ದೇಶದ ಪ್ರತಿ ಕುಟುಂಬದ ಜೊತೆಯಲ್ಲಿ ಪ್ರಧಾನಿ ನರೇಂದ್ರಮೋದಿರವರು ಇದ್ದಾರೆ-ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್*
*ದೇಶದ ಪ್ರತಿ ಕುಟುಂಬದ ಜೊತೆಯಲ್ಲಿ ಪ್ರಧಾನಿ ನರೇಂದ್ರಮೋದಿರವರು ಇದ್ದಾರೆ-ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್*
ರಾಜಾಜಿನಗರ ವಿಧಾನಸಭಾ ಕ್ಷೇತ್ರ:ದಯಾನಂದನಗರ ವಾರ್ಡ್ ನಲ್ಲಿ ಕಾರ್ಮಿಕ ಇಲಾಖೆ ಮತ್ತು ಡಾ||ಅಂಬೇಡ್ಕರ್ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕ ಸಂಘದ ವತಿಯಿಂದ ಲೇಬರ್ ಕಾರ್ಡ್ ಮತ್ತು ಇ-ಶ್ರಾಮ್ ಕಾರ್ಡ್ ನೋಂದಣೆ ಹಾಗೂ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಕಟ್ಟಡ ಕಾರ್ಮಿಕರ ಕಿಟ್,ಪ್ಲಂಬರ್ ಕಿಟ್, ಪೈಂಟರ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್ ಹಾಗೂ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕೆ ಕಿಟ್ ವಿತರಣಾ ಕಾರ್ಯಕ್ರಮ.
*ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮತ್ತು ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜುರವರು, ರಾಜಾಜಿನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ರವರು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಣೆ ಮಾಡಿದರು*.
*ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ರೈತ,ಸೈನಿಕ ಮತ್ತು ಕಾರ್ಮಿಕರು ಈ ದೇಶದ ಜೀವನಾಡ
ಸೈನಿಕ ದೇಶ ಕಾಯುತ್ತಾನೆ, ರೈತ ಭೂಮಿಯಲ್ಲಿ ಬೆಳೆ ಬೆಳದು ಎಲ್ಲರ ಹಸಿವು ನೀಗಿಸುತ್ತಾನೆ, ಕಾರ್ಮಿಕ ದೇಶದ ಅಭಿವೃದ್ದಿಗಾಗಿ ಶ್ರಮವಹಿಸುತ್ತಾನೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕರ ಹೆಚ್ಚು ವಾಸಿಸುವ ಕ್ಷೇತ್ರವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಯೋಜನೆಗಳು ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸವಲ್ಲಿ ಕಾರ್ಮಿಕರ ಆದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪ್ರಧಾನಿ ನರೇಂದ್ರಮೋದಿರವರು ನಿಮ್ಮ ಸಹಾಯ ಯಾರು ಇಲ್ಲ ಎಂದು ತಿಳಿಯಬೇಡಿ ನಿಮ್ಮ ಕುಟುಂಬದ ಜೊತೆಯಲ್ಲಿ ನಾನು ಇದ್ದೇನೆ ಎಂದು ದೇಶದ ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ಕಳೆದ ಎಂಟು ತಿಂಗಳಿಂದ 13,850ಮನೆಗಳಿಗೆ ಭೇಟಿ ನೀಡಿದ್ದೇನೆ.
ಮನೆ,ಮನೆ ಭೇಟಿಯಿಂದ ಜನರ ಸಮಸ್ಯೆ ಅಲಿಸಲು ಮತ್ತು ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರುಗಳಾದ ಸುದರ್ಶನ್,ಗುರುಮೂರ್ತಿ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Comments
Post a Comment