ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಮತ್ತೊಂದು ಭೂ ಹಗರಣ ಬಯಲು
• ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಮತ್ತೊಂದು ಭೂ ಹಗರಣ ಬಯಲು
• ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಆಪ್ತನಿಂದ ತಮಗಾಗಿ MUDA ಮಾಲೀಕತ್ವದ ಸ್ವತ್ತನ್ನು De - notification ಮಾಡಿಸಿಕೊಂಡ ಹಗರಣ.
• ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವರ ಆಪ್ತ ಸಿ. ಬಸವೇಗೌಡ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು.
• ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ, ಸರ್ಕಾರೀ ಭೂ ಕಬಳಿಕೆ ಪ್ರಕರಣಗಳು ದಾಖಲು
• ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರವು 1985 ರಲ್ಲಿ ಮೈಸೂರಿನ ಹಿನಕಲ್ ಗ್ರಾಮದ ಹಲವು ಜಮೀನುಗಳನ್ನು ವಿಜಯನಗರ 2ನೇ ಬಡಾವಣೆ ನಿರ್ಮಾಣಕ್ಕಾಗಿ ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡಿತ್ತು.
• ಅದಕ್ಕೆ ಸಂಬಂಧಿಸಿದಂತೆ ಹಿನಕಲ್ ಗ್ರಾಮದ ಸಾಕಮ್ಮ ಎಂಬುವವರ ಮಾಲೀಕತ್ವದ ಸರ್ವೆ ನಂಬರ್ 70/4A ಜಮೀನನ್ನೂ ಸಹ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿತ್ತು.
• 22/11/1985 ರಂದು ಸರ್ವೆ ನಂಬರ್ 70/4A ಜಮೀನಿನ ಮಾಲೀಕರಾದ ಸಾಕಮ್ಮನವರಿಗೆ ಪರಿಹಾರ ಹಣ (Award) ವನ್ನು ಬಿಡುಗಡೆ ಮಾಡಿತ್ತು.
• ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡ ಹಿನಕಲ್ ಗ್ರಾಮದ ಜಮೀನುಗಳಲ್ಲಿ MUDA ವಿಜಯನಗರ 2ನೇ ಹಂತ ಬಡಾವಣೆ ನಿರ್ಮಾಣ ಮಾಡಿತ್ತು.
• MUDA ನಿರ್ಮಿಸಿರುವ ವಿಜಯನಗರ 2ನೇ ಹಂತ ಬಡಾವಣೆ ಸರ್ವೆ ನಂಬರ್ 70/4A ಜಮೀನಿನಲ್ಲಿ 3161, 3162 ಮತ್ತು 3163 ಸಂಖ್ಯೆಯ ತಲಾ 80 X 120 ಅಳತೆಯ ನಿವೇಶನಗಳನ್ನು ರಚಿಸಿತ್ತು.
• ವಿಜಯನಗರ 2ನೇ ಹಂತ ಬಡಾವಣೆಯ ನಿವೇಶನ ಸಂಖ್ಯೆ 3161 ನ್ನು ಕಾನೂನು ರೀತ್ಯಾ ಅರ್ಜಿದಾರರಾಗಿದ್ದ ಸುಂದರ್ ರಾಜ್ ಎಂಬುವವರಿಗೆ MUDA ಹಂಚಿಕೆ ಮಾಡಿತ್ತು ಮತ್ತು ಮನೆ ನಿರ್ಮಿಸಿಕೊಳ್ಳಲು ನಕ್ಷೆ ಮಂಜೂರಾತಿಯನ್ನು ನೀಡಿತ್ತು.
• ನಂತರದ ಅವಧಿಯಲ್ಲಿ ಸದರಿ ಜಮೀನಿನ ಮಾಲೀಕರಾದ ಸಾಕಮ್ಮ ರವರು ತಮ್ಮ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ MUDA ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.
• ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಾಣ ಮಾಡಿ ಎಲ್ಲಾ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಆಯಾ ಅರ್ಜಿದಾರರಿಗೆ ಕ್ರಯ ಪತ್ರಗಳನ್ನು ಮಾಡಿಕೊಟ್ಟು ಅವರ ಸ್ವಾಧೀನಾನುಭವಕ್ಕೆ ಈಗಾಗಲೇ ವಹಿಸಿರುವುದರಿಂದ ಕಾನೂನಿನಲ್ಲಿ ಸದರಿ ಜಮೀನಿನ De - Notification ಗೆ ಅವಕಾಶವಿರುವುದಿಲ್ಲ ಎಂದು ಅಂದಿನ ಆಯುಕ್ತರಾದ ಎ. ಎಂ. ಕುಂಜಪ್ಪ, KAS ರವರು ದಿನಾಂಕ 25/12/1995 ರಂದು ಆದೇಶಿಸಿದ್ದರು.
