10000ಸಾವಿರ ಮನೆ ಭೇಟಿ: ಜನರ ಆಶೀರ್ವಾದ ಪಡೆದ ಪುಣ್ಯದ ಫಲ-ಮಾಜಿ ಸಚಿವ ಎಸ್.ಸುರೇಶ್ ಕುಮಾರ್*
*10000ಸಾವಿರ ಮನೆ ಭೇಟಿ: ಜನರ ಆಶೀರ್ವಾದ ಪಡೆದ
ಪುಣ್ಯದ ಫಲ-ಮಾಜಿ ಸಚಿವ
ಎಸ್.ಸುರೇಶ್ ಕುಮಾರ್*
ರಾಜಾಜಿನಗರ ವಿಧಾನಸಭಾ ಕ್ಷೇತ್ರದ: *ಶ್ರೀರಾಮಮಂದಿರ ವಾರ್ಡ್ ನಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿಯ ಗುದ್ದಲಿಪೂಜೆಯನ್ನು ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್* ರವರು ನೇರವೆರಿಸಿದರು, ನಂತರ ಮನೆ,ಮನೆಗಳಿಗೆ ಭೇಟಿ ನೀಡಿದರು.
*ಇದೇ ಸಂದರ್ಭದಲ್ಲಿ ಶಾಸಕರಾದ ಎಸ್.ಸುರೇಶ್ ಕುಮಾರ್ ರವರು* ಮಾತನಾಡಿ ಜನರ ಸಮಸ್ಯೆ ಅಲಿಸಲು, ನಮ್ಮ ಕ್ಷೇತ್ರದ ಅಭಿವೃದ್ದಿ ಪಡಿಸಲು ಮನೆ, ಮನೆ ಭೇಟಿ ಸಹಕಾರಿಯಾಗಿದೆ.
ಜನರ ಆಶಯದಂತೆ ಯೋಜನೆ ರೂಪಿಸಿ, ಆನುಷ್ಠಾನಕ್ಕೆ ತರುವುದು ಜನಪ್ರತಿನಿಧಿಗಳ ಕರ್ತವ್ಯ ಈ ನಿಟ್ಟಿನಲ್ಲಿ ಕಳೆದ 200ದಿನಗಳಲ್ಲಿ 10000ಸಾವಿರ ಮನೆಗಳಿಗೆ ಭೇಟಿ ನೀಡಲಾಗಿದೆ.
ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬದವರ ಜೊತೆಯಲ್ಲಿ ಆತ್ಮೀಯ ಸಮಾಲೋಚನೆಯಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಿದೆ.
ಸ್ಲಂ ಪ್ರದೇಶ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಭೇಟಿ ನೀಡಿದಾಗ ಅವರ ಅವಶ್ಯಕತೆ ತಕ್ಕಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ನೇರವಾಗಿ ತಲುಪಿಸುವ, ಅರ್ಹ ಫಲಾನುಭವಿಗಳಿಗೆ ಗುರುತಿಸುವ ಕಾರ್ಯ ಯಶ್ವಸಿಯಾಗಿ ನಡೆದಿದೆ.
ಒಂಟಿ ಮನೆ ಯೋಜನೆ,ವಿಧಾನ ವೇತನ, ಹಿರಿಯ ನಾಗರಿಕರ ಪಿಂಚಣಿ, ಕಾರ್ಮಿಕರ ಕಾರ್ಡ್ ಸಾವಿರಾರು ಜನರಿಗೆ ಸೌಲಭ್ಯ ಸೌವಲತ್ತು ನೇರವಾಗಿ ತಲುಪಿಸಲಾಗಿದೆ.
10ಸಾವಿರ ಮನೆಗಳಿಗೆ ಭೇಟಿ ಕಾರ್ಯಕ್ರಮ ಉತ್ತಮ ಜನಸ್ಪಂದನೆ ಸಿಕ್ಕಿದೆ .ಜನರ ಆಶೀರ್ವಾದ ಸಿಕ್ಕಿರುವುದು ಪುಣ್ಯದ ಫಲ ಎಂದು ಹೇಳಿದರು.
ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರರಾವ್,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ದೀಪಾ ನಾಗೇಶ್, ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್, ಬಿ.ಜೆ.ಪಿ.ಮುಖಂಡರುಗಳಾದ ಸತೀಶ್ ಭಗವಾನ್,ಮುನ್ನಭಾಯಿ,ಕಿರಣ್,ಕೃಷ್ಣಮೂರ್ತಿ,ಅಮಿತ್ ಜೈನ್ ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲು ಸಸಿಗಳನ್ನು ವಿತರಿಸಲಾಯಿತು.

Comments
Post a Comment