅವಕಾಶವಿರುವುದರಿಂದ ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುವ ವಿಶ್ವಾಸದಿಂದ ಆಗ್ರಹಿಸುತ್ತಿದ್ದೇವೆ. ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ 56 ಮತಕ್ಷೇತ್ರಗಳಲ್ಲಿ ನಾವು 25 ರಿಂದ 90 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದೇವೆ. 110 ಕ್ಷೇತ್ರಗಳಲ್ಲಿ 5 ರಿಂದ 20 ಸಾವಿರದ ವರೆಗೂ ಮತದಾರರನ್ನು ಹೊಂದಿದ್ದೇವೆ. 12 ಲೋಕಸಭಾ ಕ್ಷೇತ್ರಗಳಲ್ಲಿ 1 ಲಕ್ಷದಿಂದ 3.5 ಲಕ್ಷಕ್ಕಿಂತಲೂ ಹೆಚ್ಚು ಮತದಾರರನ್ನು ಹೊಂದಿದ್ದೇವೆ. ಎಲ್ಲಾ ಪಕ್ಷಗಳ ಮಾನ್ಯ ಅಧ್ಯಕ್ಷರುಗಳಾದ ತಾವುಗಳು ಇವೆಲ್ಲವನ್ನು ಗಮನಿಸಿ ನಮ್ಮ ಸಮಾಜದ ಪ್ರಬಲ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಾಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ರವಿಕುಮಾರ್ ಐ.ಡಿ. ಪತ್ರಕರ್ತರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಮೀನುಗಾರರ ಸಂಘ – ಕರ್ನಾಟಕ (ರಿ.) ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದವರು: ಡಾ. ದೇವಿಪ್ರಸಾದ್ ಹೇಜ್ಮಾಡಿ , ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ – ಕರ್ನಾಟಕ (ರಿ.), ಹೇಟ್ಯಾಡಿ ವಿ.ಕೆ. ಮಧುಸೂದನ್, ಅಂತೂ‌ರ್ ಸುರೇಶ್, ಅಶೋಕ್ ಗಣಪುರ್, ಬಿ. ರಂಗಸ್ವಾಮಿ, ಪ್ರಸನ್ನ ಅರಸೀಕೆರೆ, ಲಕ್ಷ್ಮಣ್ ಮೊಗವೀರ ಹಾಗು ಇನ್ನಿತರರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims