*ವೀರಶೈವ ಲಿಂಗಾಯಿತ ಸಮಾಜಕ್ಕೆ ಪ್ರಾತಿನಿದ್ಯ ನೀಡದೇ ಹೋದರೆ ತಕ್ಕ ಪಾಠ ಕಲಿಸುವ ಪ್ರತಿಜ್ಞೆ*

 *ವೀರಶೈವ ಲಿಂಗಾಯಿತ ಸಮಾಜಕ್ಕೆ ಪ್ರಾತಿನಿದ್ಯ ನೀಡದೇ ಹೋದರೆ ತಕ್ಕ ಪಾಠ ಕಲಿಸುವ ಪ್ರತಿಜ್ಞೆ*


*ನಮ್ಮ ಹಕ್ಕು ಭಿಕ್ಷೆಯಲ್ಲ*

ರಾಜಾಜಿನಗರ ,ಶಿವನಗರದಲ್ಲಿ ಸಿದ್ದಗಂಗಾ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಬಳಗ ಮತ್ತು ವಿಶ್ವ ವೀರಶೈವ ಯುವ ವೇದಿಕೆ ವತಿಯಿಂದ ಪ್ರಸ್ತುತ ಕರ್ನಾಟ ರಾಜ್ಯ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿದ್ಯ ದೊರಕಿಕೊಡಬೇಕೆಂದು ಅಗ್ರಹಿಸಿ ಸಭೆ ಏರ್ಪಡಿಸುತ್ತಿದ್ದರು.

ಕ್ರಾಂತಿಯೋಗಿ ಶ್ರೀ ಬಸವೇಶ್ವರರ ಬಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ, ಸಭೆಗೆ ಚಾಲನೆ ನೀಡಿದರು.

ಸಮಾಜದ ಮುಖಂಡರಾದ ಗುರುಸ್ವಾಮಿ, ವಿಶ್ವನಾಥ, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರು ಮಹಂತೇಶ್ ಪಾಟೀಲ್, ಶೋಭಾ, ಪ್ರಶಾಂತ್ ಕಲ್ಲೂರು,ಮಹಾಲಿಂಗಪ್ಪ, ಸಾಹಿತಿ ಮಹದೇವಪ್ಪ ಚಿಕ್ಕಹೆಜ್ಜಾಜಿ, ರಾಹುಲ್ ಮಲ್ಲಿಕಾರ್ಜುನ್, ಡಾ.ನಾಗರಾಜ್ ರವರು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಜನಸಂಖ್ಯೆ 1ಕೋಟಿ 50ಲಕ್ಷ ಜನರು ಇದ್ದಾರೆ.

ನಮ್ಮಲ್ಲಿ ಭೇದಬಾವವಿಲ್ಲ , ವೀರಶೈವ ಲಿಂಗಾಯಿತರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಆನ್ಯಾಯವಾದಗ ನಾವು ಸುಮ್ಮನೆ ಇರಲು,ಕೂರಲು ಬರುವುದಿಲ್ಲ.

ಬೆಂಗಳೂರುನಗರ 28ವಿಧಾನಸಭಾ ಕ್ಷೇತ್ರದಲ್ಲಿ 25ಲಕ್ಷಕ್ಕೂ ಹೆಚ್ಚು ಜನರು ವೀರಶೈವ ಲಿಂಗಾಯಿತ ವಾಸವಿದ್ದಾರೆ.

ನಮ್ಮ ಸಮುದಾಯ ಟಿಕೇಟು ಕೇಳಿದರೆ ನಾನ ಕಾರಣ ಹೇಳಿ ಟಿಕೇಟು ತಪ್ಪುವುಂತೆ ಮಾಡುತ್ತಾರೆ.

1956ರಿಂದ ಇದುವರಗೆ ಬೆಂಗಳೂರುನಗರದಲ್ಲಿ ವಿಧಾನಸಭಾ ಚುನಾವಣೆ ವೀರಶೈವ ಲಿಂಗಾಯಿತರಿಗೆ ಟಿಕೇಟು ನೀಡಿಲ್ಲ ಅದು ಎಲ್ಲ ಪಕ್ಷದವರಿಗೆ ಆನ್ವಯವಾಗುತ್ತದೆ.

ನಮ್ಮ ಸಮುದಾಯ ಶಿಕ್ಷಣ, ಅನ್ನದಾಸೋಹದಲ್ಲಿ ಮಹತ್ವವಾದ ಕ್ರಾಂತಿ ತಂದು ಎಲ್ಲ ಸಮಾಜವನ್ನು ಮುನ್ನೇಡೆಸಿಕೊಂಡು ಹೋಗುತ್ತಿದೆ.

ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ನಾಲ್ಕು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ರಾಜಾಜಿನಗರ, ಗೋವಿಂದರಾಜನಗರ ಮತ್ತು ವಿಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ನೀಡಬೇಕು ಎಂಬ ಒತ್ತಾಯ ಪಡಿಸಿದರು.

ದೇ ರೀತಿಯಲ್ಲಿ ನಮ್ಮ ಬೇಡಿಕೆಗಳಪ ಈಡೇರಿಕೆಯಾಗದಿದ್ದರೆ ಚುನಾವಣೆಯಲ್ಲಿ ನಮ್ಮ ಸಮುದಾದ ಒಗ್ಗಟ್ಟಾಗಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಎಲ್ಲ ಮುಖಂಡರುಗಳು ತೀರ್ಮಾನ ಮಾಡಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims