ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ*
*ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ*
ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರ ವಾರ್ಡ್ ಮಾಜಿ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಮಂಜುಳ ವಿಜಯಕುಮಾರ್ ಮತ್ತು ವಿಜಯಕುಮಾರ್ ರವರ ನಿವಾಸದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಯವ ಸಮಾರಂಭ ಆಯೋಜಿಸಲಾಗಿತ್ತು.
ಮಾಜಿ ಶಾಸಕರಾದ ಪ್ರಿಯಾಕೃಷ್ಣ, ಮಾಜಿ ಮಹಾಪೌರರಾದ ಜಿ.ಪದ್ಮಾವತಿ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ,ಹೆಚ್.ಆರ್.ಕೃಷ್ಣಪ್ಪರವರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು
ವೆಂಕಟೇಶ್ವರ ಸ್ವಾಮಿ ದೇವಾಲಯ ಚನ್ನಕೇಶವಚಾರ್ಯ ಕಲ್ಯಾಣೋತ್ಸವ ನೇರವೆರಿಸಿದರು ಮತ್ತು ದೇವರ ಭಕ್ತಿಗೀತೆಗಳನ್ನು ಹಾಡಲಾಯಿತು.
ಕುಟುಂಬ ಕಲಹ, ಗಂಡ,ಹೆಂಡತಿ ನಡುವೆ ವೈಮನಸ್ಸು ಹಾಗೂ ಮದುವೆಯಾಗದೇ ಇರುವ ಹುಡುಗ,ಹುಡುಗಿಯರಿಗೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಭಾಗಿಯಾದರೆ ಇರುವ ಸಂಕಷ್ಟಗಳು ಮತ್ತು ಮುಂಬರುವ ಸಂಕಷ್ಟಗಳು ದೂರವಾಗಿ ಸುಖ,ಶಾಂತಿ ನೆಮ್ಮದ್ದಿ ಜೀವನ ಸಾಗಿಸಬೇಕಾದರೆ ಶ್ರೀ ಶ್ರೀನಿವಾಸ್ ಕಲ್ಯಾಣೋತ್ಸವದಲ್ಲಿ ಭಾಗಿಯಾಗಬೇಕು ಎಂದು ಅಚಾರ್ಯರು ತಿಳಿಸಿದರು.

Comments
Post a Comment