ಬೆಂಗಳೂರಿನ ಅತಿ ಡೊಡ್ಡ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕರ್ಪಣೆ*
*ಬೆಂಗಳೂರಿನ ಅತಿ ಡೊಡ್ಡ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕರ್ಪಣೆ*
ಗಾಂಧಿನಗರ ವಿಧಾನಸಭಾ ಕ್ಷೇತ್ರದ: ಸ್ವಾತಂತ್ರ್ಯ ಉದ್ಯಾನವನ ಅವರಣದಲ್ಲಿ ಬೆಂಗಳೂರಿನ ಅತಿ ಡೊಡ್ಡ ಒಣತ್ಯಾಜ್ಯ ಸಂಗ್ರಹ ಕೇಂದ್ರ ಲೋಕರ್ಪಣೆ ಸಮಾರಂಭ.
*ಸ್ಥಳೀಯ ಶಾಸಕರಾದ ದಿನೇಶ್ ಗುಂಡೂರಾವ್ ರವರು* ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕರ್ಪಣೆ ಮಾಡಿದರು.
*ಮುಖ್ಯ ಅಭಿಯಂತರಾದ ಬಸವರಾಜ್ ಕಬಾಡೆ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲತಾ ನವೀನ್ ಕುಮಾರ್, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದರು*
ಇದೇ ಸಂದರ್ಭದಲ್ಲಿ ಶಾಸಕರಾದ *ದಿನೇಶ್ ಗುಂಡೂರಾವ್* ರವರು ಮಾತನಾಡಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಹಸಿಕಸ, ಒಣಕಸ ಒಟ್ಟಾರೆ 4ಲಕ್ಷ ಟನ್ ಸಂಗ್ರಹವಾಗುತ್ತದೆ.
ನಗರ ಹೊರ ಭಾಗದಲ್ಲಿ ಸಮರ್ಪಕ ವಿಲೇವಾರಿ ಮಾಡದೇ ಕಸವನ್ನ ಸುರಿಯುವುದರಿಂದ ಪರಿಸರ ಹಾಳಾಗಿ ಹೋಗುತ್ತದೆ ಮತ್ತು ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಸದ ಸಮಸ್ಯೆಗೆ ನಿವಾರಣೆ ಮಾಡಬೇಕು ನಗರದ ಅತಿಡೊಡ್ಡ ಒಣತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ.
ಸಾರ್ವಜನಿಕರು ಮನೆ ಮುಂದೆ ಕಸ ಸಂಗ್ರಹದ ಆಟೋದವರಿಗೆ ಕಸ ವಿಂಗಡನೆ ಮಾಡಿ, ಸ್ವಚ್ಚತೆ ಕಾಪಾಡಿ.
ಹಸಿಕಸದಿಂದ ಗೊಬ್ಬರ ತಯಾರಿಕೆ ಮಾಡಬಹುದು, ಒಣತ್ಯಾಜ್ಯದಿಂದ ಮರುಬಳಕೆ ಮಾಡಬಹುದು.
ಪರಿಸ ರಕ್ಷಣೆ, ಸುರಕ್ಷತೆಗೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು.
ಗಾಂಧಿನಗರ ವಿಧಾನಸಭಾ ಕ್ಷೇತ್ರ ಕಸಮುಕ್ತ ಮತ್ತು ಸ್ವಚ್ಚತಾ ಕ್ಷೇತ್ರವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

Comments
Post a Comment