ಪಂಚಮಸಾಲಿ ಮೀಸಲಾತಿ ನಿರಂತರ ಹೋರಾಟಕ್ಕೆ ಪ್ರಥಮ ಜಯ* :
ಪಂಚಮಸಾಲಿ ಮೀಸಲಾತಿ
ನಿರಂತರ ಹೋರಾಟಕ್ಕೆ
ಪ್ರಥಮ ಜಯ
*ಪಂಚಮಸಾಲಿ ಮೀಸಲಾತಿ ನಿರಂತರ ಹೋರಾಟಕ್ಕೆ ಪ್ರಥಮ ಜಯ* :
*ಹೋರಾಟಕ್ಕೆ ತಾತ್ಕಾಲಿಕ ವಿರಾಮ ಹಾಗೂ ಚುನಾವಣೆ ನಂತರ ಮೀಸಲಾತಿ ಹೆಚ್ಚಳಗಾಗಿ ಕೆಂದ್ರ ಒಬಿಸಿಗಾಗಿ ಹೋರಾಟ : ಬಸವ ಜಯಮೃತ್ಯುಂಜಯ ಶ್ರೀಗಳು*...
*ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ಚ್ 25 ರಂದು 71 ನೇ ದಿನದ ಸತ್ಯಾಗ್ರಹ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯ ಕಾರ್ಯ ಕಾರಿನೀಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು*
*ನಾವು ಎರಡು ವರ್ಷದ ಎರಡು ತಿಂಗಳಿಂದ , ಪಂಚಮಸಾಲಿ ಲಿಂಗಾಯತ ಗೌಡ , ಮಲೆಗೌಡ ದೀಕ್ಷಾ ಲಿಂಗಾಯತ, ಮಕ್ಕಳಿಗಾಗಿ ಶ್ರೀಪೀಠವನ್ನು ಬಿಟ್ಟು ಪಾದಯಾತ್ರೆ , ಸಮಾವೇಶ , ಸತ್ಯಾಗ್ರಹ ಮೂಲಕ ಐತಿಹಾಸಿಕ ಹೋರಾಟ ಮಾಡುತ್ತಾ ಬರುತ್ತಿದ್ದೇವೆ*.
*ನಾವು ಕೇಳಿದ್ದು ಶೇ 15 ರ 2ಎ ಮೀಸಲಾತಿ. ಅದರೆ ಸರ್ಕಾರ ಶೇ 7 ರ 2d ಎಂಬ ನೂತನ ಮೀಸಲಾತಿ ಸೃಷ್ಟಿ ಮಾಡಿತು*
*2ಎ ಮೀಸಲಾತಿ ಪಡೆಯಲು ಉಚ್ಚಾ ನ್ಯಾಯಾಲಯದಲ್ಲಿ ತಡೆ ಇರುವುದರಿಂದ 2d ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಸರ್ಕಾರ ಶೇ 7 ರ ಮೀಸಲಾತಿ ಕೊಟ್ಟಿರುವುದು , ನಮ್ಮ ನಿರಂತರ ಹೋರಾಟಕ್ಕೆ ಪ್ರಥಮ ಐತಿಹಾಸಿಕ ಜಯವಾಗಿದೆ*.
*ಆದ್ದರಿಂದ ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ*.
*ಚುನಾವಣೆ ನಂತರ ಮೀಸಲಾತಿ ಹೆಚ್ಚಳಕ್ಕಾಗಿ ಹಾಗೂ ಎಲ್ಲಾ ಲಿಂಗಾಯತರ ಒಬಿಸಿ ಮೀಸಲಾತಿಗಾಗಿ ಹೋರಾಟ ಮುಂದುವರೆಸಲಾಗುವುದು ಎಂದು ಹೋರಾಟದ ಮುಂಚೂಣಿಯ ನೇತೃತ್ವವಹಿಸಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು*.
*ನಮ್ಮ ಹೋರಾಟದಿಂದ ಎಲ್ಲಾ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರೆ ಸಮಾಜಗಳಿಗೆ ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ*.
*ನ್ಯಾಯಾಲಯದ ತಡೆಯಾಜ್ನೆ ತೆರವುಗೊಳಿಸಿ ಮೀಸಲಾತಿ ನೀಡುವಂತೆ ಪ್ರಯತ್ನಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ಹಾಗೂ ಆದೇಶ ಪಾಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳು*.
*ನಮ್ಮ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಿಗೆ , ಕಾರ್ಯದರ್ಶಿ ಎಚ್ ಎಸ್ ಶಿವಶಂಕರ, ವಿನಯ ಕುಲಕರ್ಣಿ, ಸಚಿವ ಸಿಸಿ ಪಾಟೀಲ್ , ಎಬಿ ಪಾಟೀಲ್ , ಸಿದ್ದುಸವದಿ , ಅರವಿಂದ ಬೆಲ್ಲದ್ ಸಂಸದರಾದ ಕರಡಿ ಸಂಗಣ್ಣ , ಈರಣ್ಣ ಕಡಾಡಿ, ಲಕ್ಷ್ಮಿ ಹೆಬ್ಬಳಕಾರ್ , ಕೇಂದ್ರ ಸರ್ಕಾರ ಸಚಿವರುಗಳಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಪಕ್ಷಗಳ ಹಾಲಿ ಮಾಜಿ ಜನಪ್ರತಿನಿಧಿಗಳಿಗೆ , ಕಾನೂನು ತಜ್ಞ ದಿನೇಶ್ ಪಾಟೀಲ್ , ಮಲೆಗೌಡ ಲಿಂಗಾಯತ ಗೌಡ ದೀಕ್ಷಾ ಲಿಂಗಾಯತ ಮುಖಂಡರುಗಳಿಗೆ , ನಾಡಿನ ಎಲ್ಲಾ ಪದಾಧಿಕಾರಿಗಲಿಗೆ , ವಿವಿಧ ಘಟಕಗಳ ಪದಾಧಿಕಾರಿಗಲಿಗೆ , ಮಾಧ್ಯಮದವರಿಗೆ ಹಾಗೂ ಸಮಾಜದ ಪ್ರತಿಯೊಬ್ಬನಿಗೂ ಅಭಿನಂದನೆಗಳು*.
*ಸರ್ಕಾರದ ಆದೇಶ ಸಿಕ್ಕ ಬಳಿಕ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಗಳನ್ನು ಭೇಟಿಯಾಗುತ್ತೇನೆ*
*ಸರ್ಕಾರದ ಆದೇಶ ಸಿಗುವವರೆಗೂ ಇಲ್ಲೇ ಇದ್ದು ಆದೇಶ ಸಿಕ್ಕಮೇಲೆ ಬೆಂಗಳೂರು ಬಿಟ್ಟು ಕೂಡಲ ಸಂಗಮ ಕ್ಷೇತ್ರಕ್ಕೆ ತೆರಳುತ್ತೆನೆ*
*ಸರ್ಕಾರದ ಆದೇಶ ಪ್ರತಿ ಸಿಕ್ಕ ಮೇಲೆ ಎಲ್ಲಾರೂ ವಿಜಯೋತ್ಸವ ಮಾಡಿ*
*ಸದ್ಯ ಈ ಹೋರಾಟವನ್ನು ವಿರಾಮಗೊಳಿಸಿ ತಾತ್ಕಾಲಿಕವಾಗಿ ನಿಲ್ಲಿಸುತ್ತೇನೆ ಎಂದು ಶ್ರೀಗಳು ಹೇಳಿದರು.ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ಹೋಗಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ನಮ್ಮ ಸಮಾಜದ ಪ್ರತಿಯೊಬ್ಬರು ಬುತ್ತಿಕಟ್ಟಿಕೊಂಡು ಬಂದು ನನ್ನ ಜೊತೆ ಹೋರಾಟ ಮಾಡಿದರು ಎಂದು ಭಾವುಕರಾಗಿ ಮಾತಾನಾಡಿದ ಸ್ವಾಮೀಜಿ ಕಣ್ಣೀರು ಹಾಕಿದರು* . *ನಮ್ಮ ಹೋರಾಟಕ್ಕೆ ಸಿದ್ದಗಂಗಾ ಬಿಟ್ಟರೆ ಉತ್ತರ ಕರ್ನಾಟಕದ ಕೆಲವು ಮಠ ಬಿಟ್ಟರೆ ಬೇರೆ ಯಾವ ಮಠಗಳು ನಮಗೆ ಬೆಂಬಲ ನೀಡಲಿಲ್ಲ* *ಎಲ್ಲರ ಅಭಿಪ್ರಾಯ ಕೇಳಿದಾಗ ನಮ್ಮ ಎರಡೂವರೆ ವರ್ಷದ ಹೋರಾಟದಲ್ಲಿ ಮೊದಲು ಸಾಧನೆ ಮಾಡಿದ್ದೇವೆ*
*ಮುಂದೆ ಎಲ್ಲಾ ಲಿಂಗಾಯಿತ ಸಮಾಜವನ್ನು ಕೇಂದ್ರ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ
ಹೋರಾಟ ಮಾಡುತ್ತೇವೆ*
*ನಮಗೆ ಪೂರ್ಣ ಊಟ ಸಿಗದೇ ಇರಬಹುದು ಆದರೆ ಮೀಸಲಾತಿಯ ವ್ಯಾಕ್ಸಿನ್ ರೀತಿ ಸಿಕ್ಕಿದೆ ಎಂದರು*.
Comments
Post a Comment