ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ*
*ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ*
*ಬಡವರಿಗೆ ಆಹಾರ, ಆರೋಗ್ಯ, ಆಶ್ರಯ ಭದ್ರತೆ ನೀಡಿದ್ದು ಕಾಂಗ್ರೆಸ್ ಪಕ್ಷ*
ಮಹಾಲಕ್ಷ್ಮೀಪುರಂ ವಾರ್ಡ್:ಬಿ.ಬಿ.ಎಂ.ಪಿ.ಬಯಲು ರಂಗಮಂದಿರ, ಜೆ.ಸಿ.ನಗರದಲ್ಲಿ ಸ್ಪೂರ್ತಿ ಯುವಕರ ವೇದಿಕೆ ವತಿಯಿಂದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
*ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ||ವಿ.ನಾರಾಯಣಸ್ವಾಮಿರವರು,ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ನಿಕಟಪೂರ್ವ ಬಿ.ಬಿ.ಎಂ.ಪಿ.ಸದ್ಯಸರಾದ ಎಸ್.ಕೇಶವಮೂರ್ತಿರವರು, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರವರು ದೀಪಾ ಬೆಳಗಿಸಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು*
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪರಿಸರ ರಾಮಕೃಷ್ಣ,ಸುಧೀಂದ್ರ.ನಟರಾಜ್ ರವರು ಉಪಸ್ಥಿತರಿದ್ದರು.
ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಮಾಮಣಿ ನರ್ಸಿಂಗ್ ಮತ್ತು ಮೆರ್ಟನಿಟಿ ಹಾಗೂ ನೇತ್ರದಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯರು ಸಿಬ್ಬಂದಿಗಳು ಭಾಗವಹಿಸಿದ್ದರು.
*ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ||ವಿ.ನಾರಾಯಣಸ್ವಾಮಿರವರು* ಮಾತನಾಡಿ ಸಮಾಜದಲ್ಲಿ ವೈದ್ಯರಿಗೆ ಉತ್ತಮ ಗೌರವ ಸ್ಥಾನಮಾನವಿದೆ,ವೈದ್ಯರನ್ನ ದೇವರಂತೆ ಜನರು ಕಾಣುತ್ತಾರೆ.
ರೋಗಿಗಳಿಗೆ ಸಕಾಲದಲ್ಲಿ ಸಮರ್ಪಕ ರೀತಿಯಲ್ಲಿ ತಪಾಸಣೆ ಮತ್ತು ಆರೈಕೆ ಮಾಡಿದರೆ ಉತ್ತಮ ಜೀವನ ಸಾಗಿಸಬಹುದು.
ಬಡವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂದು ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವತಿಯಿಂದ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಮನೆ,ಮನೆಗೆ ಆರೋಗ್ಯ ಯೋಜನೆ ಹಮ್ಮಿಕೊಂಡು 40ಸಾವಿರ ಕುಟುಂಬಗಳಿಗೆ 2ಲಕ್ಷ ರೂಪಾಯಿ ಇನ್ಯೂರೆನ್ಸ್ ಮಾಡಿಸಿಕೊಡಲಾಗುವುದು.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಆರೋಗ್ಯ ಕಡೆ ಗಮನಹರಿಸಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಜನರಿಗೆ ಶೇಕಡ 50%ರಷ್ಟು ರಿಯಾಯಿತಿ ದರ ನೀಡಿ ಹೈಟೆಕ್ ಚಿಕಿತ್ಯೆ ನೀಡಲಾಗುವುದು ಎಂದು ಹೇಳಿದರು.
*ಎಮ್.ಶಿವರಾಜುರವರು* ಮಾತನಾಡಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ವಾರ್ಡ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಶಿಬಿರ ಹಮ್ಮಿಕೊಂಡು ಬರಲಾಗುತ್ತಿದೆ.
ಬಡವರ ಸೇವೆ ದೇವರ ಸೇವೆ ಎಂದು ಎಲ್ಲರು ಮಾಡಿದಾಗ ಸಮಾಜ ಅಭಿವೃದ್ದಿಯಾಗಲು ಸಾಧ್ಯ.
*ಎಸ್.ಕೇಶವಮೂರ್ತಿರವರು* ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ
ನಮ್ಮ ವಾರ್ಡ್ ಬಡವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂದು ನಮ್ಮ ವಾರ್ಡ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಸತತವಾಗಿ ಆಯೋಜಿಸುತ್ತಾ ಬರುತ್ತಿದ್ದೇವೆ.
ಬಡವರ, ಆರ್ಥಿಕವವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರ,ಆರೋಗ್ಯ,ಆಶ್ರಯದ ಭದ್ರತೆ ನೀಡಿರುವುದು ಕಾಂಗ್ರೆಸ್ ಪಕ್ಷ.
ಬಡವರ,ನೊಂದವರ ಸೇವೆ ಮಾಡುವುದು ಪುಣ್ಯದ ಕೆಲಸ.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ||ವಿ.ನಾರಾಯಣಸ್ವಾಮಿರವರ ಸಹಯೋಗದಲ್ಲಿ ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವ ಬದಲಾವಣೆಯಾಗಲಿದೆ ಎಂದು ಹೇಳಿದರು.
*ಮಂಜುನಾಥಗೌಡರವರು* ಮಾತನಾಡಿ ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ದೇಶದಲ್ಲಿ ಸಾವಿರಾರು ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ, ಬಡ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಲಭಿಸುವಂತೆ ಮಾಡಿದರು.
ಇಂದು ದೇಶ ಇಷ್ಟು ಅಭಿವೃದ್ದಿಯಾಗಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ .ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

Comments
Post a Comment