ಮನೆ, ಮನೆಗೆ ಉಚಿತ ಟಿ.ವಿ.ವಿತರಣಾ ಕಾರ್ಯಕ್ರಮ*
*ಮನೆ, ಮನೆಗೆ ಉಚಿತ ಟಿ.ವಿ.ವಿತರಣಾ
ಕಾರ್ಯಕ್ರಮ*
ಹೆಬ್ಬಾಳ ವಿಧಾನಸಭಾ ಕ್ಷೇತ್ರ: ಮನೋರಾಯನಪಾಳ್ಯ ವಾರ್ಡ್ ನಲ್ಲಿ ಪ್ರತಿ ಮನೆಗೆ ಶಾಸಕರ ನೇತೃತ್ವದಲ್ಲಿ ಉಚಿತ ಟಿ.ವಿ.ವಿತರಣಾ ಕಾರ್ಯಕ್ರಮ.
*ಶಾಸಕರಾದ ಬೈರತಿ ಸುರೇಶ್ ರವರು,ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಸ್ಥಳೀಯ ನಿವಾಸಿಗಳಿಗೆ ಉಚಿತವಾಗಿ ಟಿ.ವಿ.ಗಳನ್ನು ವಿತರಿಸಿದರು*.
*ಶಾಸಕರಾದ ಭೈರತಿ ಸುರೇಶ್* ರವರು ಮಾತನಾಡಿ ನಮ್ಮ ವಿಧಾನಸಭಾ ಕ್ಷೇತ್ರ ಬಡವರು, ಮಧ್ಯಮವರ್ಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕೊರೋನ ಸಾಂಕ್ರಮಿಕ ಲಾಕ್ ಡೌನ್ ಸಂದರ್ಭದಲ್ಲಿ ಆನ್ ಲೈನ್ ತರಗತಿಗಳಿಗೆ ಮಕ್ಕಳಿಗೆ ಟ್ಯಾಬ್ ,ಟಿ.ವಿ.ಅವಶ್ಯಕತೆ ಇತ್ತು ಬಹಳ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಟಿ.ವಿ.ಖರೀದಿಸಲು ಸಾಧ್ಯವಾಗಿರಲ್ಲಿಲ.
ನಮ್ಮ ಕ್ಷೇತ್ರದ ಜನರು ಒಂದು ಕುಟುಂಬದಂತೆ ಅವರ ನೋವು,ನಲಿವುಗಳಿಗೆ ನಾನು ಸದಾ ಮುಂದು.
ಅದರಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಪ್ರತಿ ಕುಟುಂಬಕ್ಕೆ ಉಚಿತವಾಗಿ ಟಿ.ವಿ.ವಿತರಿಸಲಾಗುತ್ತಿದೆ.
ಮಕ್ಕಳ ಆನ್ ಲೈನ್ ಶಿಕ್ಷಣ ಮತ್ತು ಕುಟುಂಬದ ಮನೋರಂಜನೆ ವಿಕ್ಷಣೆ ಮಾಡಲು ಅನುಕೂಲವಾಗುತ್ತದೆ.
ಕೋಮುವಾದಿ ಪಕ್ಷಗಳಿಂದ ದೂರ ಇರಿ, ಜಾತಿ,ಜಾತಿ ನಡುವೆ ದ್ವೇಷ ಬಿತ್ತುವ ಬಿ.ಜೆ.ಪಿ.ಪಕ್ಷದವರು ಕೊರೋನ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು.
ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯರವರು 5ವರ್ಷಗಳ ಕಾಲ ಜನಪ್ರಿಯ ಆಡಳಿತದಲ್ಲಿ ಅನ್ನಭಾಗ್ಯ, ಶಾದಿಭಾಗ್ಯ,ಕ್ಷೀರಭಾಗ್ಯ ಮತ್ತು ಜನತೆಗೆ ನೀಡಿದ 165ಭರವಸೆಗಳನ್ನು ಈಡೇರಿಸಿದರು ಎಂದು ಹೇಳಿದರು.
*ಅಬ್ದುಲ್ ವಾಜಿದ್ ರವರು* ಮಾತನಾಡಿ ಕಾಂಗ್ರೆಸ್ ಪಕ್ಷ ಎಲ್ಲ ಧರ್ಮ,ಜಾತಿ ಸರಿಸಮಾನವಾಗಿ ಅಭಿವೃದ್ದಿ ಪಥದತ್ತ ಕರೆದುಕೊಂಡು ಹೋಗುವ ಪಕ್ಷ.
ಬಿಜೆಪಿ,ಜೆಡಿಎಸ್ ಪಕ್ಷದವರು ಕಳೆದ ಐದು ವರ್ಷಗಳಿಂದ ಹೆಬ್ಬಾಳ ಕ್ಷೇತ್ರದ ಜನರ ಕಡೆ ತಿರುಗಿ ನೋಡಿಲ್ಲ.
ಈಗ ಚುನಾವಣೆ ಬಂದಿರುವ ಕಾರಣದಿಂದ ಕ್ಷೇತ್ರಕ್ಕೆ ಬರುತ್ತಿದ್ದಾರೆ .ಇವರಿಗೆ ತಕ್ಕ ಪಾಠ ಕಲಿಸಬೇಕು.
ಜಾತ್ಯತೀತ ಸಿದ್ದಾಂತದ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸಹಕಾರ ಬೆಂಬಲವಿರಲಿ ಎಂದು ಹೇಳಿದರು.

Comments
Post a Comment