ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ ರಾಜ್ ಕಾರ್ತಿಕ್ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ- ದಿನೇಶ್ ಗುಂಡೂರಾವ್*
*ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ ರಾಜ್ ಕಾರ್ತಿಕ್ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ- ದಿನೇಶ್ ಗುಂಡೂರಾವ್*
ಗಾಂಧಿನಗರ: ಬೆಂಗಳೂರು ಕೇಂದ್ರ ಕಾಂಗ್ರೆಸ್ ಸಮಿತಿ ಎಸ್.ಸಿ.ವಿಭಾಗದ ಅಧ್ಯಕ್ಷರಾದ ರಾಜ್ ಕಾರ್ತಿಕ್ ರವರು ಹುಟ್ಟುಹಬ್ಬದ ಶುಭಾ ಸಂದರ್ಭದಲ್ಲಿ ಶಾಸಕರಾದ ದಿನೇಶ್ ಗುಂಡೂರಾವ್ ರವರು ಶ್ರೀಮತಿ ತಬ್ಬು ಗುಂಡೂರಾವ್,ಅನನ್ಯ ದಿನೇಶ್ ಗುಂಡೂರಾವ್ ರವರು ಭೇಟಿ ನೀಡಿ ಶುಭಾ ಕೋರಿದರು.
ಸಮಾಜ ಸೇವೆ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ ರಾಜ್ ಕಾರ್ತಿಕ್ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಕೊರೋನ ಸಾಂಕ್ರಮಿಕ ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ದಿನಸಿ ಕಿಟ್ ಮತ್ತು ಔಷಧಿ ವಿತರಣೆ ಮಾಡಿದ್ದಾರೆ .
ರಾಜ್ ಕಾರ್ತಿಕ್ ರವರು ಕಾಂಗ್ರೆಸ್ ಪಕ್ಷದ ಆನೇಕ ಹೋರಾಟಗಳಲ್ಲಿ ಭಾಗಿಯಾಗಿ, ಪಕ್ಷ ಸಂಘಟನೆಗೆ ಅವಿರತವಾಗಿ ಶ್ರಮಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಿಕ್ಕೆ ಬರಲಿದೆ ರಾಜ್ ಕಾರ್ತಿಕ್ ರಂತಹ ಸಾವಿರಾರು ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ ಎಂದು ಹೇಳಿದರು.

Comments
Post a Comment