ಆದರಣೆ ಸೇವಾ ಸಂಸ್ಥೆ(ರಿ) 12ನೇ ವಾರ್ಷಿಕೋತ್ಸವ ಆನಂದೋತ್ಸವ
ಆದರಣೆ ಸೇವಾ ಸಂಸ್ಥೆ(ರಿ) 12ನೇ ವಾರ್ಷಿಕೋತ್ಸವ ಆನಂದೋತ್ಸವ
ಆದರಣೆ ಸೇವಾ ಸಂಸ್ಥೆ(ರಿ) 1212ನೇ ವಾರ್ಷಿಕೋತ್ಸವ ಆನಂದೋತ್ಸವ 2023ರ ಡಾಕ್ಟರ್ ಯೂನಸ್ ಜೋನ್ಸ್ ಮಾನವ ಹಕ್ಕುಗಳು ಬೆಂಗಳೂರು ಇವರನ್ನು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರುಯಾವುದೇ ಲಾಬೋದ್ದೇಶವಿಲ್ಲದೆ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದೆ. ಈ ಸಂಸ್ಥೆಯು ಯಾವುದೇ ಧರ್ಮ, ಜಾತಿ ಮತ್ತು ಸಮುದಾಯದ ಮಕ್ಕಳಿಗೆ ತಾರತಮ್ಯವಿಲ್ಲದೆ ಸೇವೆಮಾಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯು ಒಂದು ಸಣ್ಣ ಕೊಠಡಿಯಲ್ಲಿ ಸರಿಯಾದ ಆರ್ಥಿಕ ಸಹಾಯ ಮತ್ತು ಸಂಪನ್ಮೂಲಗಳಿಲ್ಲದೆ ಆರಂಭವಾಯಿತು. ಈ ಸಂಸ್ಥೆಯು ಶಾಲೆಗೆ ಹೋಗುವ ಸವಲತ್ತುಗಳಿಲ್ಲದ ಮಕ್ಕಳಿಗೆ ಕಲಿಕಾ ಕೇಂದ್ರಗಳನ್ನು ಆರಂಭಿಸುವುದರ ಮೂಲಕ ಮತ್ತು ಸಮುದಾಯದಲ್ಲಿ ಖಿನ್ನತೆಗೆ ಒಳಗಾದ ಜನರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿ "ಆದರಣೆ ಸೇವಾ ಸಂಸ್ಥೆ" ಎಂಬುದಾಗಿ 2011ರಲ್ಲಿ ನೋಂದಾಯಿಸಲಾಯಿತು.
ಅಂದಿನಿಂದ ಆದರಣೆ ಸೇವಾ ಸಂಸ್ಥೆ(ರಿ)ಯು ಬಡತನದಲ್ಲಿರುವ ಕುಟುಂಬದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಹೆಚ್ಐವಿ ಮತ್ತು ಕ್ಯಾನ್ಸರ್ ನಂತಹ ರೋಗಕ್ಕೆ ತುತ್ತಾಗಿರುವ ಜನರಿಗೆ ಪ್ರೀತಿ ಮತ್ತು ಕಾಳಜಿವಹಿಸುವದರೊಂದಿಗೆ ಸಹಾಯವನ್ನು ನೀಡುತ್ತಾ ಬಂದಿರುತ್ತದೆ. "ಶೈನ್ ಚಿಲ್ಡ್ರನ್ ಹೋಂ" ನಿರ್ಗತಿಕ ಮತ್ತು ಅನಾಥ ಮಕ್ಕಳಿಗೆ ಆಶ್ರಯತಾಣವಾಗಿದ್ದು ಆಹಾರ ಮತ್ತು ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮತ್ತೊಂದು ಯೋಜನೆಯ ಮೂಲಕ ಆರ್ಥಿಕವಾಗಿ ಕೊರತೆಯಲ್ಲಿರುವ ಗರ್ಭಿಣಿ ಸ್ತ್ರೀ ಮತ್ತು ಮಗುವಿನ ಆರೋಗ್ಯದ ಕುರಿತು ಕಾಳಜಿವಹಿಸಿ ಸುಮಾರು 15 ತಿಂಗಳವರೆಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿದೆ.
ಮತ್ತೊಂದು ಸಂತಸದ ಸಂಗತಿಯೇನೆಂದರೆ ಈ ವರ್ಷದಲ್ಲಿ ಕುಟುಂಬ ಮತ್ತು ಸಮುದಾಯದಲ್ಲಿ ಕಡೆಗಣಿಸಲ್ಪಟ್ಟ ವೃದ್ಧರಿಗೆ "ವೃದ್ಧಾಶ್ರಮ" ವನ್ನು ಆರಂಭಿಸಲು ಸಂಸ್ಥೆಯು ಸಕಲ ಸಿದ್ಧತೆಯನ್ನು ನಡೆಸುತ್ತಿದೆ.
ಹೀಗಿರುವುದರಿಂದ, ಆದರಣೆ ಸೇವಾ ಸಂಸ್ಥೆ(ರಿ) ನಿಮ್ಮ ಸಹಕಾರ, ಪ್ರೀತಿ ಮತ್ತು ಕಾಳಜಿಯನ್ನು ಈ ಹಿಂದಿನಂತೆಯೇ ನಿರೀಕ್ಷಿಸಿ "ತನ್ನ ಯೋಜನೆಯಂತೆ ಸೇವೆಯನ್ನು" ಸಮುದಾಯದಲ್ಲಿ ಮುಂದುವರೆಸಲು ಬಯಸುತ್ತದೆ.
ಇಂತಿ, ಸಮಾಜi ಸೇವಕರು
ಡಾ. ಗುರು ಪ್ರಸಾದ್ ಎಂ
ಆದರಣೆ ಸೇವಾ ಸಂಸ್ಥೆ(ರಿ)

Comments
Post a Comment