ದಲಿತ ಸಮುದಾಯದ ಕಿಟ್ಟಪ್ಪ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಮನವಿ*

 *ದಲಿತ ಸಮುದಾಯದ ಕಿಟ್ಟಪ್ಪ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಮನವಿ*





ಪ್ರಜಾವಿಮೋಚನಾ ಚಳುವಳಿ,ಸಮತಾವಾದ,ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಪ್ರಸ್ ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು.

ಪ್ರಜಾ ವಿಮೋಚನಾ ಚಳುವಳಿಯ ರಾಜ್ಯ ಕಾರ್ಯದರ್ಶಿ ಭವಾನಿ ಪ್ರಸಾದ್ ,ಸಮಾಜ ಸೇವಕರಾದ ಡಿ.ಎಂ.ಹೇಮಂತ್, ಕೆ.ಪಿ.ಕೃಷ್ಣಮೂರ್ತಿ  ಮತ್ತು ನೊಂದ ದಲಿತ ಕುಟುಂಬದವರು ಭಾಗವಹಿಸಿದ್ದರು.

ದಲಿತ ಸಮುದಾಯದ ಕಿಟ್ಟಪ್ಪ ಕುಟುಂಬಕ್ಕೆ ಭೂಮಿಯನ್ನು ಸುಪರ್ದಿಗೆ ಕೊಡಿ ಅಥವಾ ಪರಿಹಾರ ಕೊಡಿ ಎಂದು ನಮ್ಮ ಅಗ್ರಹ ನಮ್ಮದು.

 ಬೆಂಗಳೂರುನಗರ ಜಿಲ್ಲೆ,ಕಾಡುಬೀಸನಹಳ್ಳಿಯಲ್ಲಿರುವ ಸರ್ವೆ ನಂಬರ್ 42ರಲ್ಲಿ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದ ಕಿಟ್ಟಪ್ಪ ಕುಟುಂಬಕ್ಕೆ   1ಎಕರೆ32ಕುಂಟೆ ಜಮೀನು ಇತ್ತು.

ಅದು ಚಿನ್ನಮ್ಮ ಎನ್ನುವವರ ಹೆಸರಿನಲ್ಲಿ ಪಾಣಿಯಾಗಿತ್ತು .ಸತತ ಹೋರಾಟದ ಮೂಲಕ ಎ.ಸಿ.ಕೋರ್ಟ್ ಜಮೀನು ಪಾಣಿಯಲ್ಲಿ ಕಿಟ್ಟಪ್ಪ ಬಿನ್ ಬೊಮ್ಮಣ್ಣಬೋವಿ ಹೆಸರಿಸಿ ನೋಂದಯಿಸಿ ಎಂದು ಕೋರ್ಟ್ ಆದೇಶ ಮಾಡಿ ಕ್ರಮಬದ್ದವಾಗಿ ಮಾಡಿದೆ.

ಕೆ.ಆರ್.ಪುರಂ,ಕಾಡುಬೀಸನಹಳ್ಳಿ ಸರ್ವೆ ನಂಬರ್ 42ರಲ್ಲಿ ನ್ಯೂ ಹೊರೈಜನ್ ಶಿಕ್ಷಣ ಸಂಸ್ಥೆಯು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.

ಭೂ ಮಾಲೀಕರಾದ ಕಿಟ್ಟಪ್ಪ ಮೂರು ವರ್ಷದ ಹಿಂದೆ ಮೃತಪಟ್ಟಿದ್ದು ಪತ್ನಿಯಾದ ಮುನಿಯಮ್ಮ ಅದ ನನಗೆ ಪ್ರಕಾಶ್,ಈಶ್ವರ್, ವೆಂಕಟಸ್ವಾಮಿ,ನಾರಾಯಣ ಎಂದು ನಾಲ್ಕು ಮಕ್ಕಳು ಇದ್ದಾರೆ.

ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನವನ್ನು ನಂಬಿರುವ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಬೇಕು.

ಕಿಟ್ಟಪ್ಪ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗುತ್ತಿದ್ದಾರೆ 

ನಮ್ಮಲ್ಲಿ ಹಣವಿಲ್ಲ, ಕೋರ್ಟ್ ಕಛೇರಿ ಅಲೆಯುವ ಶಕ್ತಿ ಅವರಿಗಿಲ್ಲ .ನೊಂದ ಕುಟುಂಬ ಸಂಕಷ್ಟದಲ್ಲಿ ಇರುವ ಇವರಿಗೆ ಶಾಂತಿಯುತ ಪರಿಹಾರ ಸಿಕ್ಕರೆ ಸಾಕು.

ನಿಜವಾದ ಭೂ ಮಾಲೀಕರಾದ  ಕಿಟ್ಟಪ್ಪ ಕುಟುಂಬಕ್ಕೆ ನ್ಯೂ ಹೊರೈಜನ್ ಶಿಕ್ಷಣ ಸಂಸ್ಥೆ ಜಾಗವನ್ನ ಬಿಟ್ಟುಕೊಡಲಿ ಅಥವಾ ಪರಿಹಾರವಾದರೆ ನೀಡಲಿ ಎಂಬುದು ನಮ್ಮ  ಮನವಿ ಎಂದು ರಾಜ್ಯ ಕಾರ್ಯದರ್ಶಿ ಭವಾನಿ ಪ್ರಸಾದ್ ರವರು ಹೇಳಿದರು.

ಸಮಾಜ ಸೇವಕರಾದ ಹೇಮಂತ್ ರವರು ಮಾತನಾಡಿ ಕಿಟ್ಟಪ್ಪ ತಮ್ಮ ಸ್ವಂತ ಜಮೀನು ಉಳಿಸಿಕೊಳ್ಳಲು ಸತತ ಹೋರಾಟ ಮಾಡಿ,ಆನಾರೋಗ್ಯ ಪೀಡಿತರಾಗಿ ಮೃತಪಟ್ಟರು.

ಇಂದು ಕಿಟ್ಟಪ್ಪನ ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಅವರ ಕುಟುಂಬ ಆರ್ಥಿಕವಾಗ, ದುರ್ಬಲರವರಿಗೆ ನ್ಯಾಯ ಸಿಗಬೇಕು

ಭೂಮಿಯನ್ನು ವಾಪಸ್ಸು ಕೊಡಬೇಕು ಅಥವಾ ಪರಿಹಾರಧನ ನೀಡಬೇಕು ಎಂದು ನ್ಯೂ ಹೊರೈಯನ್ ಶಿಕ್ಷಣ ಸಂಸ್ಥೆ ನಮ್ಮ ಮನವಿ ಎಂದು ಹೇಳಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims