ಜನರ ನಡುವೆ,ಜನರ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿ ಶ್ರಮಿಸುತ್ತಿದೆ- ದಿನೇಶ್ ಗುಂಡೂರಾವ್*
*ಜನರ ನಡುವೆ,ಜನರ
ಒಳಿತಿಗಾಗಿ ಕಾಂಗ್ರೆಸ್ ಪಕ್ಷ
ಕಟಿಬದ್ದವಾಗಿ ಶ್ರಮಿಸುತ್ತಿದೆ-
ದಿನೇಶ್ ಗುಂಡೂರಾವ್*
*ಜನರ ನಡುವೆ,ಜನರ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿ ಶ್ರಮಿಸುತ್ತಿದೆ- ದಿನೇಶ್ ಗುಂಡೂರಾವ್*
ಗಾಂಧಿನಗರ ವಿಧಾನಸಭಾ ಕ್ಷೇತ್ರ: ಸುಭಾಶ್ ನಗರ ವಾರ್ಡ್ ನಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಗಾಡಿ ಮತ್ತು ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರಿಗೆ ಟೈಲ್ಸ್ ಕಟಿಂಗ್ ಯಂತ್ರ, ದೃಷ್ಟಿದೋಷವುಳ್ಳವರಿಗೆ ಉಚಿತವಾಗಿ ಕನ್ನಡಕಗಳನ್ನು ಶಾಸಕರಾದ ದಿನೇಶ್ ಗುಂಡೂರಾವ್ ರವರು, ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಟಿ.ಮಲ್ಲೇಶ್ ರವರು ಫಲಾನುಭವಿಗಳಿಗೆ ವಿತರಿಸಿದರು.
*ದಿನೇಶ್ ಗುಂಡೂರಾವ್ ರವರು* ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ ಪರ ಮತ್ತು ಎಲ್ಲ ಧರ್ಮ,ಜಾತಿಯನ್ನು ಸರಿಸಮಾನವಾಗಿ ಪಕ್ಷ.
ಗಾಂಧಿನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರ ಇಲ್ಲಿ ಎಲ್ಲ ವರ್ಗದ ಜನರು ಇಲ್ಲಿ ವಾಸವಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಇರುವ ಶ್ರಮಿಕವರ್ಗ, ಕೂಲಿಕಾರ್ಮಿಕರನ್ನ ಗುರುತಿಸಿ ಅವರ ಸ್ವಾವಲಂಬಿ ಜೀವನಕ್ಕೆ ಬೇಕಾದ ಸೌಲಭ್ಯ ಸೌವಲತ್ತು ನೀಡಲಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭ ನಾಡಿನ ಜನರ ಒಳಿತಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ನಾಲ್ಕು ಮಹತ್ವಪೂರ್ಣ ಯೋಜನೆಯನ್ನ ಘೋಷಣೆ ಮಾಡಲಾಗಿದೆ.
200ಯೂನಿಟ್ ವಿದ್ಯುತ್ ಉಚಿತ ಮತ್ತು ಮಹಿಳೆಯರ ಸ್ವಾಭಿಮಾನಿ ಜೀವನಕ್ಕೆ ಪ್ರತಿ ತಿಂಗಳು ಮನೆಯ ಯಾಜಮಾನಿಗೆ 2000 ಪ್ರತಿ ತಿಂಗಳು ಅವರ ಅಕೌಂಟ್ ಪಾವತಿ ಮತ್ತು ಪ್ರತಿ ವ್ಯಕ್ತಿಗೆ 10ಕೆ.ಜಿ ಉಚಿತವಾಗಿ ಅಕ್ಕಿ, ನಿರುದ್ಯೋಗ ಭತ್ಯೆ ಯೋಜನೆಗಳು ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ ಪರ ರಾಜ್ಯದ ಜನರು ಅಪಾರ ಬೆಂಬಲ ನೀಡುತ್ತಿದ್ದಾರೆ ಇನ್ನು ಎರಡು ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
*ಟಿ.ಮಲ್ಲೇಶ್ ರವರು ಮಾತನಾಡಿ* ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಸಮರ್ಥ, ಸದೃಢವಾಗಿದೆ ಕಾಂಗ್ರೆಸ್ ಪಕ್ಷ.
ಆರ್ಥಿಕವಾಗಿ ಹಿಂದುಳಿದ ಎಲ್ಲ ಧರ್ಮ,ಜಾತಿಯಾವರನ್ನು ಸರಿಸಮಾನವಾಗಿ ಕಾಣಬೇಕು, ಎಲ್ಲರು ಒಂದೇ ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕಾಂಗ್ರೆಸ್ ಪಕ್ಷ ನಾಲ್ಕು ಯೋಜನೆಯನ್ನ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಕಾಂಗ್ರೆಸ್ ಪಕ್ಷ ಬಡವರ,ದೀನದಲಿತರ ಪರ ಹೋರಾಟ ಮಾಡುವ. ನುಡಿದಂತೆ,ನಡೆದಂತೆ ನುಡಿಯುವ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಬಾರಿ ಬೆಂಬಲ ಸಿಕ್ಕಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ದಿನೇಶ್ ಗುಂಡೂರಾವ್ ರವರು ಭಾರಿ ಬಹುಮತದಿಂದ ಆಯ್ಕೆಯಾಗುವುದು ಖಚಿತ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
Comments
Post a Comment