ಓಬದೇನಹಳ್ಳಿ ಯಲ್ಲಿ ಕಾರ್ಮಿಕರ ವಸತಿ ಸಮಚ್ಚಯ ಶಮಿಕ್ ನಿವಾಸ್ ಕಟ್ಟಡ ಉದ್ಘಾಟನೆ "
" ಓಬದೇನಹಳ್ಳಿ ಯಲ್ಲಿ
ಕಾರ್ಮಿಕರ ವಸತಿ
ಸಮಚ್ಚಯ ಶಮಿಕ್ ನಿವಾಸ್
ಕಟ್ಟಡ ಉದ್ಘಾಟನೆ "
ಓಬದೇನಹಳ್ಳಿ ಯಲ್ಲಿ ಕಾರ್ಮಿಕರ ವಸತಿ ಸಮಚ್ಚಯ ಶಮಿಕ್ ನಿವಾಸ್ ಕಟ್ಟಡ ಉದ್ಘಾಟನೆ "
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಓ ಬದೇವನಹಳ್ಳಿ ನೂತನವಾಗಿ ನಿರ್ಮಿಸಿರುವ ಬೃಹತ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಚಾಲನೆ ನೀಡಿದರು. ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ್ ಪಾಷ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ತೇಜಸ್ ಕುಮಾರ್, ದೊಡ್ಡಬಳ್ಳಾಪುರ ಶಾಸಕರಾದ ಟಿ ವೆಂಕಟರಮಣಯ್ಯ ಕಾರ್ಯದರ್ಶಿ ಗುರುಪ್ರಸಾದ್, ಮಂಡಳಿ ಜಂಟಿ ಕಾರ್ಯದರ್ಶಿ ಡಾ. ಶಿವಪುತ್ರ ಬಾಬುರಾವ್, ಕಲ್ಯಾಣ ಆಯುಕ್ತ ಟಿ ಆಂಜನೇಯ ಮತ್ತಿತರರು ಮತ್ತಿತರರು ಭಾಗವಹಿಸಿದ್ದರು,
ಶ್ರಮಿಕರಿಗೆ ಗೌರವದ ಬದುಕು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅಭಿಮತ ವಲಸೆ ಕಾರ್ಮಿಕರ ವಸತಿ ಸಮಸ್ಯೆ ನಿವಾರಣೆಗೆ ಪ್ರಮಿಕ್ ನಿವಾಸ್ ಯೋಜನೆ ಜಾರಿ ಮಾಡಿದ್ದು ಈ ಯೋಜನೆಯಿಂದ ಶ್ರಮಿಕ ವರ್ಗ ಗೌರವದ ಬದುಕು ಕಂಡುಕೊಳ್ಳಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
ದೇಶದಲ್ಲೇ ಮೊದಲ ಬಾರಿಗೆಶ್ರಮಿಕ್ ನಿವಾಸ್ ಯೋಜನೆ ಜಾರಿ ದೊಡ್ಡಬಳ್ಳಾಪುರದ ಓಬದೇನ ಹಳ್ಳಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮಹತ್ವಕಾಂಕ್ಷೆಯ ಶ್ರಮಿಕ್ ನಿವಾಸ್ ಯೋಜನೆಯಡಿ ನಿರ್ಮಿಸಲಾದ ಬೃಹತ್ ಕಟ್ಟಡ ಉದ್ಘಾಟನೆ ನೆರವೇರಿಸಿ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ಮಾತನಾಡಿದರು. ಸಿಎಂ ಮಾರ್ಗದರ್ಶನದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಮಾಡಲಾಗಿದೆ. ಈ ಯೋಜನೆ ಜಾರಿಯಿಂದ ರಾಜ್ಯ ಮತ್ತು ದೇಶದ ಘನತೆ ಹೆಚ್ಚಲಿದೆ. ವಲಸೆ ಕಾರ್ಮಿಕರಲ್ಲೂ ಭರವಸೆ ಮೂಡಲಿದೆ ಎಂದರು.ಸೈನಿಕರು ಮತ್ತು ರೈತರು ಮತ್ತು ಶ್ರಮಿಕ ವರ್ಗ ನೆಮ್ಮದಿಯಿಂದ ಇದ್ದರೆ ದೇಶದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಹೀಗಾಗಿ ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕಾಗಿ ಹಲವು ಯೋಜನೆಯನ್ನು ರೂಪಿಸಿದೆ ಎಂದರು.
