ನಾಡಿನ ಇತಿಹಾಸ ಸಾರುವ ಜಾನಪದ ಕಲೆ*
*ನಾಡಿನ ಇತಿಹಾಸ ಸಾರುವ ಜಾನಪದ ಕಲೆ*
ವಿಜಯನಗರ::ಕೆ.ಟಿ.ಎಸ್.ವಿ.ಮಹಿಳಾ ಕಾಲೇಜು ಸಭಾಂಗಣದಲ್ಲಿ *ಕಲಾಕುಟೀರ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ* ಜಾನಪದ ಸಾಂಸ್ಕೃತಿಕ ಸಂಭ್ರಮ ಜಾನಪದ ಕಲಾ ಉತ್ಸವ ಆಯೋಜಿಸಿದ್ದರು.
*ಪ್ರಾಂಶುಪಾಲರಾದ ಶ್ರೀಮತಿ ರೇವತಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಶ್ರೀಮತಿ ಮಂಜುಳ, ನಿರ್ದೇಶಕರಾದ ಶ್ರೀಮತಿ ತಾರ, ರಾಷ್ಟ್ರ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಗಂಗಣ್ಣ, ರಂಗಭೂಮಿ ಕಲಾವಿದರಾದ ನಂಜಪ್ಪ, ಪ್ರಾಂಶುಪಾಲರಾದ ಶಿವನಂಜಯ್ಯರವರು ದೀಪಾ ಬೆಳಗಿಸಿ ಉದ್ಘಾಟಿಸಿದರು*.
ನಂತರ ಸೋಮನಕುಣಿತ,ಕಂಸಾಳೆ, ಸುಗಮ ಸಂಗೀತ, ವೀರಗಾಸೆ, ಜಾನಪದ ಗಾಯನ, ಕರಗ ನೃತ್ಯವನ್ನು ಅದ್ಬುತ ಪ್ರದರ್ಶನ ನೀಡಿದರು.
ಕಲೆ,ಸಾಹಿತ್ಯ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹನೀಯರುಗಳಿಗೆ ಸನ್ಮಾನ ಮಾಡಲಾಯಿತು.
*ಪ್ರಧಾನ ಕಾರ್ಯದರ್ಶಿಯವರಾದ ಚನ್ನಕೇಶವರವರು* ಮಾತನಾಡಿ ಕಲಾಕುಟೀರ ಸ್ಕೂಲ್ ಆಫ್ ಆರ್ಟ್ಸ್ ಭಾರತೀಯ ಕಲೆ,ಸಾಹಿತ್ಯ ಮತ್ತು ಸಂಗೀತ ಉಳಿಸಿ, ಬೆಳಸಲು ಶ್ರಮಿಸುತ್ತಿದೆ.
ರಾಜ್ಯದ ಇತಿಹಾಸ ತಿಳಿಯಬೇಕಾದರೆ ನಮ್ಮ ನಾಡಿನ ಕಲೆ, ಸಾಹಿತ್ಯ ಅರಿಯಬೇಕು.
ಇಂದಿನ ಮಕ್ಕಳಿಗೆ ಜಾನಪದ ಕಲೆ,ಸಂಗೀತದ ಅರಿವು ಕಡಿಮೆ ಇದೆ. ಮುಂದಿನ ಯುವ ಪೀಳಿಗೆಗೆ ನಮ್ಮ ಜಾನಪದ ಕಲೆ ಕಲಿಸಿ,ಉಳಿಸುವ ಪ್ರಯತ್ನ ನಮ್ಮದು.
ಕಲಾಕುಟೀರ ಸಂಸ್ಥೆ ವತಿಯಿಂದ ಮಕ್ಕಳಿಗೆ ಉಚಿತವಾಗಿ ಜಾನಪದ ಕಲೆ ತರಭೇತಿ ಶಿಬಿರ ಆಯೋಜಿಸಲಾಗುತ್ತಿದೆ.
ಜಾನಪದ ಕಲೆಯಲ್ಲಿ ಸಾಧಕರಿಗೆ ಪುರಸ್ಕಾರ, ಸನ್ಮಾನ ಮಾಡಲಾಗುತ್ತಿದೆ ಎಂದು ಹೇಳಿದರು.

Comments
Post a Comment