ಕೆಲಸದಒತ್ತಡ,ಸಿಬ್ಬಂದಿಗಳ ಕೊರತೆಯಿಂದ ಮಾನಸಿಕ ಖಿನ್ನತೆಯಿಂದ,ನೌಕರರು ಒಳಗಾಗಿದ್ದಾರೆ, -ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ*

 ಕೆಲಸದಒತ್ತಡ,ಸಿಬ್ಬಂದಿಗಳ ಕೊರತೆಯಿಂದ ಮಾನಸಿಕ  ಖಿನ್ನತೆಯಿಂದ,ನೌಕರರು ಒಳಗಾಗಿದ್ದಾರೆ, -ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ*




*ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಮೇಲೆ ವಿನಾಕಾರಣ ಕಿರುಕುಳ ತಪ್ಪಿಸಿ- ಅಧ್ಯಕ್ಷರಾದ ಎ.ಅಮೃತ್ ರಾಜ್*

ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ,ನೌಕರರ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಬಿ.ಬಿ.ಎಂ.ಪಿ.ಕಂದಾಯ ಇಲಾಖೆ ಅಧಿಕಾರಿಗಳು,

ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಸೌಜನ್ಯ ಭೇಟಿ ಮಾಡಿ ಸಮಗ್ರ ಮಾಹಿತಿ ಪಡೆಯಲು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ  ಸಿ.ಎಸ್.ಷಡಕ್ಷರಿರವರು, ಜಂಟಿ ಆಯುಕ್ತ (ಕಂದಾಯ)ವೆಂಕಟಚಲಪತಿ,

ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ರವರು ಭೇಟಿ ಮಾಡಿ ಸಮಸ್ಯೆಗಳನ್ನು ಅಲಿಸಿದರು.

*ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ರವರು ಮಾತನಾಡಿ*  ಇಡಿ ಸಂಚಲನ ಮೂಡಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿಗಳು ಅತಂಕ ಮತ್ತು ಖಿನ್ನತೆಗೆ ಒಳಗಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಚಿಲುಮೆ ಸಂಸ್ಥೆ ಜನಜಾಗೃತಿ ಕೆಲಸ ಮಾಡಬೇಕಾಗಿತ್ತು ಅ ಸಂಸ್ಥೆಯಿಂದ ಇಂದು ವಂಚನೆಯಾಗಿದೆ.

ಶಿಕ್ಷಕರನ್ನ ಬೂತ್ ಲೇವಲ್ ಆಫೀಸರ್ ನೇಮಕ ಮಾಡಲು ಸುಪ್ರಿಂಕೋರ್ಟ್ ಆದೇಶ ಪ್ರಕಾರ ಚುನಾವಣಾ ಕೆಲಸ ಮಾಡುವಂತಿಲ್ಲ ಅದರು 2ಲಕ್ಷ ಅಧಿಕ ಶಿಕ್ಷಕರು ಚುನಾವಣಾ ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ 2ಲಕ್ಷ 60ಸಾವಿರ ಹುದ್ದೆ ಖಾಲಿ ಇದೆ .ಸಿಬ್ಬಂದಿಗಳ ಕೊರತೆಯಿಂದ ಒತ್ತಡ, ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ.

ಚಿಲುಮೆ ಸಂಸ್ಥೆಯವರು ತಮ್ಮ ಸಿಬ್ಬಂದಿಗಳಿಗೆ ಕಾರ್ಡ್ ಮಾಡಿಕೊಟ್ಟಿದ್ದಾರೆ. 

ಸರ್ಕಾರ ಈಗಾಲಾದರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು .

ಮತದಾರರ ದತ್ತಾಂಶ ಕಳವು ನಮ್ಮ ಬಿಬಿಎಂಪಿ ಸಿಬ್ಬಂದಿ ಅಥವಾ ಅಧಿಕಾರಿಗಳಿಂದ ಆಗುವುದಿಲ್ಲ. ಕೇಂದ್ರ ಚುನಾವಣೆ ಆಯೋಗದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಿಬ್ಬಂದಿಯ ಪಾತ್ರ ಇರುವುದಿಲ್ಲ. 

ಇನ್ನೂ, ಮತದಾರರ ಪಟ್ಟಿಯೂ ಆನ್ ಲೈನ್ ನಲ್ಲೇ ಲಭ್ಯವಿದೆ. ಇದನ್ನು ಯಾರು ಬೇಕಾದರೂ ನೋಡಬಹುದಾಗಿದೆ. ಹೀಗಿರುವಾಗ, ಯಾವುದೇ ಅಕ್ರಮ ಮಾಡಲು ಹೇಗೆ ಸಾಧ್ಯ ಎಂದು ಹೇಳಿದರು.

 ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ *ಎ.ಅಮೃತ್ ರಾಜ್* ಮಾತನಾಡಿ, 

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳು,ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ ಎಂದು ನುಡಿದರು.

ಇನ್ನೂ, ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು ಸಿಇಒ ನಡೆಸುವ ತನಿಖೆಗೆ ಸಿದ್ದವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಮನವಿ ಮಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರುಗಳಾದ ರುದ್ರಪ್ಪ, ಮೋಹನ್ ಕುಮಾರ್,ಮಾಲತೇಶ್, ಕಾರ್ಯದರ್ಶಿ ಶಿವಲಿಂಗಯ್ಯ.

ಸಹ ಕಾರ್ಯದರ್ಶಿ ಸೋಮಶೇಖರ್,ಸಂಘಟನಾ ಕಾರ್ಯದರ್ಶಿ ಚೇತನ್ ಕುಮಾರ್ ರವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಉಪ ಆಯುಕ್ತೆ ಶ್ರೀಮತಿ ಲಕ್ಷ್ಮೀದೇವಿ, ಮಾಜಿ ಅಧ್ಯಕ್ಷರಾದ ದಯಾನಂದ್, ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಜಿ.ರವಿ,ಎಸ್.ಜಿ.ಸುರೇಶ್, ಸಾಯಿಶಂಕರ್,ಸೂರ್ಯಕುಮಾರಿ,ಬಾಬಣ್ಣ ರಾಮಚಂದ್ರ,ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹ ಪಾಲ್ಗೊಂಡಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims