ವಿಜಯ ಜನತಾ ಪಾರ್ಟಿ* ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದೆ.
ವಿಜಯ ಜನತಾ ಪಾರ್ಟಿ
* ರಾಜ್ಯ ವಿಧಾನಸಭಾ
ಚುನಾವಣೆಗೆ ಸ್ಪರ್ಧಿಸಲು
ಚಾಲನೆ ನೀಡಿದ್ದಾರೆ
ರಾಜಕೀಯದಲ್ಲಿ ಬದಲಾವಣೆ ತರಲು ರಾಷ್ಟ್ರೀಯ ಪಕ್ಷವಾದ *ವಿಜಯ ಜನತಾ ಪಾರ್ಟಿ* ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದೆ.
ರಾಜ್ಯ ಘಟಕದ ಅಧ್ಯಕ್ಷರಾಗಿ ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಶ್ರೀ. ಎ. ರಮೇಶ್ ಅವರನ್ನು ನೇಮಕ ಮಾಡಲಾಗಿದೆ.
ಶ್ರೀ. ಎ ರಮೇಶ್ ಅವರು ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದು, ಆಫ್ ಪಕ್ಷದ ಆಂತರಿಕ ಕಲಹದಿಂದ ಬೇಸತ್ತು ಇದೀಗ ವಿಜೆಪಿ ಪಕ್ಷದ ಸಾರಥ್ಯ ವಹಿಸಿದ್ದಾರೆ.
ಶ್ರೀ. ಎ. ರಮೇಶ್ ಅವರು ವಿಜಯ ಜನತಾ ಪಾರ್ಟಿಯ ಆರಂಭ, ಉದ್ದೇಶ ಮತ್ತು ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಜೆಪಿ ಪಕ್ಷದ ಪಾತ್ರ ಕುರಿತು ವಿವರ ಹಂಚಿಕೊಳ್ಳಲು ಅಪೇಕ್ಷೆ ಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ, ದಿನಾಂಕ 30-03-2023 ರಂದು ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದರು
*ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದಲ್ಲಿ ಇನ್ನೂಂದು ಬಿಗ್ ಶಾಕ್
ಬೆಂಗಳೂರು: ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಒಂದಾದ ಮೇಲೆ ಒಂದರಂತೆ ಹಿನ್ನಡೆ ಅನುಭವಿಸುತ್ತಿದೆ.
ಮಾಜಿ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಆಪ್ ಗೆ 'ಗುಡ್ ಬೈ ' ಹೇಳಿರುವ ಬೆನ್ನಲ್ಲೇ ಇನ್ನೊಬ್ಬ ಹಿರಿಯ ನಾಯಕ, ಸುಪ್ರೀಂ ಕೋರ್ಟ್ ವಕೀಲರಾದ ಎ ರಮೇಶ್ ಪಕ್ಷ ತೊರೆದಿದ್ದಾರೆ.
ಆಪ್ ಪಕ್ಷದಿಂದ ಹೊರಬಂದಿದ್ದಾರೆ.
ಆಂತರಿಕ ಕಲಹ, ಹಣ ವಸೂಲಿ ಹಾಗೂ ದುರ್ವರ್ತನೆಗಳಿಂದ ಬೇಸತ್ತು ತಾವು ಆಮ್ ಆದ್ಮಿ ಪಕ್ಷದಿಂದ ದೂರ ಸುರಿಯುತ್ತಿರುವುದಾಗಿ ಎ ರಮೇಶ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಅಲ್ಲದೆ, ರಾಷ್ಟ್ರೀಯ ಪಕ್ಷವಾದ "ವಿಜಯ ಜನತಾ ಪಾರ್ಟಿ" ಯು ರಾಜ್ಯ ಅಧ್ಯಕ್ಷರಾಗಿ ಸಂಘಟನೆ ಬಲಪಡಿಸಲು ರಾಜ್ಯವ್ಯಾಪಿ ಪ್ರವಾಸ ಆರಂಭಿಸುವುದಾಗಿ ಘೋಷಿಸಿದ್ದಾರೆ.
ತಮ್ಮ ಕಚೇರಿ ಮೇಲೆ ಹಾಕಿದ್ದ ಆಮ್ ಆದ್ಮಿ ಪಕ್ಷದ ಫಲಕಗಳನ್ನು ಖುದ್ದು ಎ ರಮೇಶ್ ತಮ್ಮ ಬೆಂಬಲಿಗರ ಜೊತೆ ಕಿತ್ತು ಹಾಕಿ, ಎಜೆಪಿ ಬೋರ್ಡ್ ಹಾಕಿದರು.
ಈ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Comments
Post a Comment