ಸೇವಾ ಇನ್ ಆ್ಯಕ್ಷನ್, ಎಲ್ ಟಿ ಐ ಮೈಂಡ್ ಟ್ರೀ ನಿಂದ ವಿಶ್ವ ಅಂಗವಿಕಲ ದಿನಾಚರಣೆ ಆಚರಣೆ: ಮೆಗಾ ರಸಪ್ರಶ್ನೆ ಸ್ಪರ್ದಾ ಕಾರ್ಯಕ್ರಮ
ಸೇವಾ ಇನ್ ಆ್ಯಕ್ಷನ್, ಎಲ್ ಟಿ ಐ ಮೈಂಡ್ ಟ್ರೀ ನಿಂದ ವಿಶ್ವ ಅಂಗವಿಕಲ ದಿನಾಚರಣೆ ಆಚರಣೆ: ಮೆಗಾ ರಸಪ್ರಶ್ನೆ ಸ್ಪರ್ದಾ ಕಾರ್ಯಕ್ರಮ.
ದಿವ್ಯಾಂಗರ ಏಳಿಗೆಗೆ ಶ್ರಮಿಸುವ ಸೇವಾ ಸಂಸ್ಥೆಗಳಿಗೆ ಕೇಂದ್ರ ಅಗತ್ಯ ನೆರವು: ಎ.ನಾರಾಯಣ ಸ್ವಾಮಿ
ವಿಶ್ವ ಅಂಗವಿಕಲ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿಂದು ವಿವಿಧ ಸ್ವಯಂ ಸೇವಾ ಹಾಗೂ ವಿಶೇಷ ಚೇತನ ಸಂಸ್ಥೆಗಳವತಿಯಿಂದ ದಿವ್ಯಾಂಗ ವಿಶೇಷ ಚೇತನ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಬೆಂಗಳೂರಿನ ಬಿಎಂಎಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
ಕೇಂದ್ರ ಸರ್ಕಾರದಿಂದ ದಿವ್ಯಾಂಗ ಮಕ್ಕಳಿಗೆ ಅನೇಕ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಇಂತಹ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ದಿವ್ಯಾಂಗರ ಏಳಿಗೆಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಕೇಂದ್ರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎ.ನಾರಾಯಣಸ್ವಾಮಿ, ಎಚ್. ಎಸ್ ಗೋಪಿನಾಥ್, ಎಲ್ ಟಿ ಐ ಮೈಂಡ್ ಟ್ರೀನ ಹಿರಿಯ ನಿರ್ದೇಶಕ ಪ್ರತ್ಯುಶ್ ಕುಮಾರ್ ಪಾಂಡ, ಪಣೀಶ್ ರಾವ್, ಉಪಾಧ್ಯಕ್ಷ ರಾದ ರೂಮಾ ಬ್ಯಾನರ್ಜಿ, ಕಾರ್ಯ ದರ್ಶಿ ರಾಜಶೇಖರ ರೆಡ್ಡಿ ಮತ್ತಿತರರು ಹಾಜರಿದ್ದರು.
ಕರ್ನಾಟಕದ ವಿವಿಧ ಮೂಲೆಗಳಿಂದ ದಿವ್ಯಾಂಗ ಮಕ್ಕಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರೂಮಾ ಬ್ಯಾನರ್ಜಿ ಮಾತನಾಡಿ, ಮೊದಲ ಹಂತವಾಗಿ ಕರ್ನಾಟಕ ದಲ್ಲಿ ಈ ಕಾರ್ಯಕ್ರಮ ನಡೆಸಲಾಗಿದ್ದು, ಮುಂಬೈ, ಹೈದರಾಬಾದ್, ಕಾಕಿಬಾಡ, ದೆಹಲಿ, ಕೊಚ್ಚಿನ್ ನಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಚೇತನರಿಗೆ ಈ ಸ್ಪರ್ಧೆ ಯನ್ನು ನಡೆಸಲಾಗುವುದು ಎಂದು ತಿಳಿಸಿದರು.

Comments
Post a Comment