ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿ
ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿ
ಪ್ರತಿಯೊಬ್ಬರು ವೈದ್ಯಕೀಯ ಸಾಹಿತ್ಯ ಪುಸ್ತಕ ಒದಿ ಆರೋಗ್ಯ ಕಾಪಾಡಿಕೊಳ್ಳಿ; ಮನೋವೈದ್ಯ ಚಂದ್ರಶೇಖರ್.
40 ಸಾವಿರ ವೈದ್ಯಕೀಯ ಸಾಹಿತ್ಯ ತಾಂತ್ರಿಕ ಪದಗಳನ್ನು ಸೃಷ್ಢಿ ಮಾಡಿದ ಕೀರ್ತಿ ಡಾ.ಇ.ಎಸ್.ಶಿವಪ್ಪ ನವರಿಗೆ ಸಲ್ಲುತ್ತದೆ ಎಂದು ಮನೋ ವೈದ್ಯ ಸಾಹಿತಿ ಡಾ. ಹೇಳಿದರು.
ಬೆಂಗಳೂರಿನಲ್ಲಿಂದು ವಿಶ್ವ ಕರ್ಮ ಸಾಹಿತ್ಯ ಕಲಾ ಆಕಾಡೆಮಿ ಹಮ್ಮಿಕೊಂಡಿದ್ದ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಯಾರ ಮನೆಯಲ್ಲಿ ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಪುಸ್ತಕಗಳಿದ್ದರೆ ನಿಮ್ಮ ಮನೆಯಲ್ಲಿ ಒಬ್ಬ ವೈದ್ಯನಿದ್ದಂತೆ.ಜನರು ಜೋತಿಷ್ಯ ಮೂಡನಂಬಿಕೆಗಳಿಗೆ ಮಾರು ಹೋಗಿ ತಮ್ಮ ಆರೋಗ್ಯ ವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶೇ 40 ಮಕ್ಕಳು ದುಶ್ಚಟಗಳಿಗೆ ಮಾರು ಹೋಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಂತಹ ಕೆಟ್ಟ ಚಟಗಳಿಗೆ ಮಾರು ಹೋಗಿ ಒಂದು ಲಕ್ಷ ಅರವತ್ತು ಸಾವಿರ ಮಕ್ಕಳು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೊಬೈಲ್ ಗಳಿಗೆ ಮಕ್ಕಳು ಮಾರುಹೋಗಿ ತಮ್ಮ ಜೀವನವನ್ನು ಹಾಳುಮಾಡಿಕೊಂಡಿದ್ದಾರೆ ಎಂದರು.

Comments
Post a Comment