ಸ್ವಾವಲಂಬಿ ಜೀವನ ಸಾಗಿಸಲು 433 ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ*
*ಸ್ವಾವಲಂಬಿ ಜೀವನ ಸಾಗಿಸಲು 433 ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ*
*ಬಡವ ಎತ್ತರಕ್ಕೆ ಬೆಳಯಬೇಕು ಸಾಮಾನ್ಯರಿಗೆ ಸಹಾಯ ಮಾಡುವಂತೆ ಆಗಬೇಕು-ಸಚಿವ ವಿ.ಸೋಮಣ್ಣ*
*ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ಎಲ್ಲ ವಾರ್ಡ್ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಪಡೆದ 433 ಅರ್ಹ ಮಹಿಳಾ ಪಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣಾ ಸಮಾರಂಭ*
*ಸ್ಥಳೀಯ ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣ ರವರು ದೀಪಾ ಬೆಳಗಿಸಿ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು*
*ಇದೇ ಸಂದರ್ಭದಲ್ಲಿ ವಿ.ಸೋಮಣ್ಣರವರು* ಮಾತನಾಡಿ ಮಹಿಳೆ ಎಲ್ಲರ ಜೀವನದಲ್ಲಿ ತಾಯಿಯಾಗಿ, ತಂಗಿ, ಅಕ್ಕ,ಮಡದಿಯಾಗಿ ಇಡಿ ಕುಟುಂಬವನ್ನು ಯಶ್ವಸಿಯಾಗಿ ನಿಭಾಯಿಸುವಳು.
ಮಹಿಳೆ ಇಂದು ಅಬಲೆಯಲ್ಲ,ಸಬಲೆ ಹಾಗೂ ರಾಜಕೀಯ, ಚಲನಚಿತ್ರ, ರಂಗಭೂಮಿ, ವಿಜ್ಞಾನ, ತಂತ್ರಜ್ಞಾನ ಎಲ್ಲ ರಂಗದಲ್ಲಿ ಪುರುಷರ ಸರಿಸಮಾನವಾಗಿ ಸಾಧನೆ ಮಾಡಿ ತೋರಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಮಹಿಳಾ ಕಲ್ಯಾಣ ಕಾರ್ಯಕ್ರಮವನ್ನು 1984ರಲ್ಲಿ ಮಹಾನಗರ ಪಾಲಿಕೆಯಲ್ಲಿ ಪ್ರಪ್ರಥಮ ಬಾರಿಗೆ ಜಾರಿಗೆ ತಂದವನು ನಾನು .
ಬಡತನ ರೇಖೆಯಲ್ಲಿರುವ ಮಹಿಳೆಯರಿಗೆ ಟೈಲರಿಂಗ್ ಯಂತ್ರ ದುಡಿಮೆಗೆ ಆಸರೆಯಾಗಿದೆ.
ಮಹಿಳೆಯರಿಗೆ ಟೈಲರಿಂಗ್ ಯಂತ್ರ ವಿತರಣಾ ಯೋಜನೆ ಜಾರಿಗೆ ಬಂದು 30ವರ್ಷಗಳ ಕಾಲವಾಗಿದೆ .
ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ನೇತೃತ್ವದಲ್ಲಿ 10000ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ.
ಇದೇ ತಿಂಗಳು 23ನೇ ತಾರೀಖು ಸಂಜೆ ಪಂತರಪಾಳ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಲೋಕರ್ಪಣೆಯಾಗಲಿದೆ.
ಚಂದ್ರಲೇಔಟ್ ನಲ್ಲಿ 20ನೇ ತಾರೀಖು ಉನ್ನತ ವ್ಯಾಸಂಗಕ್ಕಾಗಿ ಐ.ಎ.ಎಸ್.ತರಭೇತಿ ಕೇಂದ್ರ.
ಬೆಂಗಳೂರುನಗರ 9ವಿಧಾನಸಭಾ ಕ್ಷೇತ್ರದಲ್ಲಿ 52ಸಾವಿರ ಮನೆ ನಿರ್ಮಾಣ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಿಎದ 10ಲಕ್ಷ ಮನೆ ನಿರ್ಮಾಣ ರಾಜ್ಯದಲ್ಲಿ ನಿರ್ಮಿಸಲಾಗಿದೆ.
ಬಾಲಕಿಯರಿಗೆ ಶಾಲೆಗಳಿಗೆ ಮುಟ್ಟಿನ ಸಮಸ್ಯೆಗೆ 1ವರ್ಷ ಉಚಿತವಾಗಿ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಮಾಡಲಾಗುತ್ತಿದೆ.
ನಿಟ್ಟಿಂಗ್, ಎಂಬ್ರಾಯಿಡರಿ, ಟೈಲರಿಂಗ್ ಸರ್ಕಾರಿ ಸಂಸ್ಥೆಯಲ್ಲಿ ತರಭೇತಿ ಪಡೆದವರಿಗೆ ಖಾಸಗಿಯಲ್ಲಿ ಸುಲಭವಾಗಿ ಉದ್ಯೋಗ ಸಿಗುತ್ತದೆ.
ಬಡವ ಎತ್ತರಕ್ಕೆ ಬೆಳಯಬೇಕು ಸಾಮಾನ್ಯರಿಗೆ ಸಹಾಯ ಮಾಡುವಂತೆ ಆಗಬೇಕು.
ಇಂದು ಹೊಲಿಗೆ ಯಂತ್ರವನ್ನು ತೆಗೆದುಕೊಂಡ ಮಹಿಳೆಯರು ಜೀವನದಲ್ಲಿ ಮುಂದೆ ಬಂದು ಹತ್ತಾರು ಜನರಿಗೆ ಉದ್ಯೋಗ ಕೊಡುವಂತೆ ಆಗಲಿ ಎಂದು ಶುಭಾ ಹಾರೈಸಿದರು.
ವಿಶೇಷ ಆಯುಕ್ತರಾದ ಶಂಕರ್ ರೆಡ್ಡಿ, ಜಂಟಿ ಆಯುಕ್ತರಾದ ಲೋಕನಾಥ್, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್,ದಾಸೇಗೌಡ, ಶ್ರೀಮತಿ ರೂಪಲಿಂಗೇಶ್ವರ್, ಶ್ರೀಮತಿ ಪಲ್ಲವಿ ಚನ್ನಪ್ಪ,ರಾಮಪ್ಪ. ಕೊಳಗೇರಿ ಅಭಿವೃದ್ದಿ ಮಂಡಳಿ ನಿರ್ದೇಶಕ ಕ್ರಾಂತಿರಾಜು, ಬಿಜೆಪಿ ಮುಖಂಡರುಗಳಾದ ರಾಜಪ್ಪ, ಶ್ರೀಧರ್ ರವರು ಪಾಲ್ಗೊಂಡಿದ್ದರು.

Comments
Post a Comment