ನಾಡಿನ ಜಲ,ನೆಲ,ಭಾಷೆ ರಕ್ಷಣೆಗೆ ಸರ್ಕಾರ ಕಟಿಬದ್ದವಾಗಿ ಶ್ರಮಿಸುತ್ತಿದೆ-ಸಚಿವ ವಿ.ಸೋಮಣ್ಣ*
*ನಾಡಿನ ಜಲ,ನೆಲ,ಭಾಷೆ ರಕ್ಷಣೆಗೆ ಸರ್ಕಾರ
ಕಟಿಬದ್ದವಾಗಿ ಶ್ರಮಿಸುತ್ತಿದೆ-ಸಚಿವ ವಿ.ಸೋಮಣ್ಣ*
ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಶಾಸಕರ ಕಛೇರಿ ಅವರಣದಲ್ಲಿ 2023ಕ್ಯಾಲೆಂಡರ್ ಬಿಡುಗಡೆ ಮತ್ತು ಲೇಖಕಿ ಡಾ||ತಮಿಳ್ ಸೆಲ್ವಿರವರಿಗೆ ಅಭಿನಂದನಾ ಸಮಾರಂಭ.
ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು, ಸಾಹಿತಿ ಭೈರಮಂಗಲ ರಾಮೇಗೌಡ, ಶ್ರೀ.ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜ ಸೋಮಣ್ಣರವರು, ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಕವಿತಾ ಮಣ್ಣಿಗೇರಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪಾಲನೇತ್ರರವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಡಾ||ತಮಿಳ್ ಸೆಲ್ವಿರವರಿಗೆ ಅಭಿನಂದಿಸಿದರು.
*ಸಚಿವ ವಿ.ಸೋಮಣ್ಣರವರು ಮಾತನಾಡಿ* ಜನಪ್ರತಿನಿಧಿಗಳು ಉತ್ತಮ ಕೆಲಸ ಮಾಡಿದರೆ, ದೇವರ ಜೊತೆಯಲ್ಲಿ ಜನರ ಆಶೀರ್ವಾದ ಲಭಿಸುತ್ತದೆ.
ಕಳೆದ ನಾಲ್ಕುವರೆ ವರ್ಷದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಮಾದರಿ ವಿಧಾನಸಭಾ ಕ್ಷೇತ್ರವಾಗಿ ರೂಪಗೊಂಡಿದೆ.
ಜನವರಿ 20ತಾರೀಖು ದಾಸರಹಳ್ಞಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾನ್ಯ ಮುಖ್ಯಮಂತ್ರಿಗಳಿಂದ ಲೋಕರ್ಪಣೆಯಾಗಲ
ಕಿಡ್ನಿ ಡಯಾಲಿಸಿಸ್ ಕೇಂದ್ರದಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಕಳೆದ 7ತಿಂಗಳಲ್ಲಿ 10000ಸಾವಿರ ಕಿಡ್ನಿ ಸಮಸ್ಯೆ ಇರುವವರು ಚಿಕಿತ್ಯೆ ಪಡೆದಿರುತ್ತಾರೆ.
ಒಬ್ಬ ಯಶ್ವಸಿ ರಾಜಕಾರಣಿಯ ಹಿಂದೆ ತಂದೆ,ತಾಯಿ ಮತ್ತು ಪತ್ನಿ ಹಾಗೂ ಜನರ ಆಶೀರ್ವಾದ ಕಾರಣ.
ವಿವಿಧ ಭಾಷೆ,ಧರ್ಮ ಜಾತಿಗಳು ಇದ್ದರು ದೇಶ ಏಕತೆಯಿಂದ ಬಾಳುತ್ತಿದ್ದೇವೆ.
ಕೊರೋನ ಸಂಕಷ್ಟದ ಸಮಯದಲ್ಲಿ ದಿಟ್ಟತನದಿಂದ ಎದುರಿಸಿ, ಜನರ ಸಂಕಷ್ಟಗಳ ನಿವಾರಣೆಗೆ ನೇರವಾದ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭಾರತ ದೇಶ ಭವಿಷ್ಯ ಉಜ್ವಲವಾಗಿದೆ.
ಕನ್ನಡ ಜಲ, ನೆಲ, ಭಾಷೆ ರಕ್ಷಣೆಗೆ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿರವರ ಸರ್ಕಾರ ಕಟಿಬದ್ದರಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ತಮಿಳುನಾಡು ಸರ್ಕಾರದ ಶ್ರೇಷ್ಠ ಅನುವಾದಕರು ಪ್ರಶಸ್ತಿಯನ್ನು ಸ್ವೀಕರಿಸಿರುವ ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ನಿರ್ದೇಶಕರು ಹಾಗೂ 'ಕನ್ನಡ ಸಾಹಿತ್ಯ ಪರಿಷತ್ತು, ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರು, ಉಭಯ ಭಾಷಾ ಲೇಖಕಿ ಡಾ. ತಮಿಳ್ ಸೆಲ್ವಿ ಅವರು ಅಭಿನಂದನಾ ಸನ್ಮಾನವನ್ನು ಸ್ವೀಕರಿಸಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ,ದಾಸೇಗೌಡ,
ರೂಪಲಿಂಗೇಶ್ವರ್, ಪಲ್ಲಿವಿ ಚನ್ನಪ್ಪ,ಗಂಗಭೈರಯ್ಯ,
ರಾಮಪ್ಪ, ಸಾಹಿತಿಗಳು ಗಣ್ಯರು ಭಾಗವಹಿಸಿದ್ದರು.

Comments
Post a Comment