ದೊಡ್ಡಪ್ಯಾಯಲಗುರ್ಕಿಗ್ರಾಮ ಪಂಚಾಯಿತಿಯ ನೂತನಅಧ್ಯಕ್ಷರಾಗಿ ಕೆ.ವಿ.ನಾಗರಾಜ್ ಅವಿರೋಧ ಆಯ್ಕೆ "
"ದೊಡ್ಡಪ್ಯಾಯಲಗುರ್ಕಿಗ್ರಾಮ ಪಂಚಾಯಿತಿಯ ನೂತನಅಧ್ಯಕ್ಷರಾಗಿ ಕೆ.ವಿ.ನಾಗರಾಜ್ ಅವಿರೋಧ ಆಯ್ಕೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ದೊಡ್ಡ
ಪ್ಯಾಯಲಗುರ್ಕಿ ಗ್ರಾಮ ಪಂಚಾಯಿತಿಯ ನೂತನಅಧ್ಯಕ್ಷರಾಗಿ ಕೆ. ವಿ.ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾ ಅಧಿಕಾರಿಯಾಗಿಕೃಷಿ ಇಲಾಖೆಯ ಕೇಶವರೆಡ್ಡಿ ಕಾರ್ಯನಿರ್ವಹಿಸಿದ್ದು, ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಪೆರೇಸಂದ್ರ ಗ್ರಾಮಪಂಚಾಯಿತಿ ಮಾಜಿಅಧ್ಯಕ್ಷರಾದ ಚನ್ನಕೃಷ್ಣರೆಡ್ಡಿರವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ವಿ.ನಾಗರಾಜರವರಿಗೆ ಹಾರಹಾಕಿ ಸನ್ಮಾನಿಸಿದರು,ಈ ಸಂದರ್ಭದಲ್ಲಿ ದೊಡ್ಡ ಪ್ಯಾಯಲಗುರ್ಕಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಪಿಡಿಒ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸುವ ಮೂಲಕ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು, ನೂತನಅಧ್ಯಕ್ಷರಾದ ಕೆ.ವಿ ನಾಗರಾಜ್ ರವರು ಮಾತನಾಡಿ ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿಯ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಬೀದಿದೀಪ, ಚರಂಡಿ, ವಸತಿ, ಹಾಗೂಇನ್ನಿತರ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತೇನೆಂದು ತಿಳಿಸಿದರು.
ಎನ್.ಶೋಭ
ಪಬ್ಲಿಕ್ ರಿಪೋರ್ಟ್ ವರದಿಗಾರರು
ಚಿಕ್ಕಬಳ್ಳಾಪುರ ಜಿಲ್ಲೆ.

Comments
Post a Comment