ದೇಹ ಸೇರಿತು ಮಣ್ಣು, ಅಂದರಿಗೆ ಬೆಳಕಾಯಿತು ಕಣ್ಣು, ಸಾವಲ್ಲು ಸಾರ್ಥಕತೆ ಮೆರೆದ ಹೆಣ್ಣು"

 " ದೇಹ ಸೇರಿತು ಮಣ್ಣು, ಅಂದರಿಗೆ ಬೆಳಕಾಯಿತು ಕಣ್ಣು, ಸಾವಲ್ಲು ಸಾರ್ಥಕತೆ ಮೆರೆದ  ಹೆಣ್ಣು"




" *ಜೀವನವಾಯಿತು ದಂತಕಥೆ - ನೇತ್ರದಾನ ಮಹಾದಾನ* "

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಯೆನಗುಂಟೆ ಉಪ ಕೇಂದ್ರದ  ಅತ್ತಿಬೆಲೆ ಗ್ರಾಮದಲ್ಲಿನ " *ಬುಡ್ಡಕ್ಕನವರಮುನೇಗೌಡ* "ರವರ ಮನೆಯ ಹಿರಿಯ ಜೀವ *ಶತಾಯುಷಿ (103 ವರ್ಷ) ಶ್ರೀಮತಿ ಮುನಿಯಮ್ಮ* ( ದಿ!! ಮುನಿಶಾಮಪ್ಪನವರ ಧರ್ಮಪತ್ನಿ ) ರವರು ದಿನಾಂಕ -21-11-2022 ರಂದು ದೈವಾಧೀನರಾಗಿದ್ದು  ಅದೇ ದಿನದಂದು ಸೂಲಿಬೆಲೆ ಆರೋಗ್ಯ ಕೇಂದ್ರದ *ವೈದ್ಯಾಧಿಕಾರಿಗಳಾದ ಡಾ ಶಶಿಕಲಾ* ಹಾಗೂ *ನೇತ್ರಾಧಿಕಾರಿಗಳಾದ ಶ್ರೀ ನಾಗರಾಜ್* ರವರ ಮಾರ್ಗದರ್ಶನದ ಮೇರೆಗೆ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ನೇತ್ರವೈದ್ಯ ತಂಡದ ಸಹಕಾರದೊಂದಿಗೆ ದಾನ ಮಾಡಿ ಸದರಿಯವರ ಎರಡು ಕಣ್ಣುಗಳನ್ನು ದಾನ ಪಡೆದ ಹಿನ್ನೆಲೆಯಲ್ಲಿ ತಾಲೂಕು *ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್* ರವರೊಂದಿಗೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದರಿ ಮೃತರ ಮನೆಗೆ ಭೇಟಿ ನೀಡಿ ಮೃತರ *ಮೊಮ್ಮಗಳಾದ ಶ್ರೀಮತಿ ಸುಮಿತ್ರಮ್ಮ* ನವರಿಗೆ ಸಸಿ ನೀಡುವುದರ ಮೂಲಕ ಅಭಿನಂದಿಸಲಾಯಿತು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