ದೊಡ್ಡಬಳ್ಳಾಪುರ ತಾಲ್ಲೂಕು ಭೋವಿ ಜನಾಂಗ ಸಂಘದ ವತಿಯಿಂದ ಶ್ರೀ ಸಿದ್ದರಾಮೇಶ್ವರ 851ನೇ ಜಯಂತೋತ್ಸವ ಕಾರ್ಯಕ್ರಮ
" ದೊಡ್ಡಬಳ್ಳಾಪುರ
ತಾಲ್ಲೂಕು ಭೋವಿ ಜನಾಂಗ
ಸಂಘದ ವತಿಯಿಂದ ಶ್ರೀ
ಸಿದ್ದರಾಮೇಶ್ವರ 851ನೇ
ಜಯಂತೋತ್ಸವ ಕಾರ್ಯಕ್ರಮ
ದೊಡ್ಡಬಳ್ಳಾಪುರ ತಾಲ್ಲೂಕು ಭೋವಿ ಜನಾಂಗ ಸಂಘದ ವತಿಯಿಂದ ಶ್ರೀ ಸಿದ್ದರಾಮೇಶ್ವರ 851ನೇ ಜಯಂತೋತ್ಸವ ಕಾರ್ಯಕ್ರಮ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಬೋವಿ ಜನಾಂಗ ಸಂಘದ ವತಿಯಿಂದ ಶ್ರೀ ಸಿದ್ದರಾಮೇಶ್ವರ 851ನೇ ಜಯಂತೋತ್ಸವ ಕಾರ್ಯಕ್ರಮ ಹಾಗೂ ಅಧಿಕೃತ ನೊಂದಾಯಿತ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಹಾಗೂ ಸನ್ಮಾನ್ಯ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಮಾತನಾಡಿದ ಬೋವಿ ಸಂಘದ ಅಧ್ಯಕ್ಷರಾದ ರಾಮಕೃಷ್ಣಯ್ಯನವರು ಪ್ರತಿ ವರ್ಷವೂ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಆಚರಣೆ ಮಾಡಿಕೊಂಡು ಬರುತ್ತಿದ್ದು, ಅಧಿಕೃತ ನೊಂದಾಯಿತ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಸನ್ಮಾನ್ಯ ಕಾರ್ಯಕ್ರಮ ವನ್ನು ಸುಮಾರು ನಾಲ್ಕು ಸಾವಿರ ಭೋವಿ ಸಂಘದ ಸದಸ್ಯರು ಸೇರಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡುತ್ತಿದ್ದೇವೆ, ಒಂದು ಸಾವಿರ ಜನತೆಗೆ ಐಡಿ ಕಾರ್ಡ್ ವಿಚಾರಣೆ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ನಮ್ಮ ಭೋವಿ ಸಮಾಜ ಸಂಘದವತಿಯಿಂದ ಚುನಾವಣೆಯ ರೂಪರೇಷೆ ಸಿದ್ಧಪಡಿಸಿಕೊಂಡಿದ್ದೇವೆ, ತಾಲ್ಲೂಕು ಭೋವಿ ಸಂಘದ ವತಿಯಿಂದ ಚುನಾವಣೆ ನಡೆಸಲು ಸಂಘದ ವತಿಯಿಂದ ತೀರ್ಮಾನ ನಡೆಸಿದ್ದೇವೆ, ಈಗಾಗಲೇ 1600 ಸದಸ್ಯರಿದ್ದಾರೆ, ಇನ್ನೂ 400 ಜನರು ಸದಸ್ಯರಾಗುತ್ತಾರೆ, ಒಟ್ಟು 2,000 ಸದಸ್ಯರಾಗುವ ಗುರಿಯಿದೆ, ದೊಡ್ಡಬಳ್ಳಾಪುರ ತಾಲ್ಲೂಕು ಭೋವಿ ಸಂಘದ ವತಿಯಿಂದ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ, ಮುಖ್ಯವಾಗಿ ಈ ಕಾರ್ಯಕ್ರಮದ ಉದ್ದೇಶವೇನೆಂದರೆ ನಮ್ಮ ಜನಾಂಗದ ಸಂಘಟನೆ, ನಮ್ಮ ಜನಾಂಗವು ಪರಿಶಿಷ್ಟ ಜಾತಿಗೆ ಸೇರಿದ್ದು ನಮ್ಮ ಜನಾಂಗ ಅತಿ ಕಡಿಮೆ ಜನಸಂಖ್ಯೆ ಹೊಂದಿದ್ದು ಸಂಘಟನೆಗೆ ಒತ್ತು ನೀಡಿ ಸರ್ಕಾರದ ಸವಲತ್ತು ನಮ್ಮ ಜನಾಂಗಕ್ಕೆ ಸಿಗಬೇಕು ಎಂದು ಬೋವಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ತಿಳಿಸಿದರು, ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಜನಪ್ರಿಯ ಶಾಸಕರಾದ ಟಿ.ವೆಂಕಟ ರಮಣಯ್ಯನವರು, ಯುವ ಮುಖಂಡರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಧೀರಜ್ ಮುನಿರಾಜುರವರು, ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಪುತ್ರ ಅಂಜನ್ ಗೌಡ ರವರು, ಹಾಗೂ ತಾಲ್ಲೂಕಿನ ಬೋವಿ ಜನಾಂಗದ ಸಮುದಾಯದವರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು,
ಆರ್. ನಾಗರಾಜು
ಪಬ್ಲಿಕ್ ರಿಪೋರ್ಟ್ ನ್ಯೂಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment