ಕೊಡಿಗೇಹಳ್ಳಿ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ "
" ಕೊಡಿಗೇಹಳ್ಳಿ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ "
ಬೆಂಗಳೂರು ಗ್ರಾಮಾಂತರಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿ ಕೊಡಿಗೆಹಳ್ಳಿಯಲ್ಲಿ ಗೋಸಂರಕ್ಷಣೆ ಗೋಪಾಲನಾ ಕೇಂದ್ರವನ್ನು ಸಚಿವರಾದ ಡಾ. ಕೆ. ಸುಧಾಕರ್,ಪಶು ಸಂಗೋಪನಾ ಸಚಿವರಾದಪ್ರಭು.ಬಿ. ಚೌಹಾನ್,ಶಾಸಕ. ಡಾ. ಕೆ. ಶ್ರೀನಿವಾಸಮೂರ್ತಿ ಉದ್ಘಾಟನೆ ಮಾಡಿದರು.
ಬೆಂಗಳೂರು ಗ್ರಾಮಾಂತರಜಿಲ್ಲೆಯ ನೆಲಮಂಗಲ ತಾಲ್ಲೂಕಿನನಿಡವಂದ ಗ್ರಾಮದಲ್ಲಿ ₹39 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ'ಪಶು ಚಿಕಿತ್ಸಾಲಯ'ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಇದೇ ವೇಳೆ ಪಶುಗಳಿಗಾಗಿ ನೂತನವಾಗಿ ಪ್ರಾರಂಭಿಸಿರುವ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ಹೈನುಗಾರಿಕೆ ಹಾಗೂ ಕುರಿಸಾಕಣೆರೈತರ ಆರ್ಥಿಕ ಸ್ವಾವಲಂಬನೆಯ ಮೂಲಗಳಲ್ಲಿ ಒಂದಾಗಿದ್ದು,ಪಶುಗಳ ಆರೋಗ್ಯರಕ್ಷಣೆಯ ಬಗ್ಗೆನಮ್ಮಸರ್ಕಾರ ಹೆಚ್ಚಿನಕಾಳಜಿ ವಹಿಸಿದೆ.ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀಪ್ರಭು ಬಿ.ಚೌವಾಣ್, ಶಾಸಕರಾದ ಶ್ರೀ ಕೆ.ಶ್ರೀನಿವಾಸ ಮೂರ್ತಿ, ಹಾಗೂಇತರಗಣ್ಯರು ಉದ್ಘಾಟಿಸಿದರು, ಸಂದರ್ಭದಲ್ಲಿಮಾಜಿ ಶಾಸಕರಾದ ನಾಗರಾಜ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಯ್ಯ ನವರು,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಹೊಂಬಯ್ಯ, ಅನುಸುಚಿತಜಾತಿ ಮತ್ತುಬುಡಕಟ್ಟು ಆಯೋಗದ ಸದಸ್ಯವೆಂಕಟೇಶ್ ದೊಡ್ಡೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಲತಾ ರವರು,ಜಿಲ್ಲಾ ಪಂಚಾಯಿತಿ ಸಿಇಒ.ಕೆ. ರೇವಣಪ್ಪರವರು. ಕೊಡಿಗೆಹಳ್ಳಿಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು,ಹಾಗೂ ಸದಸ್ಯರುಗಳು ಭಾಗ ವಹಿಸಿದ್ದರು.ಈ ಸಂದರ್ಭದಲ್ಲಿ
ಡಾ.ಕೆ.ಸುಧಾಕರ್ ಅವರುಮಾತನಾಡಿ ಜಾನುವಾರುಗಳ ಒಡನಾಟದಿಂದ ದಯೆ, ಪ್ರೀತಿ,ವಿಶ್ವಾಸ, ಮಾನವೀಯ ಗುಣಗಳು ಜಾಗೃತವಾಗುತ್ತವೆ ಎಂದುಸಚಿವ ಸುಧಾಕರ್ ತಿಳಿಸಿದರು,
ಜಾನುವಾರು ಪ್ರತಿಬಂಧಕಮತ್ತು ಸಂರಕ್ಷಣಾ ಅಧಿನಿಯಮದ ಜಾರಿಯಿಂದದಲ್ಲಿ ಗೋವುಗಳರಕ್ಷಣೆ ಹಿನ್ನೆಲೆಯಲ್ಲಿರಾಜ್ಯದ ಎಲ್ಲಾ31 ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಯಾಗುತ್ತಿವೆ. ರಾಜ್ಯದಲ್ಲಿ ಜಾನುವಾರು ಆರೋಗ್ಯಸಂರಕ್ಷಣೆ ಹಾಗೂಹೈನುಗಾರಿಕೆಗೆ ಸರ್ಕಾರಉತ್ತೇಜನ ನೀಡುತ್ತದೆಎಂದು ಹೇಳಿದರು.ಭಾರತದ ಪರಂಪರೆಯಲ್ಲಿ ಗೋವುಗಳಿಗೆದೇವರ ಸ್ಥಾನಮಾನ ನೀಡಲಾಗಿದೆ.ಸಂಪತ್ತು ನಮ್ಮಕುಟುಂಬಗಳ ಅವಿಭಾಜ್ಯ ಅಂಗವಾಗಿವೆ.ಈ ಆಶಯಕ್ಕೆ ಅನುಗುಣವಾಗಿ ಸರ್ಕಾರವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.ಪ್ರಧಾನಮಂತ್ರಿವಿಶೇಷ ಕಾಳಜಿವಹಿಸಿ ಜಾನುವಾರುಹತ್ಯೆ ಪ್ರತಿಬಂದಕಕಾಯ್ದೆ ಜಾರಿಗೊಳಿಸಿದ್ದಾರೆ. ಕೊಡಿಗೇಹಳ್ಳಿ ಗೋಶಾಲೆಯಲ್ಲಿ ನೂರುಹಸುಗಳ ಪೋಷಣೆಗೆ ಅವಕಾಶವಿದೆ ಸ್ಥಳೀಯರ ಸಹಕಾರದಿಂದ ಇದರ ಪ್ರಯೋಜನ ಸಂಪೂರ್ಣವಾಗಿ ಪಡೆಯಬೇಕು ಎಂದರು.
ಪಶು ಸಂಗೋಪನ ಸಚಿವರಾದ ಪ್ರಭು ಬಿ. ಚೌಹಾಣ್ ರವರು ಮಾತನಾಡಿಕೃಷಿ ಪ್ರಧಾನವಾಗಿರುವ ದೇಶದಲ್ಲಿಹಸುಗಳಿಗೆ ಮಹತ್ವ ಸ್ಥಾನಮಾನವಿದೆ. ರಾಜ್ಯದಲ್ಲಿ 30 ಸಾವಿರಕ್ಕೂಅಧಿಕ ಹಸುಗಳರಕ್ಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಪುಣ್ಯಕೋಟಿಹಸು ದತ್ತುಯೋಜನೆ ಜಾರಿಗೊಳಿಸಿದ್ದಾರೆ. ಚಿತ್ರನಟಸುದೀಪ್ 31 ಹಸುಗಳನ್ನುದತ್ತು ತೆಗೆದುಕೊಂಡಿದ್ದಾರೆ. ಶಾಸಕರಾದ ಡಾ. ಕೆ ಶ್ರೀನಿವಾಸ್ ಮೂರ್ತಿ ಹಸುಗಳನ್ನುದತ್ತು ಪಡೆದುಯೋಜನೆಗೆ ಕೈಜೋಡಿಸಬೇಕು ಎಂದುಪಶು ಸಂಗೋಪನಸಚಿವ ಪ್ರಭು. ಬಿ.ಚೌಹಾಣ್ ತಿಳಿಸಿದರು.
ಎಲ್ಲಾಗೋಶಾಲೆ ಗಳೆಲ್ಲವೂ ಆತ್ಮನಿರ್ಭರವಾಗಿ ಕಾರ್ಯನಿರ್ವಹಿಸುವಂತೆಯೋಜನೆ ರೂಪಿಸಲಾಗಿದೆ ಗೋತ್ಯಾಜ್ಯದಿಂದ 22ಕ್ಕೂಹೆಚ್ಚುಉತ್ಪನ್ನ ತಯಾರಿಸಬಹುದು ಇವುಗಳಿಂದಬರುವ ಆದಾಯದಿಂದಲೇ ಗೋಶಾಲನಿರ್ವಹಣೆ ಮಾಡಬಹುದಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ವೆಚ್ಚಭರಿಸುವ ತಾಪತ್ರಯ ಇರುವುದಿಲ್ಲ ಎಂದರು.
ನೀವೇಳೆ ಮಾತಾನಾಡಿದ ಡಾ. ಕೆ.ಶ್ರೀನಿವಾಸ್ ಮೂರ್ತಿರವರುತ್ವರಿತ ಅವಧಿಯಲ್ಲಿ ಕೊಡಿಗೆಹಳ್ಳಿಯಲ್ಲಿ ಸರ್ಕಾರಗೋಶಾಲೆ ನಿರ್ಮಿಸಿರುವುದು ಸ್ವಾಗತಾರ್ಹ. ಕಟ್ಟಡದ ನೆಲಹಾಸಿಗೆ ಕಲ್ಲು ಹಾಕಿದರೆ ಗೋಶಾಲೆ ಇನ್ನಷ್ಟು ವೈಜ್ಞಾನಿಕ ಗೊಳ್ಳಲಿದೆ. ದೇಶದ ಕ್ಷೀ ರಕ್ರಾಂತಿಯ ಪಿತಾಮಹ ದ ಡಾಕ್ಟರ್ ವರ್ಗಿಸ್ ಕುರಿಯನ್ ರವರ ಕೊಡುಗೆಯಿಂದಾಗಿ ಇಂದುದೇಶಾದ್ಯಂತ ಹೈನುಗಾರಿಕೆ ಪ್ರಮುಖ ಆರ್ಥಿಕ ಚಟುವಟಿಕೆಯಾಗಿ ರೂಪಗೊಂಡಿದೆ ಎಂದುಶಾಸಕ ಡಾ.ಕೆ. ಶ್ರೀನಿವಾಸ್ ಮೂರ್ತಿ ತಿಳಿಸಿದರು.

Comments
Post a Comment