• 1994 ರಿಂದ 1999 ರ ವರೆಗಿನ 05 ವರ್ಷಗಳ ಅವಧಿಯಲ್ಲಿ ಮಾನ್ಯ ಸಿದ್ಧರಾಮಯ್ಯನವರು ದೇವೇಗೌಡರು ಮತ್ತು ಜೆ. ಹೆಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
• 30/05/1997 ರಿಂದ 04/08/1999 ರ ಅವಧಿಯಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ಕ್ಕೆ ಸಿದ್ಧರಾಮಯ್ಯನವರು ತಮ್ಮ ಆತ್ಮೀಯ ಸ್ನೇಹಿತ ಸಿ. ಬಸವೇಗೌಡ ರವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು.
• ವಿಜಯನಗರ 2ನೇ ಬಡಾವಣೆಯ ನಿವೇಶನ ಸಂಖ್ಯೆ 3161 ರ ಮೇಲೆ ಕಣ್ಣು ಹಾಕಿದ್ದ ಸಿದ್ಧರಾಮಯ್ಯನವರು - MUDA ಅಧ್ಯಕ್ಷರಾಗಿದ್ದ ತಮ್ಮ ಅತ್ಯಾಪ್ತ ಸಿ. ಬಸವೇಗೌಡರ ಮೂಲಕ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 19/09/1997 ರಂದು ಸರ್ವೆ ನಂಬರ್ 70/4A ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿರುವುದಾಗಿ De - notification ಮಾಡಿಸಿಕೊಟ್ಟಿರುತ್ತಾರೆ
• MUDA ಆಯುಕ್ತರ ಆದೇಶಕ್ಕೆ ವ್ಯತಿರಿಕ್ತವಾಗಿ ಮತ್ತು ಆಯುಕ್ತರ ಆದೇಶವನ್ನು ಉಲ್ಲಂಘಿಸಿ ಸಂವಿಧಾನಾತ್ಮಕವಾಗಿ ಯಾವುದೇ ಅಧಿಕಾರವಿಲ್ಲದ ಅಂದಿನ MUDA ಅಧ್ಯಕ್ಷರಾದ ಸಿ. ಬಸವೇಗೌಡ ರವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸದರಿ ಸ್ವತ್ತನ್ನು De - notification ಮಾಡಿದ್ದರು.
• ಯಾವುದೇ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತು ಅಂತಹ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತಹ (De - notification) ಪ್ರಕ್ರಿಯೆ ಗಳಲ್ಲಿ ನಿಯಮಾನುಸಾರ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಮೂಲಕ ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆದುಕೊಳ್ಳಬೇಕಿರುತ್ತದೆ ಮತ್ತು ಈ ಸಂಬಂಧ ರಾಜ್ಯ ಸರ್ಕಾರವು ಸರ್ಕಾರೀ ಅಧಿಸೂಚನೆ (Gazette Notification) ಹೊರಡಿಸಿ, ಸರ್ಕಾರೀ ಆದೇಶ (G.O.) ವನ್ನು ಮಾಡಬೇಕಿರುತ್ತದೆ.
• ಮೇಲೆ ತಿಳಿಸಿದ ಯಾವ ಪ್ರಕ್ರಿಯೆಗಳನ್ನೂ ಮಾಡದೇ ಏಕಾಏಕಿ ಸ್ವತಃ ತಾವೇ ಸದರಿ ಸ್ವತ್ತನ್ನು De - notification ಮಾಡಿರುವ ಆದೇಶವನ್ನು ಹೊರಡಿಸುವ ಮೂಲಕ ಸಿ. ಬಸವೇಗೌಡ ರವರು ಗಂಭೀರವಾದ ಅಪರಾಧವನ್ನು ಎಸಗಿದ್ದರು.
• ಹಿಂದಿನ ಆಯುಕ್ತರು De - notification ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ ಸಹ 1997 ರಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಕ್ರಮವಾಗಿ De - notification ಮಾಡಿದ್ದ ಸಿ. ಬಸವೇಗೌಡರ ನಿಯಮ ಬಾಹಿರ ಕಾರ್ಯವನ್ನು ಪ್ರಶ್ನಿಸುವುದಾಗಲೀ ಅಥವಾ ಸರ್ಕಾರದ ಗಮನಕ್ಕೆ ತರುವುದಾಗಲೀ MUDA ಆಯುಕ್ತರಾಗಿದ್ದ S. N. ನಾಗರಾಜ್ ಅವರು ಮಾಡಲೇ ಇಲ್ಲ.
• ಅಂದಿನ ಉಪ ಮುಖ್ಯಮಂತ್ರಿ, ಹಣಕಾಸು ಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಕ್ಕೆ ಹೆದರಿ ಎಸ್. ಎನ್. ನಾಗರಾಜ್ ರವರು ಈ ಭೂ ಹಗರಣದ ಬಗ್ಗೆ ಮೌನ ವಹಿಸಿದ್ದರು.
• ಈ ರೀತಿ ನಿಯಮ ಬಾಹಿರವಾಗಿ ದಿನಾಂಕ 19/09/1997 ರಂದು De - notification ಮಾಡಿದ 27ನೇ ದಿನ ಅಂದರೆ ದಿನಾಂಕ 26/11/1997 ರಂದು ಸಿದ್ಧರಾಮಯ್ಯನವರು ಸರ್ವೆ ನಂಬರ್ 70/4A ರಲ್ಲಿ MUDA ರಚಿಸಿದ್ದ 3161 ಸಂಖ್ಯೆಯ ನಿವೇಶನವನ್ನು (9,600 ಚ. ಅಡಿ ವಿಸ್ತೀರ್ಣ) 6,72,000 ರೂಪಾಯಿಗಳಿಗೆ ಸಾಕಮ್ಮನವರಿಂದ ಖರೀದಿ ಮಾಡಿದ್ದರು.
• ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಸದರಿ ಸ್ವತ್ತಿನಲ್ಲಿ ಕಾನೂನು ರೀತ್ಯಾ MUDA ದಿಂದ ಹಂಚಿಕೆಗೆ ಪಡೆದುಕೊಂಡು, ನಕ್ಷೆ ಮಂಜುರಾತಿ ಪಡೆದುಕೊಂಡು ಸುಂದರ್ ರಾಜ್ ರವರು ನಿರ್ಮಿಸಿಕೊಂಡಿದ್ದ ಮನೆಯನ್ನು ನಿರ್ದಾಕ್ಷಿಣ್ಯವಾಗಿ ಸಿದ್ಧರಾಮಯ್ಯನವರು ಕೆಡವಿ ಹಾಕಿದ್ದರು.
• ಸದರಿ ನಿವೇಶನದಲ್ಲಿ ಸಿದ್ಧರಾಮಯ್ಯನವರು ತಮ್ಮ ವಾಸಕ್ಕೆಂದು ಬೃಹತ್ ಬಂಗಲೆಯನ್ನು ನಿರ್ಮಾಣ ಮಾಡಿಕೊಂಡಿದ್ದರು.
• ಖರೀದಿ ಮಾಡಿದ 06 ವರ್ಷಗಳಲ್ಲಿ ದಿನಾಂಕ 29/09/2003 ರಂದು ತಾವು 6,72,000 ರೂಪಾಯಿಗಳಿಗೆ ಖರೀದಿ ಮಾಡಿದ ಸ್ವತ್ತನ್ನು ಒಂದು ಕೋಟಿ ರೂಪಾಯಿಗಳಷ್ಟು ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದರು.
• ಸ್ವತಃ ಕಾನೂನು ಪದವೀಧರರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡು MUDA ನಿರ್ಮಿಸಿದ್ದ ಬಡಾವಣೆಗೆ ಸಂಬಂಧಿಸಿದ ಜಾಗವನ್ನು - ತಮ್ಮ ಅತ್ಯಂತ ಆಪ್ತ ಮತ್ತು MUDA ಅಧ್ಯಕ್ಷರಾಗಿದ್ದ ಸಿ. ಬಸವೇಗೌಡರು ಕಾನೂನಾತ್ಮಕವಾಗಿ ಯಾವುದೇ ಅಧಿಕಾರವನ್ನು ಹೊಂದಿರದೇ ಇದ್ದರೂ ಸಹ ಅವರ ಮೂಲಕ De - notification ಮಾಡಿಸಿಕೊಂಡು ನಂತರ ಪರಿಹಾರ ಧನವನ್ನು ಪಡೆದುಕೊಂಡಿದ್ದ ಸದರಿ ಜಮೀನಿನ ಹಿಂದಿನ ಮಾಲೀಕರಾಗಿದ್ದ ಸಾಕಮ್ಮ ರವರಿಂದ ಸದರಿ ಸ್ವತ್ತನ್ನು ಖರೀದಿ ಮಾಡುವ ಮೂಲಕ ಗುರುತರ ಅಪರಾಧವನ್ನು ಎಸಗಿದ್ದರು.
• ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, MUDA ದ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಸೇರಿದಂತೆ ಹಲವು ಭ್ರಷ್ಟ ಅಧಿಕಾರಿಗಳು ಭಾಗಿಯಾಗಿರುವ ಈ De - notification ಹಗರಣವನ್ನು CBI ಅಥವಾ CID ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ N. R. ರಮೇಶ್
• ಪತ್ರಿಕಾಗೋಷ್ಠಿಯಲ್ಲಿ ಹಗರಣದ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N. R. ರಮೇಶ್ ಹಗರಣ ಬಯಲು

• ಪತ್ರಿಕಾಗೋಷ್ಠಿಯಲ್ಲಿ ಹಗರಣದ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N. R. ರಮೇಶ್
Comments
Post a Comment