ತಳಗವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ ಮುನಿಯಪ್ಪನವರು ಆಯ್ಕೆ "
"ತಳಗವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ ಮುನಿಯಪ್ಪನವರು ಆಯ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ತಳಗವಾರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಟಿವಿ ಲಕ್ಷ್ಮಿ ನಾರಾಯಣ್ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ 21.2.2023ರ ಮಂಗಳವಾರದಂದು ಚುನಾವಣೆ ನಿಗದಿಯಾಗಿತ್ತು, ಚುನಾವಣಾ ಅಧಿಕಾರಿ ಆದಂತಹ ಶಿವಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿರುತ್ತದೆ, ಸಂಘದ ಕಾರ್ಯಕಾರಿ ಮಂಡಳಿಯಲ್ಲಿ 11 ಜನ ನಿರ್ದೇಶಕರು ಇರುತ್ತಾರೆ, ಇದರಲ್ಲಿ ಸ್ಪರ್ಧಿಗಳಾಗಿ ಡಿ. ಮುನಿಯಪ್ಪನವರು ಮತ್ತು ದಯಾನಂದ್ ರವರು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ, ಚುನಾವಣೆಯಲ್ಲಿ ಡಿ. ಮುನಿಯಪ್ಪನವರು ಆರು ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ದಯಾನಂದ್ ರವರು ನಾಲ್ಕು ಮತಗಳನ್ನು ಗಳಿಸಿರುತ್ತಾರೆ, ಒಂದು ಮತ ಅಡ್ಡದ ಮತದಾನವಾಗಿದ್ದು ಆರು ಮತಗಳನ್ನು ಪಡೆದ ಡಿ. ಮುನಿಯಪ್ಪನವರು ಜಯಶೀಲರಾಗಿರುತ್ತಾರೆ, ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾದ ಟಿವಿ ಲಕ್ಷ್ಮೀನಾರಾಯಣ್ , ಮಾಜಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಟಿ.ಎಸ್. ರುದ್ರಪ್ಪನವರು, ಊರಿನ ಮುಖಂಡರಾದಂತಹ ಹೊನ್ನಪ್ಪನವರು, ಅಖಿಲ ಭಾರತ ವೀರಶೈವ ಪತ್ತಿನ ಸಂಘದ ಮಾಜಿ ಅಧ್ಯಕ್ಷರಾದ ಪುಟ್ಟ ಬಸವರಾಜು ಸಹ ರವಿಕುಮಾರ್, ಮೈಲಾರಪ್ಪ, ನಾಗರಾಜ್ ಟಿ.ಜಿ. ಕಿರಣ್ ಕುಮಾರ್ ಟಿ.ವಿ. ಅನಿಲ್ ಕುಮಾರ್, ನರೇಂದ್ರಬಾಬು, ಮುಂತಾದವರು ನೂತನ ಅಧ್ಯಕ್ಷರಾದ ಡಿ. ಮುನಿಯಪ್ಪನವರಿಗೆ ,ಹಾರಹಾಕಿ, ಪಟಾಕಿ ಸಿಡಿಸಿ ಶುಭಾಶಯ ಕೋರಿದರು,
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್
ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.0
Comments
Post a Comment