ಕಂಟನಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ಯಲ್ಲಪ್ಪ ಆಯ್ಕೆ "
"ಕಂಟನಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ಯಲ್ಲಪ್ಪ ಆಯ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಕಂಟನ ಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ಯಲ್ಲಪ್ಪಆಯ್ಕೆ ಯಾಗಿದ್ದು ಆಯ್ಕೆಯಾದ ನೂತನ ಅಧ್ಯಕ್ಷರನ್ನು ಸನ್ಮಾನ್ಯ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿಯವರು ಹಾಗೂ ಕಾಂಗ್ರೆಸ್ ಮುಖಂಡರಾದ ಅಪ್ಪಿ ವೆಂಕಟೇಶ್ ರವರು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಕಂಟನ ಕುಂಟೆಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರುಗಳು ಹಾಗೂ ಪಿಡಿಒ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸುವ ಮೂಲಕ ನೂತನ ಅಧ್ಯಕ್ಷರಾದ ರತ್ನಮ್ಮ ಯಲ್ಲಪ್ಪ ರವರಿಗೆ ಶುಭ ಕೋರಿದರು,ಇದೇ ವೇಳೆ ಮಾತನಾಡಿದ ನೂತನಅಧ್ಯಕ್ಷರಾದ ರತ್ನಮ್ಮ ಎಲ್ಲಪ್ಪನವರು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿದೀಪ, ರಸ್ತೆ, ಚರಂಡಿ, ವಸತಿ, ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ಆರ್.ನಾಗರಾಜ್
ಪಬ್ಲಿಕ್ ರಿಪೋರ್ಟ್ ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment