ಅನಧಿಕೃತ ಖಾಸಗಿ ಕ್ಲಿನಿಕ್ ಗಳ ಮೇಲೆ ದಾಳಿ ಮತ್ತು ಬೀಗಮುದ್ರೆ* "
" *ಅನಧಿಕೃತ ಖಾಸಗಿ ಕ್ಲಿನಿಕ್ ಗಳ ಮೇಲೆ ದಾಳಿ ಮತ್ತು ಬೀಗಮುದ್ರೆ*
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹಾಗೂ ಚಿಕ್ಕನಹಳ್ಳಿ ಗ್ರಾಮಗಳ ವಿವಿಧ ಅನಧಿಕೃತ ಖಾಸಗಿ ಕ್ಲಿನಿಕ್ ಗಳ ಮೇಲೆ ಹೊಸಕೋಟೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಯ ಸಹಕಾರದೊಂದಿಗೆ *ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ವೀಣಾ* ರವರು ದಾಳಿಯನ್ನು ಮಾಡಿ ಬೀಗ ಮುದ್ರೆಯನ್ನು ಹಾಕಿಸಿದರು.
ನಂತರ ಅವರು ಮಾತನಾಡುತ್ತಾ ಈಗಾಗಲೇ ಅನೇಕ ಬಾರಿ ಇಂತಹ ಅನಧಿಕೃತ ಖಾಸಗಿ ಕ್ಲಿನಿಕ್ ಗಳಿಗೆ ನೋಟಿಸ್ ನೀಡಲಾಗಿದ್ದು, ಇವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಇವರುಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ *ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನಿರ್ದೇಶನದ ಮೇರೆಗೆ* ದಾಳಿ ಮಾಡಿ *ಕೆಪಿಎಂಇ ಕಾಯ್ದೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ನಿರ್ವಹಿಸಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ* ಸಾರ್ವಜನಿಕ ಹಿತದೃಷ್ಟಿಯಿಂದ ಬೀಗ ಮುದ್ರೆ ಜಡಿಯಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀಗುರುರಾಜ್* , ರಾಜಸ್ವ ನಿರೀಕ್ಷಣಾಧಿಕಾರಿಗಳಾದ *ಶ್ರೀಮತಿ ಅಂಜಿನಮ್ಮ,ಶ್ರೀ ಜ್ಞಾನಮೂರ್ತಿ, ಶ್ರೀ ಶ್ರೀಕಾಂತ್* , ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿ *ಶ್ರೀಮತಿ ಸೌಮ್ಯ,* ಕಾರ್ಯಕ್ರಮ ವ್ಯವಸ್ಥಾಪಕರಾದ *ಶ್ರೀಮತಿ ಶೈಲಜಾ* , ತಾಲೂಕು ಕ್ಷಯ ರೋಗ ನಿಯಂತ್ರಣ ಘಟಕದ ಸಿಬ್ಬಂದಿಗಳಾದ **ಶ್ರೀಸುದೀಪ್** ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Comments
Post a Comment