ಕಾಂಗ್ರೆಸ್ ಸೇವಾದಳ ಮಹಿಳಾ ಮುಖಂಡರಾದ ಗಿರೀಜಾ ಎಸ್. ಹೂಗಾರಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಟಿಕೇಟು ನೀಡುವಂತೆ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಒತ್ತಾಯ
*ಕಾಂಗ್ರೆಸ್ ಸೇವಾದಳ ಮಹಿಳಾ ಮುಖಂಡರಾದ ಗಿರೀಜಾ ಎಸ್. ಹೂಗಾರಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಟಿಕೇಟು ನೀಡುವಂತೆ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಒತ್ತಾಯ*
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಉಪಾಧ್ಯಕ್ಷೆಯಾಗಿರುವ ಗಿರೀಜಾ ಎಸ್. ಹೂಗಾರರವರು ಕಳೆದ 28ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತೆ ದುಡಿಯುತ್ತಿದ್ದಾರೆ.
ಗಿರೀಜಾ ಎಸ್.ಹೂಗಾರ ರವರು ಮಹಿಳಾ ಪರ ಹೋರಟಗಾರ್ತಿ,ಅತ್ಯಂತ ಹಿಂದುಳಿದ ಸಮುದಾಯದ ಹೂಗಾರ ಸಮುದಾಯಕ್ಕೆ ಸೇರಿದವರು .
ಆರ್ಥಿಕವಾಗಿ ಹಿಂದುಳಿದ ಸಮಾಜದವರನ್ನ ಸಮಾಜದ ಮುಖ್ಯವಾಹಿನಿ ತರಬೇಕು ಎಂಬ ಆಶಯದಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಜನಸೇವೆಯೆ ನನ್ನ ಉಸಿರು ಎಂಬಂತೆ ಸಾರ್ವಜನಿಕರ ಸಮಸ್ಯೆಗಳು ಇದ್ದಲ್ಲಿ ತತಕ್ಷಣ ಬಂದು ಸಮಸ್ಯೆಗಳ ನಿವಾರಣೆಗಾಗಿ ಶ್ರಮವಹಿಸುತ್ತಾರೆ.
ಕಾಂಗ್ರೆಸ್ ಸೇವಾ ದಳದಿಂದ ಗಿರೀಜಾ ಎಸ್. ಹೂಗಾರರವರ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ,ಉಚಿತ ಆರೋಗ್ಯ ಶಿಬಿರ ಮತ್ತು ಪ್ರತಿವರ್ಷ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಹಲವಾರು ಸಮಾಜಮುಖಿ ಕಾರ್ಯಗಳಿಂದ ಹುಬ್ಬಳ್ಳಿ-ಧಾರವಾಡದ ಮನೆ ಮಗಳಂತೆ ಆಗಿದ್ದಾರೆ.
2023ನೇ ವಿಧಾನಸಭಾ ಚುನಾವಣೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸೇವಾ ದಳದ ಉಪಾಧ್ಯಕ್ಷೆಯಾದ ಗಿರೀಜಾ ಎಸ್. ಹೂಗಾರ ನೀಡಬೇಕು ಎಂದು ಸ್ಥಳೀಯ ಮತದಾರರು, ಕಾಂಗ್ರೆಸ್ ಪಕ್ಷದವರು ಅಭಿಪ್ರಾಯವಾಗಿದೆ.
ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಅಧ್ಯಕ್ಷರಾದ ಅರವಿಂದ್ ರವರು ಮಹಾಸಭಾ ವತಿಯಿಂದ ಗಿರೀಜಾ ಎಸ್. ಹೂಗಾರರವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೇಟು ನೀಡಬೇಕುಂದು ಒತ್ತಾಯ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಗಿರೀಜಾ ಎಸ್. ಹೂಗಾರರವರು ಮಾತನಾಡಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಪಕ್ಷದ ಸಿದ್ದಾಂತವನ್ನು ಮನೆ,ಮನೆಗಳಿಗೆ ತಲುಪುವಂತೆ ಮಾಡಿದ್ದೇನೆ.
ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಜನವಿರೋಧಿ, ದುರಾಡಳಿತ ವಿರುದ್ದ ಜನಜಾಗೃತಿ ಜೊತೆಯಲ್ಲಿ ಸತತ ಹೋರಾಟ ಮಾಡುತ್ತಿದ್ದೇನೆ.
ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು, ರಾಜ್ಯ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ರಾಮಚಂದ್ರರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳಕ್ಕೆ ಇನ್ನು ಹೆಚ್ಚಿನ ಸಂಘಟನೆ, ಶಕ್ತಿ ತುಂಬುತ್ತೇನೆ ಎಂದು ಹೇಳಿದರು.

Comments
Post a Comment