ರಾಜಾಜಿನಗರ ವಾರ್ಡ್-ಕಾಂಗ್ರೆಸ್ ಕಾರ್ಯಕರ್ತರ ಸಭೆ*
*ರಾಜಾಜಿನಗರ ವಾರ್ಡ್-
ಕಾಂಗ್ರೆಸ್ ಕಾರ್ಯಕರ್ತರ
ಸಭೆ*
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಾಜಿನಗರ ವಾರ್ಡ್-99ರ ಕಾಂಗ್ರೆಸ್ ಕಾರ್ಯಕರ್ತರ ವಿಧಾನಸಭೆ ಚುನಾವಣೆಯ ಕಾರ್ಯಕರ್ತರ ಪೂರ್ವಭಾವಿ ಸಭೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಜಿ.ಕೃಷ್ಣಮೂರ್ತಿರವರು ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ರಾಜಾಜಿನಗರ ವಾರ್ಡ್ ಬ್ಲಾಕ್ ಅಧ್ಯಕ್ಷರು, ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು ಕಾರ್ಯಕರ್ತರು ಪಾಲ್ಗೊಂಡಿದ್ದರು.
*ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣರವರು* ಮಾತನಾಡಿ ಕಾಂಗ್ರೆಸ್ ಪಕ್ಷ ನನ್ನನು ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರ ಪ್ರತಿಷ್ಟಿತ ಕ್ಷೇತ್ರ .ನಾನು ಕಳೆದ 30ವರ್ಷಗಳಿಂದ ಪರಿಚಿತವಾದ ಕ್ಷೇತ್ರವಾಗಿದೆ.
130ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಬೇಕು ಎಂದು ನಾಡಿನ ಜನರ ಆಶಯವಾಗಿದೆ.
ಮಹಿಳೆಯ ಸ್ವಾವಲಂಬಿ ಜೀವನಕ್ಕೆ ಪ್ರತಿ ತಿಂಗಳು 2000ನೇರ ಅವರ ಅಕೌಂಟ್ ಮತ್ತು 200ಯೂನಿಟ್ ವಿದ್ಯುತ್ ಹಾಗೂ ನಿರುದ್ಯೋಗ ಯುವ ಸಮೂಹಕ್ಕೆ ನಿರುದ್ಯೋಗ ಭತ್ಯೆ ಮತ್ತು ಹಸಿವಿನಿಂದ ಬಳಲಬಾರದು ಎಂದು ಪ್ರತಿ ವ್ಯಕ್ತಿಗೆ 10ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.
ಇಂತಹ ಯೋಜನೆಯ ಕುರಿತು ಪ್ರತಿ ಮನೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ,ಮನೆಗೆ ತಲುಪಿಸಬೇಕು.
ರಾಜಾಜಿನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.
*ಜಿ.ಕೃಷ್ಣಮೂರ್ತಿರವರು ಮಾತನಾಡಿ* ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ಮಾರ್ಗದರ್ಶನದಲ್ಲಿ ರಾಜಾಜಿನಗರ ವಾರ್ಡ್ ನಲ್ಲಿ ಸಮರ್ಥ, ಸದೃಢವಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷ ನಾಲ್ಕು ಮಹತ್ವಪೂರ್ಣ ಯೋಜನೆಯ ನಾಡಿನ ಜನರಿಗೆ ಕೊಟ್ಟಿದೆ 200ಯೂನಿಟ್ ವಿದ್ಯುತ್ ಉಚಿತ ಮತ್ತು ಮನೆಯ ಯಾಜಮಾನಿಗೆ 2000, ಪ್ರತಿ ವ್ಯಕ್ತಿಗೆ 10ಕೆ.ಜಿ.ಅಕ್ಕಿ, ನಿರುದ್ಯೋಗ ಭತ್ಯೆ ಯೋಜನೆ ಕಾಂಗ್ರೆಸ್ ಪಕ್ಷ ಜನತೆಗೆ ಭರವಸೆ ನೀಡಿದೆ.
ಹಿಂದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಆಡಳಿತದ ಅವಧಿಯಲ್ಲಿ ಜನತೆಗೆ 165ಭರವಸೆ ಈಡೇರಿಸಿದ ದೇಶದ ಮೊಟ್ಟ ಮೊದಲ ಸರ್ಕಾರವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಂ.ಎ.ಆನಂದ್, ವೆಂಕಟೇಶ್,ಕೃಷ್ಣ, ಡಿ.ಲೋಕೇಶ್, ರಾಮು, ಶಿವಣ್ಣ,ಲತಾಗೌಡ ರವರು ಭಾಗವಹಿಸಿದ್ದರು.
Comments
Post a Comment