ಕೆಪಿಸಿಸಿ ಕಚೇರಿಯಲ್ಲಿ ಹೈಡ್ರಾಮ ನಾನು ಕಾಂಗ್ರೆಸ್ ಬಿಡುತ್ತೇನೆ ನೀವ್ ಇಂಗ್ ಮಾಡಿದ್ರೆ 80 ಸೀಟು ಬರಲ್ಲ ನೀವು ಏನ್ ತೆಗೆಯೋದ
ಕೆಪಿಸಿಸಿ ಕಚೇರಿಯಲ್ಲಿ ಹೈಡ್ರಾಮ ನಾನು ಕಾಂಗ್ರೆಸ್ ಬಿಡುತ್ತೇನೆ ನೀವ್ ಇಂಗ್ ಮಾಡಿದ್ರೆ 80 ಸೀಟು ಬರಲ್ಲ ನೀವು ಏನ್ ತೆಗೆಯೋದ
ನೀವೇ ತೆಗಿಯೋದು, ನಾನೇಬಿದ್ದೇನೆ- ಕೋಟಿ ಕೋಟಿ ಸುರಿದ ಕೆಜಿಎಫ್ ಬಾಬು ಕಾಂಗ್ರೆಸ್ ಗೆ ಗುಡ್ ಬೈ
ಬೆಂಗಳೂರು: ನಾನು ಪಕ್ಷದಿಂದ ಅಲ್ಲ, ಪಕ್ಷದಿಂದ ಇರೋದು. ಪಕ್ಷಕ್ಕಾಗಿ ಕೋಟ್ಯಾಂತರ ರೂಪಾಯಿ ಕಳ್ಕೊಂಡಿದ್ದೇನೆ. ಮನೆ, ಮನೆಗೆ ಐದು ಸಾವಿರ ಕೊಟ್ಟಿದ್ದೇನೆ. ನಾನು ಕಾಂಗ್ರೆಸ್‌ಗೆ ರೆಬೆಲ್ ಆಗುತ್ತೇನೆ. ನನ್ನ ತಾಕತ್ತು ತೋರಿಸುತ್ತೇನೆ. ಕಾಂಗ್ರೆಸ್ 80 ಸೀಟು ಗೆಲ್ಲಲ್ಲ. ಹೀಗೆ ಕಾಂಗ್ರೆಸ್ ಕಚೇರಿಯಲ್ಲೇ ಕೈ ನಾಯಕರಿಗೆ ಆವಾಜ್ ಹಾಕಿದ್ದು ಬೇರೂರಿಲ್ಲ, ಕೆಜಿಎಫ್ ಬಾಬು..!
ಕೆಪಿಸಿಸಿ ಕಚೇರಿಯಲ್ಲಿ ಕೂಗಾಟ
ಕೆಪಿಸಿಸಿ ಕಚೇರಿಯಲ್ಲಿ ಕೆಜಿಎಫ್ ಬಾಬು, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಹಾಕದನವೇ ನಡೆದು ಹೋಗಿದೆ. ಕೂಗಾಟದ ಮಧ್ಯೆ ಕೆಜಿಎಫ್ ಬಾಬು, ತನಗೂ ಪಕ್ಷಕ್ಕೂ ನಾಯಕರಿಗೂ ಇರೋ ಒಳಗುಟ್ಟುಗಳು ಏನು ಅನ್ನೋದನ್ನ ಬಾಯ್ಬಿಟ್ಟಿದ್ದಾರೆ. ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆ ಪ್ರತಿ, ಮನೆಗೆ ಐದು ಸಾವಿರ ಕೊಟ್ಟಿದ್ದೇನೆ. 30 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ನಾನು ಮೂರು ಸಾವಿರ ಮನೆ ಕಟ್ಟಿಕೊಡುತ್ತಿದ್ದೇನೆ. 180 ಕೋಟಿ ಹಣ ಖರ್ಚು ಮಾಡ್ತಿದ್ದೇನೆ. ಇದನ್ನು ಯಾರೂ ಧೈರ್ಯವಾಗಿ ಹೇಳೋದಿಲ್ಲ. ಬಡವರು ಬಡವರಾಗಿಯೇ ಇರಬೇಕಾ ಅಂತಾ ಪ್ರಶ್ನಿಸಿದ್ರು.
ಕೂಡಲೆ ವಜಾಗೊಳಿಸಲು ಸೂಚನೆ
ಕೆಪಿಸಿಸಿ ಕಚೇರಿಯಲ್ಲಿ ಇದ್ದ ಕೈ ಕಾರ್ಯಕರ್ತರು ಕೆಜಿಎಫ್ ಬಾಬುಗೂ ಆವಾಜ್ ಹಾಕಿದ್ರು. ಪಕ್ಷದ ಕಚೇರಿಯಲ್ಲಿ ನಿಂತು ಪಕ್ಷಕ್ಕೆ ಚ್ಯುತಿ ಬರುವಂತೆ ವರ್ತಿಸಿದ್ದಾರೆ. ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಗೆ ಪತ್ರ ಬರೆದ್ರು. ಈ ವಿಷಯ ಹರಿಯಾಣದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಾಯ್ತು. ಅಲ್ಲಿಂದಲೇ ಕರೆ ಮಾಡಿದ ಡಿಕೆ ಶಿವಕುಮಾರ್, ಕೆಜಿಎಫ್ ಬಾಬುರನ್ನ ಕೂಡಲೇ ಪಕ್ಷದಿಂದ ಉಚ್ಛಾಟಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ನನಗೂ ಒಪ್ಪಂದ
ಡಿ.ಕೆ ಶಿವಕುಮಾರ್ ನನಗೆ ದೇವರು, ಗುರುಗಳು. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವ್ರಿಗೆ ನಾನು ಪ್ರಾಣ ಕೊಡುವವನು. ಡಿಕೆಶಿ ಸಾಹೇಬರು, ಸಿದ್ದರಾಮಯ್ಯ ಸಾಹೇಬರು ಕಷ್ಟಪಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು. ಆದರೆ, ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಇರುವವರ ಬೆಂಬಲ ಸಿಗುತ್ತಿಲ್ಲ ಎಂದು ಬಾಬು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ನನಗೂ ಒಪ್ಪಂದವಾಗಿದೆ. ಅವರು ವ್ಯಾಪಾರದಲ್ಲಿ ಮಾತ್ರ ಗುರುಗಳು. ರಾಜಕೀಯದಲ್ಲಿ ಅವರ ಗುರು ಅಲ್ಲ. ನನಗೆ ನಾನೇ ಗುರು ಬೇರೆ ಯಾರೂ ಅಲ್ಲ. ಪರಿಷತ್ ಚುನಾವಣೆಯಲ್ಲಿ 800 ಮತ ಬಿದ್ದಿತ್ತು. ಅದು ನನ್ನ ಹೆಸರಲ್ಲಿ ಬಂದಿದೆ ಎಂದರೆ ಪಕ್ಷದ ಹೆಸರಲ್ಲಿ ಬಂದಿಲ್ಲ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.
ಸಲೀಂ ಅಹಮ್ಮದ್ ಮುಸಲ್ಮಾನ ಅಲ್ಲ
ನಾನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತಾ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ನನ್ನನ್ನ ಒಳಗೆ ಬಿಡದಂತೆ ಹೇಳಿದ್ದರು. ಸಲೀಂ ಅಹಮ್ಮದ್ ಕೈಯಲ್ಲಿ ಏನು ಆಗುತ್ತೆ. ಅವರ ಬಳಿ ನಾಲ್ಕು ಜನರು ಇಲ್ಲ. ಯಾರಿಗೂ ಗೌರವ ಕೊಡೋದಿಲ್ಲ. ಸಲೀಂ ಅಹಮ್ಮದ್ ಅವನು ಯಾರೂ ಅನ್ನೋದೇ ಗೊತ್ತಿಲ್ಲ. ಮುಸಲ್ಮಾನನೂ ಅಲ್ಲ. ಅವನನ್ನ ನೋಡಿ ಯಾರೂ ವೋಟ್ ಕೊಡೋದಿಲ್ಲ. ಜಮೀರ್ ಅಹಮ್ಮದ್, ಯು.ಟಿ ಖಾದರ್, ತನ್ವೀರ್ ಸೇಠ್ ಅಲ್ಪಸಂಖ್ಯಾತ ನಾಯಕರು. ಗೌರವದಿಂದ ಕಳುಹಿಸಿಕೊಡಲಿ. ತಂತ್ರ ಮಾಡಿ ಪಕ್ಷದಿಂದ ತೆಗೆಯಬೇಡಿ. ಅವಮಾನ ಮಾಡಿ ತೆಗೆದರೆ ಕಾಂಗ್ರೆಸ್‌ಗೆ ರೆಬೆಲ್ ಆಗುತ್ತೇನೆ. ನನ್ನ ಸಾಮರ್ಥ್ಯದ ಮೇಲೆ ಹತ್ತು ಸ್ಥಾನ ಗೆದ್ದು ಬರುತ್ತೇನೆ ಎಂದರು.
ನೀವು 80 ಸೀಟು ಗೆಲ್ಲಲ್ಲ
ಕಾಂಗ್ರೆಸ್‌ನವರು ಕಾನ್ಫಿಡೆನ್ಸ್‌ನಲ್ಲಿದ್ದಾರೆ. ಇಲ್ಲಿ ಚುನಾವಣೆಯಲ್ಲಿ 80 ಸೀಟು ಬರಲ್ಲ. ಕಾಂಗ್ರೆಸ್ ಪಕ್ಷದಿಂದ ತೆಗೆಯಿರಿ ಪರವಾಗಿಲ್ಲ. ಕೆಜಿಎಫ್ ಬಾಬು ಏನು ಅನ್ನೋದನ್ನ ತೋರಿಸುತ್ತೇನೆ. ನಾನು ಪಕ್ಷದಿಂದ ಇಲ್ಲ ಪಕ್ಷ ನನ್ನಿಂದ ಇರೋದು. ಪಕ್ಷಕ್ಕಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದೇನೆ. ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ರಕ್ತ ಕೊಟ್ಟಿದೆ. ನಮ್ಮ ತಂದೆ, ತಾತ ಎಲ್ಲರೂ ರಕ್ತ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್‌ಗೆ ಅವಶ್ಯಕತೆ ಇಲ್ಲ ಅಂದ್ರೆ ಪಕ್ಷ ಬಿಡುತ್ತೇನೆ. ಅವರು ಹೇಳೋದಕ್ಕೆ ಮೊದಲೇ ಪಕ್ಷ ಬಿಡುತ್ತೇನೆ. ಪಕ್ಷಕ್ಕೆ ಗುಡ್ ಬೈ ಅಂತಾ ಕೆಜೆಎಫ್ ಬಾಬು ಘೋಷಿಸಿದ್ದಾರೆ.



Comments
Post a Comment