25ತಿಂಗಳ ಬಿಲ್ಲು ಪಾವತಿ ಮಾಡಿ ಎಂದು ಗುತ್ತಿಗೆದಾರರು ಪ್ರತಿಭಟನೆ*
*25ತಿಂಗಳ ಬಿಲ್ಲು ಪಾವತಿ
ಮಾಡಿ ಎಂದು ಗುತ್ತಿಗೆದಾರರು
ಪ್ರತಿಭಟನೆ*
ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಅವರಣದಲ್ಲಿ ಬಿ.ಬಿ.ಎಂ.ಪಿ.ಗುತ್ತಿಗೆದಾರರ ಸಂಘದ ವತಿಯಿಂದ ಕಾಮಗಾರಿ ಪೂರ್ಣಗೊಂಡ ಬಿಲ್ಲು ಪಾವತಿ ಮಾಡಿದರು ಕಳೆದ 25ತಿಂಗಳ ಪಾವತಿಯಾಗದಿರುವುದು ಖಂಡಿಸಿ ಪ್ರತಿಭಟನೆ ಮಾಡಿದರು.
ಬಿ.ಬಿ.ಎಂ.ಪಿ.ಗುತ್ತಿಗೆದಾರರ ಸಂಘ ಮತ್ತು ವಿದ್ಯುತ್ ಗುತ್ತಿಗೆದಾರರ ಸಂಘ, ಕಸ ಗುತ್ತಿಗೆದಾರರ ಸಂಘದ ನೂರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರುಗಳಾದ ಕೆ.ಟಿ.ಮಂಜುನಾಥ್, ಅಂಬಿಕಾಪತಿ, ಕಸದ ಗುತ್ತಿಗೆದಾರರಾದ ಬಾಲಸುಬ್ರಮಣ್ಯರವರು ನೂರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಟಿ.ಮಂಜುನಾಥ್ ರವರು ಮಾತನಾಡಿ
ಬಿಬಿಎಂಪಿ ಕಾಮಗಾರಿಗಳ 25: ತಿಂಗಳ ಬಾಕಿ ಬಿಲ್ ಬಿಡುಗಡೆಗಾಗಿ ಮತ್ತು ಇತ್ತೀಚಿನ ದಿನಗಳಲ್ಲಿ ಹೊಸ ಕಾನೂನುಗಳಿಂದ ಗುತ್ತಿಗೆದಾರರಿಗೆ ಆಗಿರುವ ತೊಂದರೆಗಳ ಬಗ್ಗೆ ಸುಮಾರು ಬಾರಿ ಮುಖ್ಯ ಆಯುಕ್ತರಲ್ಲಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಅಧಿಕಾರಿಗಳಿಂದ ಸಿಕ್ಕಿರುವುದಿಲ್ಲ.,
ಆದ್ಧರಿಂದ ಎಲ್ಲಾ ಗುತ್ತಿಗೆದಾರರೂ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡಲಾಗುತ್ತಿದೆ.
ಸಕಾಲಕ್ಕೆ ಕಾಮಗಾರಿ ಪೂರ್ಣಗೊಂಡ ಬಿಲ್ಲು ಪಾವತಿ ಮಾಡದೇ ಇರುವುದರಿಂದ ಗುತ್ತಿಗೆದಾರರು ಬಡ್ಡಿ ಕಟ್ಟಿ, ಸಾಲದ ಸುಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಗುತ್ತಿಗೆದಾರರಿಗೆ ಬಿಲ್ಲು ಪಾವತಿ ಸಕಾಲಕ್ಕೆ ಕೊಡಬೇಕು ಎಂಬ ವಿನಂತಿ ಮಾಡುತ್ತೇವೆ ಎಂದು ಹೇಳಿದರು.

Comments
Post a Comment