ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ* "

 " *ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ* "




 ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ 2023 ನೇ ಸಾಲಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಎಲ್ಲಾ ಅಂಗನವಾಡಿ, ಸರ್ಕಾರಿ ಶಾಲೆ, ಖಾಸಗಿ ಶಾಲೆ, ಹಾಗೂ ಕಾಲೇಜುಗಳಲ್ಲಿ *ಒಂದು ವರ್ಷದಿಂದ 19 ವರ್ಷದ ಒಳಗಿನ ಮಕ್ಕಳಿಗೆ*  " *ಆಲ್ಬೆಂಡಜೋಲ್* " ಮಾತ್ರೆ ನೀಡುವುದರ ಮೂಲಕ ಆಚರಿಸಲಾಯಿತು.


 ವಿಶೇಷವಾಗಿ ಇನ್ನು ಶಾಲೆಗೆ ಸೇರದ  ಮಕ್ಕಳಿಗೆ ಹಾಗೂ ಶಾಲೆಯನ್ನು ತೊರೆದ ಮಕ್ಕಳಿಗೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ವಲಸೆ ಬಂದಿರುವ ಕುಟುಂಬಗಳ  ಮಕ್ಕಳಿಗೆ *ತಾಲೂಕು ಹಿರಿಯ  ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಲತಾ , ತಾಲೂಕು ಆಶಾ ಮೇಲ್ವಿಚಾರಕರಾದ ಶ್ರೀಮತಿ ಮಹಾದೇವಿ* ರವರ ಮೇಲ್ವಿಚಾರಣೆಯಲ್ಲಿ  ಪ್ರತ್ಯೇಕ ತಂಡಗಳನ್ನು ರಚಿಸಿ ಮಾತ್ರೆಗಳನ್ನು ನೀಡಲಾಯಿತು.


 ಹೊಸಕೋಟೆ ತಾಲೂಕಿನಲ್ಲಿ ಅಂಗನವಾಡಿ,ಶಾಲೆ, ಕಾಲೇಜುಗಳಲ್ಲಿ ದಾಖಲಾದ  ಒಂದರಿಂದ 19 ವರ್ಷದ ಸುಮಾರು *70,794* ಮಕ್ಕಳು ಹಾಗೂ ದಾಖಲಾಗದ *22,702* ಮಕ್ಕಳು ಸೇರಿದಂತೆ *ಒಟ್ಟು 93,787* ಮಕ್ಕಳಿಗೆ ಜಂತು ಹುಳು ನಿವಾರಣ ಮಾತ್ರೆಗಳನ್ನು ನೀಡುತ್ತಿರುವುದಾಗಿ  *ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್* ತಿಳಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims