*ಪಂಚರತ್ನ ರಥಯಾತ್ರೆಯಿಂದ ಜೆ.ಡಿ.ಎಸ್.ಪಕ್ಷಕ್ಕೆ ನವಚೈತನ್ಯ ಶಕ್ತಿ ತುಂಬಿದೆ* *ಹೊಸ ಪರಿವರ್ತನೆ ಜೊತೆಯಲ್ಲಿ ಜೆ.ಡಿ.ಎಸ್.ಪಕ್ಷ ಮುಂಬರುವ ವಿಧಾನಸಭಾ ಚುನಾವಣೆ ಸ್ಪಷ್ಟ ಬಹುಮತ ಆಯ್ಕೆ- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ* ಬೆಂಗಳೂರು:ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಕೇಂದ್ರ ಕಛೇರಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿರವರು ಮತ್ತು ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ಸಮ್ಮುಖದಲ್ಲಿ ಸಮಾಜ ಸೇವಕರಾದ ಗೋವಿಂದರಾಜುರವರು ಮತ್ತು ಅಜಾದ್ ನಗರ ವಾರ್ಡ್ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಗೌರಮ್ಮ ಸಿ. ಗೋವಿಂದರಾಜುರವರು, ಮಾಜಿ ಉಪಾಮಹಾಪೌರರಾದ ರಾಮೇಗೌಡರವರು ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ(JDS)ಪಕ್ಷ ಸೇರ್ಪಡೆ ಕಾರ್ಯಕ್ರಮ. ಜೆ.ಡಿ.ಎಸ್.ಪಕ್ಷದ ಧ್ವಜಾ ನೀಡಿ 53ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಜೆ.ಡಿ.ಎಸ್.ಪಕ್ಷಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ *ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು* ಮಾತನಾಡಿ ಇಡಿ ಭಾರತದಲ್ಲಿ ಹೊಸ ಬದಲಾವಣೆಯಾಗುತ್ತಿದೆ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬದಲಾವಣೆಯಾಗುತ್ತಿದೆ. ಜನತಾದಳ ದೇಶ ಆಳಿದ ಪಕ್ಷ, ನಮ್ಮನ್ನ ಬಿಟ್ಟು ಹೋದವರು ಮತ್ತೇ ಪಕ್ಷ ಸೇರಲು ಬಯಸುತ್ತಿದ್ದಾರೆ. ನನ್ನ ವಯಸ್ಸು 90ಆಗಿದೆ. ರಾಜ್ಯದಲ್ಲಿ ನಿರ್ಭಯವಾಗಿ ಮಾತನಾಡಲು ಜನರ ಶಕ್ತಿ ನನಗಿದೆ. ಈ ಪಕ್ಷ ಉಳಿಯಬೇಕು ಮತ್ತೇ ತಲೆ ಎತ್ತಿ ನಿಲ್ಲುವ ಶಕ್ತಿ ಬರಬೇಕು. ಕುಮಾರಸ್ವಾಮಿರವರ ನೇತೃತ್ವದಲ್ಲಿ ಪಂಚರತ್ನ ಕಾರ್ಯಕ್ರಮ ರಾಜ್ಯದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ *ಕುಮಾರಸ್ವಾಮಿರವರು* ಮಾತನಾಡಿ ಬೆಂಗಳೂರುನಗರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಗೋವಿಂದರಾಜು,ರಾಮೇಗೌಡರು,ಗೌರಮ್ಮ ಗೋವಿಂದರಾಜು ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಹೊಸ ಪರಿವರ್ತನೆ ತರಬೇಕು ,ಹಣ ಹಂಚಿಕೆಯಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಜನತಾದಳ ಪರವಾಗಿ ಮೊದಲನೇಯ ಸೀಟು ಚಾಮರಾಜಪೇಟೆ ವಿಧಾನಸಭಾ ಗೆಲುವಿನ ಫಲಿತಾಂಶ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ. ಜನತಾದಳ ಶಕ್ತಿ ಬಗ್ಗೆ ಜನರ ತೀರ್ಮಾನವಾಗಲಿದೆ. ಪಂಚರತ್ನ ರಥಯಾತ್ರೆಯಿಂದ ಜೆಡಿಎಸ್ ಪಕ್ಷಕ್ಕೆ ನವಚೈತನ್ಯ ತುಂಬಿದೆ. ಬೆಂಗಳೂರುನಗರ ವಿಧಾನಸಭಾ 10ರಿಂದ12ಸ್ಥಾನಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲಲಿದೆ. ಬಿ.ಜೆ.ಪಿ.ಮತ್ತು ಕಾಂಗ್ರೆಸ್ ಪಕ್ಷ ಅಂತರಿಕ ಸರ್ವೆ ಮಾಡಿಸುತ್ತಿದೆ. ಮೊದಲು 17ಸೀಟು ಬರುತ್ತದೆ ಈಗ 50ರಿಂದ 60ಬರುತ್ತದೆ ಅದರೆ ರಾಜ್ಯದಲ್ಲಿ ಜೆ.ಡಿ.ಎಸ್.ಪಕ್ಷ 123ಸ್ಥಾನ ಗೆಲ್ಲಲಿದೆ. ಜನತಾದಳ ಹೊಸಪರಿವರ್ತನೆ, ಜನತೆ ತೀರ್ಮಾನದ ಮೇಲೆ ಅಧಿಕಾರ ಏರಲಿದೆ ಎಂದು ಹೇಳಿದರು. *ಗೋವಿಂದರಾಜುರವರು* ಮಾತನಾಡಿ ಬಡವರ, ದೀನದಲಿತರ ಪರ ಸೇವೆ ಮಾಡುತ್ತಾ ಜನಸೇವೆಯೆ ದೇವರ ಸೇವೆ ಎಂದು ನಂಬಿಕೊಂಡು ಬಂದ್ದಿದೇನೆ. ಧ್ವನಿ ಇಲ್ಲದ ಜನರಿಗೆ ಸೇವೆ ಮಾಡಬೇಕು ಎಂಬ ಆಶಯ ನನ್ನದು . ನನ್ನ ಜನಸೇವೆ ಗುರುತಿಸಿ ನನ್ನ ಪತ್ನಿಯಾದ ಗೌರಮ್ಮ ಗೋವಿಂದರಾಜುರವರನ್ನ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆ ಮಾಡಿದರು. ರಾಷ್ಟ್ರೀಯ ಪಕ್ಷಗಳು ಜನ ಹಿತಚಿಂತನೆ ಮಾಡುವುದಿಲ್ಲ. ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಎಲ್ಲ ವರ್ಗ,ಧರ್ಮದವರನ್ನ ಸಾಮಾನ ರೀತಿಯಲ್ಲಿ ಕಾಣುವ ನಾಡು,ನುಡಿ ಹಿತಕಾಯವ ಪಕ್ಷವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಣ್ಣ,ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ನೇತೃತ್ವದಲ್ಲಿ ಜೆ.ಡಿ.ಎಸ್.ಪಕ್ಷ ಸಂಘಟನೆ ಮಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಮುಖ್ಯಮಂತ್ರಿಗಳಾಗಿ ಕುಮಾರಣ್ಣ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು. ಬೆಂಗಳೂರುನಗರ ಜೆ.ಡಿ.ಎಸ್.ಜಿಲ್ಲಾಧ್ಯಕ್ಷರಾದ ಪ್ರಕಾಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಆರಿಫ್ ಪಾಷ,ಇಮ್ರಾನ್ ಪಾಷರವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸುಧಾ ಮೀನ,ಕೆ ಗಿರೀಜಾ,ಉಷಾ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜೆ.ಡಿ.ಎಸ್.ಸೇರ್ಪಡೆಯಾದರು.
*ಪಂಚರತ್ನ ರಥಯಾತ್ರೆಯಿಂದ ಜೆ.ಡಿ.ಎಸ್.ಪಕ್ಷಕ್ಕೆ ನವಚೈತನ್ಯ ಶಕ್ತಿ ತುಂಬಿದೆ*
*ಹೊಸ ಪರಿವರ್ತನೆ ಜೊತೆಯಲ್ಲಿ ಜೆ.ಡಿ.ಎಸ್.ಪಕ್ಷ ಮುಂಬರುವ ವಿಧಾನಸಭಾ ಚುನಾವಣೆ ಸ್ಪಷ್ಟ ಬಹುಮತ ಆಯ್ಕೆ- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ*
ಬೆಂಗಳೂರು:ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಕೇಂದ್ರ ಕಛೇರಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿರವರು ಮತ್ತು ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ಸಮ್ಮುಖದಲ್ಲಿ ಸಮಾಜ ಸೇವಕರಾದ ಗೋವಿಂದರಾಜುರವರು ಮತ್ತು ಅಜಾದ್ ನಗರ ವಾರ್ಡ್ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಗೌರಮ್ಮ ಸಿ. ಗೋವಿಂದರಾಜುರವರು, ಮಾಜಿ ಉಪಾಮಹಾಪೌರರಾದ ರಾಮೇಗೌಡರವರು ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ(JDS)ಪಕ್ಷ ಸೇರ್ಪಡೆ ಕಾರ್ಯಕ್ರಮ.
ಜೆ.ಡಿ.ಎಸ್.ಪಕ್ಷದ ಧ್ವಜಾ ನೀಡಿ 53ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಜೆ.ಡಿ.ಎಸ್.ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ *ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು* ಮಾತನಾಡಿ ಇಡಿ ಭಾರತದಲ್ಲಿ ಹೊಸ ಬದಲಾವಣೆಯಾಗುತ್ತಿದೆ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬದಲಾವಣೆಯಾಗುತ್ತಿದೆ.
ಜನತಾದಳ ದೇಶ ಆಳಿದ ಪಕ್ಷ, ನಮ್ಮನ್ನ ಬಿಟ್ಟು ಹೋದವರು ಮತ್ತೇ ಪಕ್ಷ ಸೇರಲು ಬಯಸುತ್ತಿದ್ದಾರೆ.
ನನ್ನ ವಯಸ್ಸು 90ಆಗಿದೆ. ರಾಜ್ಯದಲ್ಲಿ ನಿರ್ಭಯವಾಗಿ ಮಾತನಾಡಲು ಜನರ ಶಕ್ತಿ ನನಗಿದೆ. ಈ ಪಕ್ಷ ಉಳಿಯಬೇಕು ಮತ್ತೇ ತಲೆ ಎತ್ತಿ ನಿಲ್ಲುವ ಶಕ್ತಿ ಬರಬೇಕು.
ಕುಮಾರಸ್ವಾಮಿರವರ ನೇತೃತ್ವದಲ್ಲಿ ಪಂಚರತ್ನ ಕಾರ್ಯಕ್ರಮ ರಾಜ್ಯದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ *ಕುಮಾರಸ್ವಾಮಿರವರು* ಮಾತನಾಡಿ ಬೆಂಗಳೂರುನಗರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಗೋವಿಂದರಾಜು,ರಾಮೇಗೌಡರು,ಗೌರಮ್ಮ ಗೋವಿಂದರಾಜು ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಹೊಸ ಪರಿವರ್ತನೆ ತರಬೇಕು ,ಹಣ ಹಂಚಿಕೆಯಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ.
ಜನತಾದಳ ಪರವಾಗಿ ಮೊದಲನೇಯ ಸೀಟು ಚಾಮರಾಜಪೇಟೆ ವಿಧಾನಸಭಾ ಗೆಲುವಿನ ಫಲಿತಾಂಶ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ.
