ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ರವರಿಂದ ಮಹರ್ ಫೌಂಡೇಶನ್ ಉದ್ಘಾಟನೆಹಾಗೂ ಸನ್ಮಾನ ಸಮಾರಂಭ"
"ಚಿಕ್ಕಬಳ್ಳಾಪುರದಲ್ಲಿ ಸಚಿವ
ಸುಧಾಕರ್ ರವರಿಂದ ಮಹರ್ ಫೌಂಡೇಶನ್
ಉದ್ಘಾಟನೆಹಾಗೂ ಸನ್ಮಾನ
ಸಮಾರಂಭ"
ಚಿಕ್ಕಬಳ್ಳಾಪುರ ನಗರದ ಡಾ. ಬಿ. ಆರ್.ಅಂಬೇಡ್ಕರ್ ಭವನದಲ್ಲಿ ಅಯೋಜಿಸಿದ್ದ ಮಹರ್ ಫೌಂಡೇಷನ್ ನ ಉದ್ಘಾಟನೆ ಹಾಗೂ ಮಹರ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸನ್ಮಾನ್ಯ ಸಚಿವರು ಆದ ಡಾ.ಕೆ. ಸುಧಾಕರ್ ರವರು ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯ ಸಾಧಕರಾದ ಶಿಡ್ಲಘಟ್ಟ ತಾಲ್ಲೂಕು ಪಿಂಡ ಪಾಪನಹಳ್ಳಿ ಗ್ರಾಮದ ಹಿರಿಯ ಜಾನಪದ ಕಲಾವಿದರಾದ ಪದ್ಮಶ್ರೀ ಪುರಸ್ಕೃತರು ಆದ ಶ್ರೀ ಮುನಿ ವೆಂಕಟಪ್ಪ,ಹಾಗೂ ಗುಡಿಬಂಡೆಯ ಮುಖವೀಣೆ ಕಲಾವಿದರಾದ ಶ್ರೀ ಆಂಜನಪ್ಪ ಮತ್ತು ಇತರ ಗಣ್ಯರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹರ್ ಫೌಂಡೇಶನ್ ಅಧ್ಯಕ್ಷರು ಆದ ಜೆ. ನಾಗರಾಜ್ ರವರು ನಗರಸಭೆ ಸದಸ್ಯರು ಚಿಕ್ಕಬಳ್ಳಾಪುರ, ನಗರಸಭೆಯ ಅಧ್ಯಕ್ಷರಾದ ಆನಂದ್ ರೆಡ್ಡಿ ಬಾಬು ರವರು, ಚಿಕ್ಕ ಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೃಷ್ಣಮೂರ್ತಿಯವರು, ಹಾಗೂ ಸದಸ್ಯರುಗಳು, ಬಳ್ಳಾಪುರ ಬಿಜೆಪಿ ಹಿರಿಯ ಮುಖಂಡರುಗಳು ನಾಯಕರಗಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎನ್. ಶೋಭಾ
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಚಿಕ್ಕಬಳ್ಳಾಪುರ ಜಿಲ್ಲೆ.
Comments
Post a Comment