ಕಂಪ್ಲಿ ಕಾಂಗ್ರೆಸ್ ಮುಖಂಡ ರಾಜುನಾಯ್ಕ್ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆ.
ಕಂಪ್ಲಿ ಕಾಂಗ್ರೆಸ್ ಮುಖಂಡ ರಾಜುನಾಯ್ಕ್ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆ.
ಬಳ್ಳಾರಿ ಜಿಲ್ಲೆಯಿಂದ ನಾಲ್ಕೈದು ಅಭ್ಯರ್ಥಿಗಳು ಗೆಲುವು ಸಾಧ್ಯತೆ; ಎಚ್.ಡಿ.ಕುಮಾರಸ್ವಾಮಿ.
ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಜು ನಾಯ್ಕ್ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು
ಅವರೊಂದಿಗೆ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು ಕೂಡ ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ತಿಪೇಸ್ವಾಮಿ, ಶಾಸಕರಾದ ನಾಡಗೌಡ, ರಾಜಾವೆಂಕಟಪ್ಪ ನಾಯಕ್ ಮತ್ತಿತರರು ಹಾಜರಿದ್ದರು.
ಸೇರ್ಪಡೆಗೊಂಡ ರಾಜನಾಯಕ್ ಮಾತನಾಡಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾಯಕ ಸಮುದಾಯ ಸಂಘಟಿಸಲು ಪ್ರಯತ್ನ ನಡೆಸಿದ್ದೇನೆ. 15 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದು ಕೊಂಡು ದುಡಿದಿದ್ದೇನೆ. ಆದರೆ ಆ ಪಕ್ಷಕ್ಜೆ ವಿದ್ಯಾವಂತರು, ಪ್ರಜ್ಞಾವಂತರು ಬೇಡವಾಗಿದೆ.ಕೇವಲ ಹೊಡಿ ಬಡಿಯುವವರು ಬೇಕಾಗಿದೆ. ಮುಂಬರುವ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.
ಸಿ.ಎಂ.ಇಬ್ರಾಹಿಂ ಮಾತನಾಡಿ, ಜನತಾದಳಕ್ಕೆ ಮಾಡುವ ಸೇವೆ ಸಕಲ ಮಾನವ ಸೇವೆ ಮಾಡಿದ ಹಾಗೆ.ಕಂಪ್ಲಿಯಲ್ಲಿರುವ ರೌಡಿಸಂ ರಾಜಕಾರಣ ಕೊನೆಗೊಳಬೇಕು. ಈ ನಿಟ್ಟಿನಲ್ಲಿ ಪಕ್ಷದ ಗೆಲುವಿಗೆ ತಾವೆಲ್ಲ ಶ್ರಮಿಸಬೇಕು ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ನಾಯಕತ್ವ ಕೊರತೆಯಿ?ದಾಗಿ ಹಿನ್ನಡೆಯಾಗಿತ್ತು. ಈಗ ರಾಜುನಾಯ್ಕ್ ಅವರ ಸೇರ್ಪಡೆ ಯಿಂದ ಈಗ ಶಕ್ತಿ ಬಂದಿದೆ.ಸಂಡೂರಿನಲ್ಲಿ ಚನ್ನಾಗಿ ಸಂಘಟನೆಯಾಗುತ್ತಿದೆ. ನೀವೆಲ್ಲಾ ಮನಸ್ಸು ಮಾಡಿದರೆ ಈ ಭಾರಿ ಬಳ್ಳಾರಿ ಜಿಲ್ಲೆಯಿಂದ ನಾಲ್ಕೈದು ಮಂದಿ ಗೆಲುವು ಸಾಧಿಸಬಹುದು.ಇದು ನನ್ನ ಗುರಿ ಯಾಗಿದೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದು ಮನವಿ ಮಾಡಿದರು.
Comments
Post a Comment