KPSC ಯಿಂದ 2018-Feb ನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃತ್ತಿಯ ಕಿರಿಯ ತರಬೇತಿ ಅಧಿಕಾರಿ 1520 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

 KPSC ಯಿಂದ 2018-Feb ನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃತ್ತಿಯ ಕಿರಿಯ ತರಬೇತಿ ಅಧಿಕಾರಿ 1520 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ 








ಹೊರಡಿಸಿಲಾಗಿತ್ತು, ಮತ್ತು ಅದರ ಪ್ರಕಾರ ಸುಮಾರು 1 ತಿಂಗಳು ಕಾಲಾವಕಾಶ ಕೊಟ್ಟು online ಅರ್ಜಿಯನ್ನು ಪಡೆದಿದ್ದರು , December-2018 ರಲ್ಲಿ KPSC ನವರು Exam ನಡೆಸಿ,  November - 2019 ರಲ್ಲೀ 1:3 ಲಿಸ್ಟ್ ಅನ್ನು ಬಿಟ್ಟು ನಮ್ಮ ದಾಖಲಾತಿಗಳ ಪರಿಶೀಲನೆಗೆ ಕರೆಯುತ್ತಾರೆ ಮತ್ತು ಎಲ್ಲ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು September -2021 ಕ್ಕೆ ಬಿಡುಗಡೆ ಮಾಡುತ್ತಾರೆ ಆಮೇಲೆ ಯಾರಿಗಾದರೂ ಅಂದ್ರೆ ಆಯ್ಕೆಯಗದವರಿಗೆ ಅವರ ಆಕ್ಷೇಪಣೆಗಳನ್ನು ಸಲ್ಲಿಸಲು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತು ಸ್ವೀಕೃತವಾದ ಆಕ್ಷೇಪಣೆಗಳಿಗೆ ಸಮಂಜಸವಾದ ಉತ್ತರವನ್ನು ಕೊಟ್ಟು KPSC ನವರು February 2022 ರಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಮತ್ತು ಅರ್ಹ ಅಭ್ಯರ್ಥಿಗಳಿಗೆ KPSC ಯಿಂದ ಹಿಂಬರಹ ಕೊಟ್ಟು ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ನೇಮಕಾತಿ ಆದೇಶ ಪಡೆಯಲು ಸೂಚಿಸುತ್ತಾರೆ. ಈ ಎಲ್ಲ ಪ್ರಕ್ರಿಯೆ ನಿಸ್ಪಕ್ಷವಾಗಿ ನಿಖರವಾಗಿ ಮಾಡಲು ಸುಮಾರು 4 ವರ್ಷಗಳನ್ನು ತೋಗೊಂಡಿರುತ್ತರೆ. ಅರ್ಹರಾದ ನಾವು ನಮ್ಮ ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ನಮ್ಮ ಎಲ್ಲ ಮೂಲ ದಾಖಲಾತಿಗಳನ್ನು May-2022 ರಂದು ಜಮಾ ಮಾಡಿ ಅವುಗಳ ನೈಜತೆ ಪರಿಶೀಲನೆ ಮಾಡಿಸಿ ಕೊಟ್ಟು ನೇಮಕಾತಿ ಆದೇಶ ಪಡೆಯಲು ನಾವು ಮೊದಲೇ ಮಾಡುತ್ತಿರುವ ಎಲ್ಲ ಕೆಲಸಗಳನ್ನೂ ಬಿಟ್ಟು ಬೆಂಗಳೂರಿಗೆ ಬಂದು ಸುಮಾರು ಒಂದೂವರೆ ತಿಂಗಳುಗಳು PG ನಲ್ಲಿ ಇದ್ದು ಕಾದು ಕಾದು ಕುಳಿತರು ಇವರು ದಿನಕ್ಕೆ 3,4 ನೇಮಕಾತಿ ಆದೇಶ ಕೊಟ್ಟು ವಿನ ಕಾರಣ ಸಮಯ ವ್ಯರ್ಥ ಮಾಡುತಿದ್ದರು ಇದರಿಂದಾಗಿ August-2022 ರಿಂದ ನೇಮಕಾತಿ ಆದೇಶ ನೀಡುತ್ತಿದ್ದು ಇಲ್ಲಿಯವರೆಗೆ ಅಂದರೆ Novembar -2022 ರ ವರೆಗೆ ಅರ್ಹರಾಗಿದ್ದಾರೆ ಸುಮಾರು 1367 ಅಭ್ಯರ್ಥಿಗಳಲ್ಲಿ ಕೇವಲ 410 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಟ್ಟು ಯಾವುದೇ ಅಧಿಕೃತ ಆದೇಶ ನ್ಯಾಯಾಲಯ ಮತ್ತು ಸಚಿವಾಲಯದ ಇಲ್ಲದಿದ್ದರೂ ತಾವೇ ಒಂದು ಸಭೆ ನಡೆಸಿ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸುತ್ತಾರೆ ಇದರಿಂದ ಅರ್ಹ ಅಭ್ಯರ್ಥಿಗಳಾದ ನಾವು ಮತ್ತು ನಮ್ಮ ಕುಟುಂಬಗಳು ಈ ಕಡೆ ಹಳೆ ಕೆಲಸ ಇಲ್ಲ ಮತ್ತು ಈ ಕೆಲಸನು ಇಲ್ಲ ವಾಗಿರುದರಿಂದ ಬೀದಿ ಪಾಲಾಗಿದೆವೆ ಇದರಿಂದ ನಮಗೆ ಆರ್ಥಿಕವಾಗಿ ಸಾಮಾಜಿಕವಾಗಿ ಮಾನಸಿಕವಾಗಿ ದೈಹಿಕವಾಗಿ ಬಹಳ ತೊಂದರೆ ಯಾಗಿದೆ ಸರ್ ದಯವಿಟ್ಟು ನಮಗೆ ಇವಾಗ ನೀವೇ ಗತಿ ನಿಮ್ಮ ಕಾಲಿಗೆ ಬಿದ್ದು ಕೇಳಿ ಕೊಳ್ಳುತ್ತೇವೆ ಆದಷ್ಟು ಬೇಗ ನಮಗೂ ಕೆಲಸ ಕೊಡಿ ನಮ್ಮನ್ನು ಸಮಾಜದಲ್ಲಿ ಬದುಕುವ ಹಾಗೆ ಮಾಡಿ ನಿಮ್ಮ ಹೆಸರು ಹೇಳಿ ನಾವು ನಮ್ಮ ಕುಟುಂಬದವರು ಅನ್ನ ತಿನ್ನುತ್ತೇವೆ ಸರ್ 🙏 ನಿಮ್ಮನ್ನ ನಾವು ಎಂದು ಮರೆಯುವುದಿಲ್ಲ. ಮತ್ತು ಮುಂದಿನ ದಿನಗಳಲ್ಲಿ ಮಾನ್ಯ ನ್ಯಾಯಾಲಯದ ತೀರ್ಪು ಏನೇ ಬಂದರೂ ನಾವು ಅದನ್ನು ಸಾಂವಿಧಾನಿಕ ವಾಗೀ ತಲೆಬಾಗಿ ಸ್ವೀಕಾರ ಮಾಡುತ್ತೇವೆ ಆದರೆ ಇವಾಗ ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು 410 ಜನರಿಗೆ ನೇಮಕಾತಿ ಆದೇಶ ಕೊಟ್ಟ ಹಾಗೆ ನಮಗೂ ಕೆಲಸ ಕೊಡಿ ಸರ್ ಇಲ್ಲಾಂದರೆ ನಾವು ಸಮಾಜದಲ್ಲಿ ಬದುಕುವುದು ಬಹಳ ಕಷ್ಟ ವಾಗಿದೆ ಸರ್ 🙏🙏🙏🙏🙏🙏

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims