ಮಾಧ್ಯಮ ಸ್ನೇಹಿತರುಗಳಿಗೆ ನಮಸ್ತೆ
ಮಾಧ್ಯಮ ಸ್ನೇಹಿತರುಗಳಿಗೆ ನಮಸ್ತೆ
ದಿನಾಂಕ 16-02-2023 ರಂದು ಸಂಜೆ 6:15 ರ ಸಮಯದಲ್ಲಿ ನಟ ದರ್ಶನ್ ಹುಟ್ಟು ಹಬ್ಬದ ಹಿನ್ನೆಲೆ ಚಿತ್ರೀಕರಣಕ್ಕಾಗಿ ಖಾಸಗಿ ಸುದ್ದಿ ವಾಹಿನಿಯ ಕೆಲಸದ ಮೇರೆಗೆ ಆರ್.ಆರ್ ನಗರದ ಅವರ ನಿವಾಸದ ಬಳಿ ಹೋದಾಗ ವಾಹಿನಿಯ ಕ್ಯಾಮೆರದಿಂದ ಕೇವಲ 1 ರಿಂದ 2 ನಿಮಿಷ ಚಿತ್ರೀಕರಣ ವಾಗಿದೆ, ಕ್ಯಾಮರಾಮನ್ ಅದ ನನಗೆ ಯಾವುದೇ ರೀತಿಯ ಸೂಚನೆ ನೀಡದೆ ನಟ ದರ್ಶನ್ ಅವರ ಅಂಗ ರಕ್ಷಕರು ಸಿಬ್ಬಂದಿ ಆಪ್ತರು ಸಮವಸ್ತ್ರ ಧರಿಸಿದ ಖಾಸಗಿ ಅಂಗರಕ್ಷಕರು ಆಪ್ತರು ಹಾಗೂ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕೆ ಯುಟ್ಯೂಬ್ ವಾಹಿನಿಯ ಕ್ಯಾಮರಾಮನ್ ಹಾಗೂ ವರದಿಗಾರನಿಗೆ (ವಿಶೇಷವಾಗಿ ಕ್ಯಾಮರಾಮನ್ ಗೆ) ಅಮಾನವೀಯವಾಗಿ ರಕ್ತ ಸ್ರಾವ ಹಾಗುವ ರೀತಿ ಅವಾಚ್ಯಾ ಶಬ್ದಗಳಿಂದ ನಿಂದಿಸಿ ಮನಸೋಇಚ್ಛೆ ದಾಳಿಸಿದರೆ, ವಾಹಿನಿಯ ದ್ವಿಚಕ್ರ ವಾಹನ ಹಾಗೂ ಮೆಮೋರಿಕಾರ್ಡ್ ಸಹ ನಟ ದರ್ಶನ್ ಅವರ ಆಪ್ತರು ಕಸಿದು ಕೊಂಡಿದ್ದಾರೆ, ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ, ನಡೆದ ಘಟನೆ ಎಲ್ಲದರು ಬಾಯಿ ಬಿಟ್ಟರೆ ಪ್ರಾಣ ಹಾನಿ ಮಾಡುವುದಾಗಿ ಮೃಗಗಳ ರೀತಿ ವರ್ತಿಸಿದ್ದಾರೆ, ನಮಗೆ ಮಾತನಾಡಲು ಅವಕಾಶ ಕೊಡದೆ ಕಾಡು ಪ್ರಾಣಿಗಳ ವರ್ತಿನೆ ನಟ ದರ್ಶನ್ ಅವರ ಗುಂಡಾ ಆಪ್ತರು ಹಾಗೂ ಸಿಬ್ಬಂದಿ ಬೆಂಬಲಿಗರು ವರ್ತಿಸಿದರೆ, ನಮಗೆ ಬೆದರಿಕೆ ಹಾಕಿ ಅವರ ಪರವಾಗಿ ಹೇಳಿಕೆ ಕೊಡುವಂತೆ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ ಸ್ಥಳದಲ್ಲೇ, ಕ್ಯಾಮರಾಮನ್ ದಯಾನಂದ ಕೆ.ಪಿ ಹಾಗೂ ವರದಿಗರ ಮಧುಸೂದನ್ ಫೋನ್ ಕಸಿದು ಹೊಡೆಯಲು ಮುಂದಾದರು ಪಾಸ್ವರ್ಡ್ ಹೇಳುವಂತೆ ಬೆದರಿಕೆ ಹಾಕಿದ್ದಾರು, ಕೊಲೆಗಡುಕರ ರೀತಿ ವರ್ತಿಸುವುದರ ಜೊತೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ವೈಯಕ್ತಿಕ ಮನಸ್ಸಿಗೆ ನೋವಾಗಿದೆ, ಸ್ಟಾರ್ ನಟನ ಬೆಂಬಲಿಗರ ಈ ವರ್ತನೆ ನನ್ನ ಕುಟುಂಬದ ಸದಸ್ಯರು ಭಯದ ವಾತಾವರಣ ನಿರ್ಮಾಣವಾಗಿದೆ, ಯಾವುದೇ ರೀತಿಯ ಅಹಿತಕರ ಘಟನೆ ನಡೆದಿದೆ ನಮ್ಮ ಕುಟುಂಬದ ಮೇಲೆ ನೇರ ಹೊಣೆ ನಟ ದರ್ಶನ್ ಆಪ್ತರು ಬೆಂಬಲಿಗರು ಸಮವಸ್ತ್ರ ಧರಿಸಿದ ಅಂಗರಕ್ಷಕರು ಕುಡಿದ ಅಮಲಿನಲ್ಲಿ ಇದ್ದ ಕೆಲವು ದರ್ಶನ್ ಸಂಬಂಧಪಟ್ಟ ವ್ಯಕ್ತಿಗಳು ನೆರೆವಾಗಿ ಆರೋಪ ಮಾಡುತ್ತೆನೆ
-----------------------------
ಪ್ರಕರಣ ಸಂಬಂಧ ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 17-02-2023 ರಂದು ನಟ ದರ್ಶನ್ ಅವರ ಸಿಬ್ಬಂದಿ ಆಪ್ತರು ಮತ್ತು ಸಮವಸ್ತ್ರ ಧರಿಸಿದ ಅಂಗರಕ್ಷಕರ ವಿರುದ್ಧ FIR ದಾಖಲಾಗಿದೆ

Comments
Post a Comment