ಚಿಕ್ಕಜಾಲ ಗ್ರಾಮದಲ್ಲಿ ನೂತನ ಶುದ್ಧ ನೀರಿನ ಘಟಕ ಉದ್ಘಾಟನೆ
ಚಿಕ್ಕಜಾಲ ಗ್ರಾಮದಲ್ಲಿ ನೂತನ ಶುದ್ಧ ನೀರಿನ ಘಟಕ ಉದ್ಘಾಟನೆ
" ಚಿಕ್ಕಜಾಲ ಗ್ರಾಮದಲ್ಲಿ ನೂತನ ಶುದ್ಧ ನೀರಿನ ಘಟಕ ಉದ್ಘಾಟನೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ "
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚಿಕ್ಕಜಾಲ ಹೋಬಳಿ ಚಿಕ್ಕಜಾಲದಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಸನ್ಮಾನ್ಯ ಬ್ಯಾಟರಾಯನಪುರ ವಿಧಾನಸಭಾ ಜನಪ್ರಿಯ ಶಾಸಕರಾದ ಕೃಷ್ಣ ಬೈರೇಗೌಡರು ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ ಉಚಿತವಾಗಿ ನೀರಿನ ಕ್ಯಾನನ್ನು ವಿತರಿಸಲಾಯಿತು, ಜಾಲ ಹೋಬಳಿಯ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಚಿಕ್ಕಜಾಲ ಹೋಬಳಿಯ ಕಾಂಗ್ರೆಸ್ ಮುಖಂಡರುಗಳು, ನಾಯಕರುಗಳು, ಚಿಕ್ಕಜಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಚಿಕ್ಕಜಾಲ ಗ್ರಾಮ ಪಂಚಾಯಿತಿಯ ನಾಗರಿಕರುಗಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು,
ಆರ್. ನಾಗರಾಜು
ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment