ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರುನಗರ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಸಮಾಜಕ್ಕೆ ಪ್ರಾನಿನಿಧ್ಯ*
*ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರುನಗರ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಸಮಾಜಕ್ಕೆ ಪ್ರಾನಿನಿಧ್ಯ*
ಬೆಂಗಳೂರು: ಮೌರ್ಯ ಹೋಟೆಲು ಸಭಾಂಗಣದಲ್ಲಿ ಉತ್ತರ ಕರ್ನಾಟಕ ಸಂಘ,ಸಂಸ್ಥೆಗಳ ಒಕ್ಕೂಟದ ವತಿಯಿಂದ ಬೆಂಗಳೂರುನಗರ 28ವಿಧಾನಸಭಾ ಕ್ಷೇತ್ರದಲ್ಲಿ 6ವಿಧಾನಸಭಾ ಕ್ಷೇತ್ರದಲ್ಲಿ ಸಮುದಾಯದ ಹೆಚ್ಚಿನ ಮತದಾರರು ಇರುವುದರಿಂದ ವೀರಶೈವ ಲಿಂಗಾಯಿತ ಸಮಾಜಕ್ಕೆ ಆದ್ಯತೆ ನೀಡಬೇಕು ಅಗ್ರಹಿಸಿ ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು.
ಉತ್ತರ ಕರ್ನಾಟಕ ಸಂಘ,ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷರಾದ ಶಿವಕುಮಾರ್ ಆರ್.ಮೇಟಿ ಮತ್ತು ಸಮುದಾಯದ ಮುಖಂಡರಾದ ಶಿವಮೊಗ್ಗ ವೀರಶೈವ ಮಹಾಸಭಾ ನಿರ್ದೇಶಕ ಶಿವಪ್ಪ ವಕೀಲರು, 2ಎ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್, ಪ್ರದೀಪ್ ಕೆ.ಸಿ. ಶಿವಣ್ಣ.ಯು.ಸಿ ,ಮತ್ತು ಮುಖಂಡರುಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಆರ್ ಮೇಟಿ ರವರು ಮಾತನಾಡಿ ಕರ್ನಾಟಕದಲ್ಲಿ ಬಹುಸಂಖ್ಯಾತ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯ 1ಕೋಟಿ 30ಲಕ್ಷ ಜನ ಇದ್ದಾರೆ.
70ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯಿತ ಪ್ರಾಬಲ್ಯವಿದೆ ಮತ್ತು 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರ ತೀರ್ಮಾನವಾಗಿದೆ.
ಸಮಾಜ ಎಲ್ಲ ವರ್ಗ,ಧರ್ಮದ ಜೊತೆಯಲ್ಲಿ ವೀರಶೈವ ಲಿಂಗಾಯಿತ ಸಮಾಜ ಸ್ನೇಹ,ಸಹಬಾಳ್ಮೆಯಿಂದ ಬದುಕುತ್ತಿದ್ದಾರೆ.
ನಮ್ಮ ಸಮಾಜದ ನಾಯಕರು ರಾಜಕೀಯದಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಕ್ಕರೆ ಸಮುದಾಯದ ಜೊತೆಗೆ ಸಮಾಜದ ಶ್ರೇಯೋಭಿವೃದ್ದಿಯಾಗುತ್ತದೆ.
ಬೆಂಗಳೂರುನಗರ 28 ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ 15ರಿಂದ 20ಲಕ್ಷ ಮತಾದಾರರು ಇದ್ದಾರೆ.
ರಾಜಾಜಿನಗರ,ವಿಜಯನಗರ,ಮಹಾಲಕ್ಷ್ಮೀಲೇಔಟ್,
ಗೋವಿಂದರಾಜನಗರ ಮತ್ತು ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು ನಮ್ಮ ಸಮುದಾಯದವರು.
ಬಿಜೆಪಿ ಪಕ್ಷದಲ್ಲಿ ವೀರಶೈವ ಲಿಂಗಾಯಿತ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ.
ಅದರೆ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಕಡೆಗಣಿನೆ ಯಾಕೆ ಮಾಡುತ್ತಿದ್ದಾರೆ ಎಂಬದು ಶೋಚನಿಯ ಸಂಗತಿ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 50ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ ನಮ್ಮ ಸಮುದಾಯದ ಹಿರಿಯ ನಾಯಕರಾದ ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜುರವರು ಆಕಾಂಕ್ಷಿಯಾಗಿದ್ದಾರೆ .ಕಾಂಗ್ರೆಸ್ ಪಕ್ಷ ಅವರಿಗೆ ಟಿಕೇಟು ನೀಡಿದರೆ ಸಮುದಾಯಕ್ಕೆ ನ್ಯಾಯ ಸಿಗುತ್ತದೆ.
ರಾಜಾಜಿನಗರ ಗೋವಿಂದರಾಜನಗರ,ವಿಜಯನಗರ,ಚಿಕ್ಕಪೇಟೆ, ಜಯನಗರ ಈ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯಿತ ಸಮಾಜಕ್ಕೆ ಎಲ್ಲ ಪಕ್ಷದವರು ಆದ್ಯತೆ ನೀಡಬೇಕು ಎಂದು ಹೇಳಿದರು.

Comments
Post a Comment