ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಧರ್ ಎಚ್. ಎಲ್. ಅವಿರೋಧ ಆಯ್ಕೆ "
"ಅರೂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಧರ್ ಎಚ್. ಎಲ್. ಅವಿರೋಧ ಆಯ್ಕೆ "
ಬೆಂಗಳೂರು ಗ್ರಾಮಾಂತರಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಅರೂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನರ ಸಿಂಹರಾಜ್ ರಾಜೀನಾಮೆಯಿಂದ ತೆರವಾಗಿದ್ದಅಧ್ಯಕ್ಷ ಸ್ಥಾನಕ್ಕೆನೂತನ ಅಧ್ಯಕ್ಷರಾಗಿ ಎಚ್. ಎಲ್.ಶ್ರೀಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದುಚುನಾವಣಾ ಅಧಿಕಾರಿ ತೋಟಗಾರಿಕೆ ಸಹಾಯಕ ನಿರ್ದೇಶಕರಾದಎಂ. ಎಲ್.ದೀಪಾರವರು ಘೋಷಣೆ ಮಾಡಿದರು.ಈ ಸಂದರ್ಭದಲ್ಲಿನೂತನ ಅಧ್ಯಕ್ಷರು ತಮ್ಮನ್ನು ಆಯ್ಕೆಮಾಡಿದಎಲ್ಲಾ ಸದಸ್ಯರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು,ಈ ವೇಳೆ ನೂತನಅಧ್ಯಕ್ಷರಿಗೆ ಹಾರಹಾಕಿ,ಪಟಾಕಿ ಸಿಡಿಸಿ,ಸಿಹಿಹಂಚಿ, ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಂಚಾಲಕರಾದ ಧೀರಜ್ ಮುನಿರಾಜುರವರು, ಪುಷ್ಪಶಿವಶಂಕರ್, ಅಶ್ವಥನಾರಾಯಣ್ ಹೊಸಹಳ್ಳಿ,ಗೋಪಿ ಅಣ್ಣಜಿಲ್ಲಾಪ್ರಧಾನ ಕಾರ್ಯದರ್ಶಿ, ಮಾರುತಿಜಿಲ್ಲಾರೈತ ಮೋರ್ಚ ಪ್ರಧಾನ ಕಾರ್ಯದರ್ಶಿ, ಶರತ್ ಕುಮಾರ್ ತಾಲ್ಲೂಕು ಮೋರ್ಚಾಪ್ರಧಾನ ಕಾರ್ಯದರ್ಶಿ, ತಾಲೂಕುಬಿಜೆಪಿ ಮುಖಂಡರಾದ ಸಾರಥಿಸತ್ಯಪ್ರಕಾಶ್, ಮುಖಂಡರಾದ ಸಿದ್ದಗಂಗಪ್ಪ, ರಾಮಕೃಷ್ಣಪ್ಪ, ಬಿ.ಎಚ್ ನಾಗರಾಜ್, ಶ್ರೀರಾಮರೆಡ್ಡಿ, ನಾಗೇಶ್ ಕುಮಾರ್, ಹೋಟೆಲ್ ಪ್ರಭು ವರದೇನಹಳ್ಳಿ,ಹಾಗೂ ಆರೂಡಿಗ್ರಾಮ ಪಂಚಾಯಿತಿಎಲ್ಲಾ ಬಿಜೆಪಿ ಮುಖಂಡರುಗಳು, ಗ್ರಾಮಸ್ಥರು,ಪಿಡಿಒ ಹಾಗೂಗ್ರಾಮ ಪಂಚಾಯಿತಿಎಲ್ಲಾ ಸಿಬ್ಬಂದಿವರ್ಗದವರು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರಾದ ಎಚ್. ಎಲ್. ಶ್ರೀಧರ್ ರವರು ಮೂಲಭೂತ ಸೌಕರ್ಯಗಳಾದ ಕುಡಿಯುವನೀರು ಬೀದಿದೀಪ, ಚರಂಡಿ, ವಸತಿ, ವೃದ್ಯಾಪ್ಯ ವೇತನ, ಹಳ್ಳಿಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರಗಳ ಬೆಂಬಲದೊಂದಿಗೆ ಪಂಚಾಯಿತಿಯ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು.
ಆರ್. ನಾಗರಾಜು
ಪಬ್ಲಿಕ್ ರಿಪೋರ್ಟ್ ವರದಿಗಾರರು
ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment