ನೌಕರರ ಹಿತರಕ್ಷಣೆ ಮತ್ತು ಜನಸೇವಾ ಕಾರ್ಯಗಳಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಶ್ರಮಿಸುತ್ತಿದೆ-ಎ.ಅಮೃತ್ ರಾಜ್*
*ನೌಕರರ ಹಿತರಕ್ಷಣೆ ಮತ್ತು ಜನಸೇವಾ ಕಾರ್ಯಗಳಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಶ್ರಮಿಸುತ್ತಿದೆ-ಎ.ಅಮೃತ್ ರಾಜ್*
ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಧಿಕಾರಿ, ನೌಕರರ ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ನೌಕರರ ಸಂಘದ ಅವರಣದಲ್ಲಿ ಅಚರಿಸಿದರು.
ಅಮೃತ್ ರಾಜ್ ಸಾಮಾಜಿಕ ಸೇವಾ ಟ್ರಸ್ಟ್ ಉದ್ಘಾಟನೆ ಮತ್ತು ಸರ್ಕಾರಿ, ಬಿ.ಬಿ.ಎಂ.ಪಿ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸನ್ಮಾನ ಹಾಗೂ ಪೌರ ಕಾರ್ಮಿಕರು ದಿನಸಿ ಕಿಟ್ ಮತ್ತು ಲಿಫ್ಟ್ ಅಪರೇಟರ್, ಸೆಕ್ಯೂರಿಟಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಮವಸ್ತ್ರ ಗಳನ್ನು *ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು* ವಿತರಿಸಿದರು.
*ಎ.ಅಮೃತ್ ರಾಜ್ ರವರು* ಮಾತನಾಡಿ ಪಾಲಿಕೆ ಅಧಿಕಾರಿ, ನೌಕರರು ಆರೋಗ್ಯ, ಕಂದಾಯ, ಕಾಮಗಾರಿ ಮತ್ತು ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಸಾರ್ವಜನಿಕರ ಸೇವೆಗೆ ಅಧಿಕಾರ,ನೌಕರರು ಹಗಲಿರುಳು ಶ್ರಮವಹಿಸುತ್ತಾರೆ.
ನೌಕರರು ಮತ್ತು ಜನರ ನಡುವೆ ಉತ್ತಮ ಒಡನಾಟ, ಜನಸ್ನೇಹಿ ಆಡಳಿತಕ್ಕೆ ನಮ್ಮ ಸಂಘ ಅವಿರತ ಶ್ರಮಿಸುತ್ತಿದೆ.
ಎಲ್ಲರು ಸಹಕಾರ, ಸಹಾಯಹಸ್ತ ನೀಡಿದಾಗ ಸಮಾಜ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳ ಸತತವಾಗಿ ಹಮ್ಮಿಕೊಂಡು ಬರಲಾಗುತ್ತಿದೆ.
ಕೊರೋನ ಲಾಕ್ ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ, ಉತ್ತರ ಕರ್ನಾಟಕ, ಕೊಡಗು ನೆರ ಸಂತ್ತಸ್ಥರಿಗೆ ನೆರವು ಮತ್ತು ಆಸಿಡ್ ದಾಳಿಗೆ ಒಳಗಾದ ಯುವತಿಯ ಹೆಚ್ಚಿನ ಚಿಕಿತ್ಯೆಗೆ ಆರ್ಥಿಕ ಮತ್ತು ಮರದ ಕೊಂಬೆ ಬಿದ್ದು ಮೃತಪಟ್ಟ ಕುಟುಂಬದವರಿಗೆ ಸಹಾಯ ಹಸ್ತ.
ಪ್ರತಿ ವರ್ಷ ಸಂಘದ ವತಿಯಿಂದ ಉಚಿತ ಆರೋಗ್ಯ ಶಿಬಿರ, ಪರಿಸರ ಜನಜಾಗೃತಿ ಅಭಿಯಾನ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಿದ ಗಣ್ಯಮಹನೀಯರುಗಳಿಗೆ ಗೌರವ ಸನ್ಮಾನ ಮಾಡಲಾಗುತ್ತಿದೆ.
ನಾನು ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ರಾಜ್ಯದ ಹತ್ತು ಮಹಾನಗರ ಪಾಲಿಕೆ ಸಂಘವು ನನ್ನನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.
ಮಹಾನಗರ ಪಾಲಿಕೆಯಲ್ಲಿ ವೃಂದ ನೇಮಕಾತಿ ಮತ್ತು ಹೊರಗುತ್ತಿಗೆ ನೌಕರರ ಸಮಸ್ಯೆ, ಆರೋಗ್ಯ ಸಂಜೀವಿನಿ ಯೋಜನೆ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಸಿಗಬೇಕಾದ ಸೌಲಭ್ಯ, ಸೌವಲತ್ತುಗಳಿಗಾಗಿ ಸಂಘವು ಅವಿರತ ಹೋರಾಟ ಮಾಡುತ್ತಾ ಬಂದಿದೆ.
ನಮ್ಮ ಸಂಘವು ಅಧಿಕಾರಿ,ನೌಕರರ ಹಿತರಕ್ಷಣೆಯ ಜೊತೆಯಲ್ಲಿ ಜನಸೇವೆ ಮಾಡುವ ಗುರಿಹೊಂದಿದೆ ಎಂದು ಹೇಳಿದರು.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರಕಾಶ್ ಮೂರ್ತಿ, ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಸಂಘದ ಪದಾಧಿಕಾರಿಗಳಾದ ಹೆಚ್.ವಿ.ಅಶ್ವಥ್, ಕೆ.ಜಿ.ರವಿ,ಎಸ್.ಜಿ.ಸುರೇಶ್, ಸಾಯಿಶಂಕರ್,(M.L.A)ಮಂಜು,ಬಾಬಣ್ಣ ರಾಮಚಂದ್ರ,ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ರೇಣುಕಾಂಬ, ಸಂದ್ಯಾ,ನರಸಿಂಹ ಪಾಲ್ಗೊಂಡಿದ್ದರು.

Comments
Post a Comment