ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು*
*ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು*
*ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ-ಮಾಜಿ ಸಚಿವ ಎಸ್.ಸುರೇಶ್ ಕುಮಾರ್*
ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ದಯಾನಂದನಗರ ವಾರ್ಡ್ ನಲ್ಲಿ ಸ್ವಾಮಿ ಅಯ್ಯಪ್ಪ ಪೂಜಾ ಮಹೋತ್ಸವ ಸಮಾರಂಭ.
ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್, ರಾಜ್ಯ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್, ಬೆಂಗಳೂರುನಗರ ಜಿಲ್ಲಾ ಕೇಂದ್ರ ಬಿ.ಜೆ.ಪಿ.ಅಧ್ಯಕ್ಷರಾದ ಅಭಿಲಾಶ್ ರೆಡ್ಡಿ, ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು, ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ಸಂಜಯ್ ಕುಮಾರ್ ರವರು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
*ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು .ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು.
ಜನರ ನಡುವೆ ಇದ್ದಾಗ ಜನರ ಸಮಸ್ಯೆ ಅರಿಯಲು ಮತ್ತು ಪರಿಹರಿಸಲು ಸಾಧ್ಯ ಈ ನಿಟ್ಟಿನಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ 7ವಾರ್ಡ್ ಗಳಲ್ಲಿ ಕಳೆದ ಆರು ತಿಂಗಳಿಂದ ಮನೆ,ಮನಗೆ ಭೇಟಿ ಕಾರ್ಯಕ್ರಮ ಜನಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಮ್ಮ ಕ್ಷೇತ್ರದ ಸುಮಾರು 7500ಮನೆಗಳಿಗೆ ಇದುವರಗೆ ಭೇಟಿ ನೀಡಲಾಗಿದೆ .
ಸಾರ್ವಜನಿಕರ ಸಮಸ್ಯೆಗಳು ಮತ್ತು ನಮ್ಮ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳನ್ನು ಜನರ ಸಲಹೆ ಪಡೆದು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಿದೆ.
ಕಳೆದ ನಾಲ್ಕುವರೆ ವರ್ಷದ ಅಭಿವೃದ್ದಿ ಯೋಜನೆಗಳು ಜನರ ಮನೆಗಳಿಗೆ ತಲುಪಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ.
ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿ ಭಾರತ ದೇಶ ವಿಶ್ವಗುರುವಾಗಿ ಹೊರಹೊಮ್ಮಿದೆ.
ಬಿ.ಜೆ.ಪಿ.ಪಕ್ಷದಲ್ಲಿ ಕಾರ್ಯಕರ್ತರು, ಸಂಘಟನೆಗೆ ಡೊಡ್ಡ ಶಕ್ತಿ. ಪ್ರತಿದಿನ,ಪ್ರತಿಕ್ಷಣ ಹೋರಾಟಕ್ಕೆ ಮಂಚೂಣಿಯಾಗಿ ನಿಲ್ಲುತ್ತಾನೆ.
ಅದರಿಂದ ಬಿ.ಜೆ.ಪಿ.ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನು ಡೊಡ್ಡ ಹುದ್ದೇ ಅಲಂಕಾರಿಸುತ್ತಾನೆ ಎಂದು ಹೇಳಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರಾಜಣ್ಣ, ದೀಪಾ ನಾಗೇಶ್, ಬಿ.ಜೆ.ಪಿ.ಮುಖಂಡರುಗಳಾದ ಗಂಗಾಧರ್(ಗೂಳಿ), ಗಿರೀಶ್ ರವರು ಪಾಲ್ಗೊಂಡಿದ್ದರು.

Comments
Post a Comment