ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿರವರ ಬೆಂಬಲಿಗರಿಂದ ಪ್ರಾಣ ಬೆದರಿಕೆ-ಸೂಕ್ತ ರಕ್ಷಣೆಗೆ ನೀಡಿ ಅರುಣಾ ರೆಡ್ಡಿ ಕುಟುಂಬ ಮನವಿ*
*ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿರವರ ಬೆಂಬಲಿಗರಿಂದ ಪ್ರಾಣ ಬೆದರಿಕೆ-ಸೂಕ್ತ ರಕ್ಷಣೆಗೆ ನೀಡಿ ಅರುಣಾ ರೆಡ್ಡಿ ಕುಟುಂಬ ಮನವಿ
ಬೆಂಗಳೂರು:ಪ್ರಸ್ ಕ್ಲಬ್ ಸಭಾಂಗಣದಲ್ಲಿ ಮಾಜಿ ಶಾಸಕ ಎನ್ ಸೂರ್ಯನಾರಾಯಣ ರೆಡ್ಡಿ, ಎನ್. ಭರತ್ ರೆಡ್ಡಿ, ಎನ್ ಶರತ್ ರೆಡ್ಡಿ ಮತ್ತು ಅವರ ಕುಟುಂಬದವರು ಎನ್ ಪೂರ್ಣಿಮಾ, ಅರುಣಾ ರೆಡ್ಡಿ, ಸಿ ಸುನೀಲ್ ಕುಮಾರ್, ಎನ್ ಕವಿತಾ ಮತ್ತು ಎನ್. ಶಾರದಾ ಅವರ ಕುಟುಂಬದವರು ಫೋರ್ಜರಿ, ಮೋಸ ಮಾಡಿದ್ದು ಈ ಕುರಿತು ವಕೀಲರಾದ ಆರ್. ಪಾಂಡು, ಟಿ ಹನುಮರೆಡ್ಡಿ ಮತ್ತು ನೀರಜ್ ರಾಜೀವ್ ಶಿವಮ್ ಅವರು ಪತ್ರಿಕಾಗೋಷ್ಠಿ ನಡೆಸಿ, ದಾಖಲೆ ಬಿಡುಗಡೆಗೊಳಿಸಿದರು
*ಎನ್.ಅರುಣಾರೆಡ್ಡಿರವರು* ಮಾತನಾಡಿ ನಾನು ಬಳ್ಳಾರಿ ನಿವಾಸಿಗಳಾಗಿದ್ದು ನನ್ನ ತಂದೆಯವರು ಶ್ರೀ ರಾಘವೇಂದ್ರ ಎಂಟರ್ ಪ್ರೈಸಸ್ ರಾಜಕಾರಣಿ ಮಾಜಿ ಶಾಸಕರಾದ ಸೂರ್ಯನಾರಾಯಣರೆಡ್ಡಿರವರ ಜೊತೆಯಲ್ಲಿ ಪಾಲುದಾರರಾಗಿ ಸಂಸ್ಥೆ ನಡೆಸುತ್ತಿದ್ದರು.
ನಮ್ಮ ತಂದೆಯವರು ಅಕಾಲಿಕವಾಗಿ ಮರಣ ಹೊಂದಿದರು ಮತ್ತು ಪಾಲುದಾರರಾಗಿದ್ದ ನಮ್ಮ ತಂದೆಯರವರು ಎಷ್ಟು ಹಣ ಹೊದಿಕೆ ಮತ್ತು ಜಮೀನು ಹೊಂದಿದ್ದರು ಎಂದು ನಮಗೆ ತಿಳಿದಿರಲ್ಲಿಲ.
ಅದರೆ ಅದಾಯ ತೆರಿಗೆ ಇಲಾಖೆ ವತಿಯಿಂದ ನಮ್ಮ ಆಸ್ತಿ ವಿವರದ ಬಗ್ಗೆ ತಿಳಿಯುತ್ತದೆ.
ನಮ್ಮ ತಂದೆಯವರಿಗೆ ಸೇರಿದ್ದ ದಾಖಲೆಗಳನ್ನು ಪೋರ್ಜರಿ ಮಾಡಿದ್ದಾರೆ.
ನ್ಯಾಯ ಹೇಳಲು ಹೋದರೆ ನಮ್ಮ ಮೇಲೆ ಪ್ರಾಣದ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

Comments
Post a Comment