ಜನತಾದಳ ಶಕ್ತಿ ಬಗ್ಗೆ ಜನರ ತೀರ್ಮಾನವಾಗಲಿದೆ.
ಪಂಚರತ್ನ ರಥಯಾತ್ರೆಯಿಂದ ಜೆಡಿಎಸ್ ಪಕ್ಷಕ್ಕೆ ನವಚೈತನ್ಯ ತುಂಬಿದೆ.
ಬೆಂಗಳೂರುನಗರ ವಿಧಾನಸಭಾ 10ರಿಂದ12ಸ್ಥಾನಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲಲಿದೆ.
ಬಿ.ಜೆ.ಪಿ.ಮತ್ತು ಕಾಂಗ್ರೆಸ್ ಪಕ್ಷ ಅಂತರಿಕ ಸರ್ವೆ ಮಾಡಿಸುತ್ತಿದೆ.
ಮೊದಲು 17ಸೀಟು ಬರುತ್ತದೆ ಈಗ 50ರಿಂದ 60ಬರುತ್ತದೆ ಅದರೆ ರಾಜ್ಯದಲ್ಲಿ ಜೆ.ಡಿ.ಎಸ್.ಪಕ್ಷ 123ಸ್ಥಾನ ಗೆಲ್ಲಲಿದೆ.
ಜನತಾದಳ ಹೊಸಪರಿವರ್ತನೆ, ಜನತೆ ತೀರ್ಮಾನದ ಮೇಲೆ ಅಧಿಕಾರ ಏರಲಿದೆ ಎಂದು ಹೇಳಿದರು.
*ಗೋವಿಂದರಾಜುರವರು* ಮಾತನಾಡಿ ಬಡವರ, ದೀನದಲಿತರ ಪರ ಸೇವೆ ಮಾಡುತ್ತಾ ಜನಸೇವೆಯೆ ದೇವರ ಸೇವೆ ಎಂದು ನಂಬಿಕೊಂಡು ಬಂದ್ದಿದೇನೆ.
ಧ್ವನಿ ಇಲ್ಲದ ಜನರಿಗೆ ಸೇವೆ ಮಾಡಬೇಕು ಎಂಬ ಆಶಯ ನನ್ನದು .
ನನ್ನ ಜನಸೇವೆ ಗುರುತಿಸಿ ನನ್ನ ಪತ್ನಿಯಾದ ಗೌರಮ್ಮ ಗೋವಿಂದರಾಜುರವರನ್ನ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆ ಮಾಡಿದರು.
ರಾಷ್ಟ್ರೀಯ ಪಕ್ಷಗಳು ಜನ ಹಿತಚಿಂತನೆ ಮಾಡುವುದಿಲ್ಲ.
ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಎಲ್ಲ ವರ್ಗ,ಧರ್ಮದವರನ್ನ ಸಾಮಾನ ರೀತಿಯಲ್ಲಿ ಕಾಣುವ ನಾಡು,ನುಡಿ ಹಿತಕಾಯವ ಪಕ್ಷವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಣ್ಣ,ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ನೇತೃತ್ವದಲ್ಲಿ ಜೆ.ಡಿ.ಎಸ್.ಪಕ್ಷ ಸಂಘಟನೆ ಮಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಮುಖ್ಯಮಂತ್ರಿಗಳಾಗಿ ಕುಮಾರಣ್ಣ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಬೆಂಗಳೂರುನಗರ ಜೆ.ಡಿ.ಎಸ್.ಜಿಲ್ಲಾಧ್ಯಕ್ಷರಾದ ಪ್ರಕಾಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಆರಿಫ್ ಪಾಷ,ಇಮ್ರಾನ್ ಪಾಷರವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸುಧಾ ಮೀನ,ಕೆ ಗಿರೀಜಾ,ಉಷಾ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜೆ.ಡಿ.ಎಸ್.ಸೇರ್ಪಡೆಯಾದರು.

Comments
Post a Comment