ಬೆಂಗಳೂರು : ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 396ನೇ ಜಯಂತೋತ್ಸವ ಸಮಾರಂಭವನ್ನು ನಗರದ ಸದಾಶಿವನಗರದ
ಬೆಂಗಳೂರು : ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 396ನೇ ಜಯಂತೋತ್ಸವ ಸಮಾರಂಭವನ್ನು ನಗರದ ಸದಾಶಿವನಗರದ
ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಸ್ಮಾರಕದ ಆವರಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿತ್ತು. ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್ ಹಾಗೂ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ ರವರು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಉತ್ತಲಿಗೆ ಮಾಲಾರ್ಪಣೆ ಮಾಡಿ ದೀಪ ಬೆಳಗುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮನೋಜ್ ಕುಮಾರ್, ಬಿಜೆಪಿ ಪಕ್ಷದ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ನರೇಂದ್ರಬಾಬು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ್ರು, ಲಯನ್ ಶಿವನಂಜಯ, ನಟ ಗಣೇಶ್ ಕೆಸರ್ಕಾರ್, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಸುಮಂಗಲ ಕೇಶವ್, ಕರ್ನಾಟಕ ಕ್ಷತ್ರಿಯ ಮರಾಠ ಕೂಟದ ರಾಜ್ಯಾಧ್ಯಕ್ಷರಾದ ಶಾಮಸುಂದರ್ ಗಾಯ್ಕೋಡು, ಕಿರುತರೆ ನಟಿ ನೇತ್ರ ಜಾದವ್ ಹಾಗೂ ವಿಜಯೇಂದ್ರ ಜಾದವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ರವರು ಮಾತನಾಡಿ ನಾಡಿನ ಹಾಗೂ ನಮ್ಮ ಸಂಸ್ಕೃತಿ-ಪರಂಪರೆಯ ರಕ್ಷಣೆಗೆ ಶಿವಾಜಿ ಮಹಾರಾಜರು ಹೋರಾಡಿದ ರೀತಿಯು ಯಾವತ್ತಿಗೂ ಪ್ರೇರಕಶಕ್ತಿ ಆಗಿರುತ್ತದೆ
ಚಿಕ್ಕವಯಸ್ಸಿನಲ್ಲಿಯೇ ತಾಯಿ ಜೀಜಾಬಾಯಿ ಅವರಿಂದಾಗಿ ಸಂಸ್ಕಾರ, ದೇಶಭಕ್ತಿಗಳನ್ನು ಮೈಗೂಡಿಸಿಕೊಂಡ ಶಿವಾಜಿ ಮಹಾರಾಜರು, ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಸಲ್ಲಿಸಿದ ಸೇವೆ ವಿಶೇಷವಾದುದು
ಶಿವಾಜಿ ಅವರ ಗೌರವಾರ್ಥ ಕರ್ನಾಟಕ ಸರ್ಕಾರವು ಅವರ ಜಯಂತಿಯನ್ನು ಅಧಿ ಕೃತವಾಗಿ ರಾಜ್ಯದೆಲ್ಲೆಡೆ ಆಚರಿಸುತ್ತಿದೆ. ಜೊತೆಗೆ, ರಾಜ್ಯದಲ್ಲಿರುವ ಮರಾಠ ಜನರ ಹಿತರಕ್ಷಣೆಗಾಗಿ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಮಹಾರಾಷ್ಟ್ರದ ಹೊರತಾಗಿ ಇಂತಹ ಅಭಿವೃದ್ಧಿ ನಿಗಮ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ನುಡಿದರು. ಬಳಿಕ ಮಾಜಿ ಸಚಿವರಾದ ಪಿಜಿಆರ್ ಸಿಂಧನವರು ಮಾತನಾಡಿ ಶಿವಾಜಿ ಮಹಾರಾಜರು ದೇಶಕ್ಕಾಗಿ ಮಾಡಿರುವ ಹೋರಾಟಗಳನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಇಂದು ಛತ್ರಪತಿ ಶಿವಾಜಿ ಮಹಾರಾಜ್ ರವರ ಜಯಂತೋತ್ಸವವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ 1993ರಲ್ಲಿ ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ ಹಾಗೂ ಹಲವರ ಸಹಕಾರದಿಂದ ಪುತ್ತಳಿಯನ್ನು ಸ್ಥಾಪಿಸಲಾಗಿದೆ ಇದು ಬರೀ ಮರಾಠರು ಪೂಜಿಸುವ ಮೂರ್ತಿ ಅಲ್ಲದೆ ಎಲ್ಲಾ ವರ್ಗದ ಜನತೆಗೂ ಪ್ರೇರಣೆ ಕೊಡುತ್ತಕಂತ ಮಹಾನ್ ವ್ಯಕ್ತಿ ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಈ ಜಯಂತಿಯನ್ನು ಆಚರಿಸುತ್ತೇವೆ ಇದು ನಿಜಕ್ಕೂ ಸಂತಸದ ವಿಷಯ ಎಂದರು. ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಲಯನ್ ಮನೋಜ್ ಕುಮಾರ್ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವಕ್ಕೆ ಕನ್ನಡ ಹೋರಾಟಗಾರರು, ಮುಖಂಡರು, ಶಿವಸೇನೆ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಈ ಜಯಂತೋತ್ಸವದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಂಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶಿವರಾಮೇಗೌಡ ರವರು ಮಾತನಾಡಿ ಭಾರತದಲ್ಲಿ ವಾಸ ಮಾಡುವವರೆಲ್ಲ ಭಾರತೀಯರು ಕರ್ನಾಟಕದಲ್ಲಿರುವವರೆಲ್ಲ ಕನ್ನಡಿಗರು ಎಂದು ಒಟ್ಟಾಗಿ ಬಾಳೋಣ ಸಂಗೊಳ್ಳಿ ರಾಯಣ್ಣ ಶಿವಾಜಿ ಸೇರಿದಂತೆ ದೇಶಕ್ಕಾಗಿ ಹೋರಾಡಿದ ಮಹನೀಯರ ಜಯಂತಿಯನ್ನು ನಾವೆಲ್ಲರೂ ಒಟ್ಟುಗೂಡಿ ಆಚರಿಸೋಣ ಎಂದರು. ನರೇಂದ್ರಬಾಬು ರವರು ಮಾತನಾಡಿ ಶಿವಾಜಿ ಮಹಾರಾಜರನ್ನು ನಾವುಗಳು ಏಕೆ ನೆನಪಿಸಿಕೊಳ್ಳುತ್ತೇವೆ ಎಂದರೆ ಅವರು ಯಾವುದೇ ಭಾಷೆಗಾಗಲಿ ಹೋರಾಡಿದವರಲ್ಲ ಈ ದೇಶದ ಸಂಸ್ಕೃತಿ ಧರ್ಮದ ಉಳಿವಿಗಾಗಿ ಹೋರಾಡಿದ ಮಹಾಪುರುಷ, ಬಾಲ್ಯದಲ್ಲಿ ಕನ್ನಡದ ಸ್ಪರ್ಶವಿಲ್ಲದೆ ಶಿವಾಜಿ ಮಹಾರಾಜರ ಚರಿತ್ರೆ ಪೂರ್ಣ ವಾಗುವುದಿಲ್ಲ, 12ನೇ ವಯಸ್ಸಿನಲ್ಲಿ ರಣನೀತಿಯನ್ನು ಕಲೆತದ್ದು ಕರ್ನಾಟಕದಲ್ಲಿ ಎಂದು ಯಾರೂ ಮರೆತಿಲ್ಲ ಆದ್ದರಿಂದ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸಬೇಕಾಗಿ ಹೊರೆತು ಭಾಷೆಗಳನ್ನು ಅಲ್ಲ ಎಂದು ಹೇಳಿದರು.
Comments
Post a Comment