ಇಂದಿರಾಗಾಂಧಿ ವಸತಿ ಶಾಲೆನೂತನಕಟ್ಟಡ ಉದ್ಘಾಟನಾ ಸಮಾರಂಭ "
"ಇಂದಿರಾಗಾಂಧಿ ವಸತಿ
ಶಾಲೆನೂತನಕಟ್ಟಡ
ಉದ್ಘಾಟನಾ ಸಮಾರಂಭ
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಹೋಬಳಿ ಗೆಗ್ಗಿರಾಳ್ಳಹಳ್ಳಿ ಗ್ರಾಮದಲ್ಲಿ ನೂತನ ವಸತಿ ಶಾಲೆಯ ಕಟ್ಟಡ ವನ್ನು ಸನ್ಮಾನ್ಯ ಜನಪ್ರಿಯ ಶಾಸಕರಾದ ಸುಬ್ಬಾರೆಡ್ಡಿರವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಶಾಸಕರು ಸುಮಾರು ಎರಡು ಮೂರು ವರ್ಷದಿಂದ ಜಾಗ ಹುಡುಕಿ ಸುಮಾರು 13 ಎಕರೆ ಜಮೀನಿನಲ್ಲಿ ಬೃಹತ್ ಸು ಸಚ್ಚಿತವಾದ ವಸತಿ ಶಾಲೆಗೆ ಯೋಗ್ಯವಾದ ಕಟ್ಟಡ ನಿರ್ಮಿಸಲಾಗಿದೆ. ಸುಮಾರು 32ಕೋಟಿ ವೆಚ್ಚದಲ್ಲಿ ವಸತಿ ಶಾಲೆ ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಶಾಲಾ ಮಕ್ಕಳಿಗೆ ಒಳ್ಳೆಯ ಸಂಪಾದ ವಾತಾವರಣ ಸುಸಜ್ಜಿತವಾದ ಕೊಠಡಿ, ಭೋಜನ ಶಾಲೆ, ಶೌಚಾಲಯ, ಆಟದ ಮೈದಾನ ಹೀಗೆ ಸೌಲಭ್ಯಗಳನ್ನು ಒಳಗೊಂಡ ಒಂದು ಒಳ್ಳೆಯ ವಿಶ್ವವಿದ್ಯಾನಿಲಯದ ಮಾದರ ಕಟ್ಟಡ ನಿರ್ಮಾಣ ಆಸೆ ಇತ್ತು, ಅದೇ ರೀತಿ ಕಟ್ಟಡ ನಿರ್ಮಿಸಲಾಗಿದೆ, ಈ ಒಂದು ಜಾಗದಲ್ಲಿ ಮಕ್ಕಳ ಶೈಕ್ಷಣಿ ಅಭಿವೃದ್ಧಿಗೆ ಆದ್ಯತೆ, ಬಡವರ ಮಕ್ಕಳಿಗೆ ವಿದ್ಯಾದಾನ ಮಾಡಬೇಕು,ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸುವ ಸಲುವಾಗಿ ಈ ವಸತಿ ಶಾಲೆ ನಿರ್ಮಾಣವಾಗಿದೆ, ಈ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಸೋಮನಹಳ್ಳಿ ಹೋಬಳಿಯ ಜನತೆ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ ಈ ವಸತಿ ಶಾಲೆಯ ಮಕ್ಕಳಿಗೆ ಭಗವಂತ ವಿದ್ಯೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಶಾಸಕರಾದ ಸುಬ್ಬಾರೆಡ್ಡಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಸಿಬ್ಬಂದಿ ವರ್ಗದವರು, ಮಾಜಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಅಧ್ಯಕ್ಷರುಗಳು ಸದಸ್ಯರುಗಳು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಕಾಂಗ್ರೆಸ್ಸಿನ ಕಾಂಗ್ರೆಸ್ಸಿನ ನಾಯಕರು, ಮುಖಂಡರುಗಳು, ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎನ್. ಶೋಭಾ
ಚಿಕ್ಕಬಳ್ಳಾಪುರ ಜಿಲ್ಲೆ.
ವರದಿಗಾರರು ಪಬ್ಲಿಕ್ ರಿಪೋರ್ಟ್ ನ್ಯೂಸ್
Comments
Post a Comment