ಕಾರ್ಮಿಕರಿಗೆ ಹಲವು ಯೋಜನೆ 2006ರ ಕಾನೂನಿನಂತೆ ರಸ್ತೆ, ಮನೆ, ಬೃಹತ್,, ವಸತಿಗೃಹ, ಸೇರಿ ಯಾವುದೇ ನಿರ್ಮಾಣ ಆಗಬೇಕಿದ್ದರೆ ನಿರ್ಮಾಣಕ್ಕೆ ಮುನ್ನ ಶೇಕಡ ಒಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು ತಪ್ಪಿದ್ದರೆ ಕ್ರಿಮಿನಲ್ ಮಖದಲ್ಲಿ ಬಿಡಲು ಅವಕಾಶ ಇರುತ್ತದೆ ಎಂದು ಸಚಿವರು ತಿಳಿಸಿದರು. ಈ ಹಣದಲ್ಲಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಹಲವು ಯೋಜನೆಗಳ ಸವಲತ್ತುಗಳನ್ನು ನೀಡುತ್ತಿದೆ ಎಂದರು. ಕೈಗಾರಿಕಾ ಪ್ರದೇಶಗಳು ಸೇರಿ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿಈ ಯೋಜನೆ ಅಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು 1.38 ಕೋಟಿ ರೂ ವೆಚ್ಚದಲ್ಲಿ ಶಿವಮೊಗ್ಗ ಕಲಬುರ್ಗಿ ದಾವಣಗೆರೆ ಬೆಳಗಾವಿ ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯೋಜನೆ ಪ್ರಗತಿ ಅಂತದಲ್ಲಿದೆ ಅದರಲ್ಲಿ 40 ಕೋಟಿ ರೂ ವೆಚ್ಚದ ಈ ವಸತಿ ಸಮುಚ್ಚಯ ಯೋಜನೆಯಲ್ಲೇ10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಮೊದಲ ಹಂತದ ಸಮುಚ್ಚಯ ಕಾಮಗಾರಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೊಳಿಸಲಾಗಿದೆ ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮೂಲ ಸೌಕರ್ಯಕ್ಕೆ ಆದ್ಯತೆ ವಸತಿ ಸಮೀಕ್ಷೆಗಳಲ್ಲಿ ಎಲ್ಲಾ ಬಗೆಯ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದ್ದು ಇದನ್ನು ಕಾರ್ಮಿಕ ಇಲಾಖೆ ನಿರ್ವಹಿಸಲಿದೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರಿಗೆ ಈ ವಸತಿ ಸೌಲಭ್ಯ ದೊರೆತಿದೆ ಎಂದು ಸಚಿವರಾದ ಶಿವರಾಂ ಹೆಬ್ಬಾರ್ ತಿಳಿಸಿದರು.
ಮುಂದಿನ ಹಂತಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಾರಿ ಯೋಜನೆ ಜಾರಿಗೆ ಆಗುತ್ತೆ ಎಂದು ಸಚಿವರು ತಿಳಿಸಿದರು.ರಾಜ್ಯದ ಎಲ್ಲಾ ವಲಸೆ ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕೆಂದು ಸಿಎಂ ಆಶಯವಾಗಿದೆ ಎಂದು ತಿಳಿಸಿದರು.
ಆರ್.ನಾಗರಾಜ್
ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment