ಶಿಡ್ಲಘಟ್ಟ- ವಿಜಯ ಸಂಕಲ್ಪ ಯಾತ್ರೆ
ಶಿಡ್ಲಘಟ್ಟ- ವಿಜಯ ಸಂಕಲ್ಪ ಯಾತ್ರೆ
ಶಿಡ್ಲಘಟ್ಟ- ವಿಜಯ ಸಂಕಲ್ಪ ಯಾತ್ರೆ ಶಿಡ್ಲ ಘಟ್ಟ ಕ್ಷೇತ್ರಕ್ಕೆ
ಕಾಲಿಟ್ಟಿದ್ದು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮ ಚಂದ್ರ ಗೌಡರವರು ಅದ್ದೂರಿ ಸ್ವಾಗತ ಕೊರಿದ್ದಾರೆ. ಬೃಹತ್ ಹೂಮಾಲೆಯನ್ನು ಸಮರ್ಪಿಸಿ ರಥಯಾತ್ರೆ ಗೆ ಸ್ವಾಗತ ಕೋರಿದರು.. ಇದೇ ವೇಳೆ ಮಾತನಾಡಿದ ಸೀಕಲ್ ರಾಮ ಚಂದ್ರ ಗೌಡ ರು ಶಿಡ್ಲ ಘಟ್ಟ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುವುದು ಗೊತ್ತಿದೆ.ರಾಜಣ್ಣ ಶಾಸಕರ ನಂತರ ಅಭಿವೃದ್ಧಿ ಸಂಪೂರ್ಣ ಕುಂಟಿತ ಗೊಂಡಿದೆ, ಇದರ ಹಿನ್ನೆಲೆ ಐದು ವರ್ಷ ಅಧಿಕಾರ ಕೊಟ್ಟರೆ ಅಭಿವೃದ್ಧಿ ಏನೂ ಎಂಬುವುದು ತೋರಿಸಲಾಗುತ್ತೆ. ನಾನು ಮೋದಿಯವರ ದೊಡ್ಡ ಅಭಿಮಾನಿ ಅದರಂತೆ ಅವರನ್ನು ಬೆಂಬಲಿಸಿ ಇಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಕ್ಷೇತ್ರಕ್ಕೆ ಬಂದಿದ್ದು ಒಂದು ಬಾರಿ ಬಿಜೆಪಿ ಗೆ ಮತ ಕೊಟ್ಟು ಶಿಡ್ಲಘಟ್ಟ ಅಭಿವೃದ್ಧಿ ಗೆ ಸಹಕಾರ ಕೊಡಬೇಕೆಂದು ಸೀಕಲ್ ರಾಮ ಚಂದ್ರ ಗೌಡರು ಜನತೆಯನ್ನು ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿಯೇ ಭರವಸೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಇಂದು ನಡೆದ 'ವಿಜಯ ಸಂಕಲ್ಪ ಯಾತ್ರೆ'ಯಲ್ಲಿ , ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು ಶ್ರೀ ಶ್ರೀ ರಾಮಲಿಂಗಪ್ಪ ನವರು ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಆರ್. ಅಶೋಕ್ ಕಂದಾಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಮಾನ್ಯ ಡಾ.ಕೆ.ಸುಧಾಕರ್ ರವರು, ಶ್ರೀ ಮುನಿಸ್ವಾಮಿ ರವರು, ಎಸ್. ಸಿ ಮೋರ್ಚಾ ಅಧ್ಯಕ್ಷರಾದ ವೆಂಕಟೇಶ್ ರವರು, ಶ್ರೀ ಸಚ್ಚಿದಾನಂದ ಮೂರ್ತಿ ರವರು ಹಾಗೂ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು , ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ಚಿಕ್ಕಬಳ್ಳಾಪುರ ಜಿಲ್ಲೆ ಶೋಭಾ n ಪಬ್ಲಿಕ್ ರಿಪೋರ್ಟ್ ವರದಿಗಾರರು
Comments
Post a Comment