ಎಸ್. ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ
"
ಎಸ್. ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ
ಆಂಜಿನಪ್ಪ ಪುಟ್ಟು ರವರ ವತಿಯಿಂದ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ"
ಚಿಕ್ಕಬಳ್ಳಾಪುರಜಿಲ್ಲೆ ಶಿಡ್ಲಘಟ್ಟ ತಾಲೂಕು ಚಿಕ್ಕದಾಸರಹಳ್ಳಿ ಗ್ರಾಮದ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಅವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಅಧ್ಯಕ್ಷ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದರೆ ಕಷ್ಟದಕೆಲಸ. ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸಾಲವಿಲ್ಲದೆ ಸರಳ ಸಾಮೂಹಿಕ ವಿವಾಹ ಗಳಲ್ಲಿ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ. ಮುಖ ಮದುವೆಗಳು ಹಣ ಉಳಿತಾಯದ ಜೊತೆಗೆ ಸಮಾಜದಲ್ಲಿ ಸಮಾರ ಸ್ಯದ ಪ್ರತೀಕವಾಗಿದೆ ಎಂದು ಆದಿಚುಂಚನಗಿರಿಮ ಹಾಸಂಸ್ಥಾನದ ಪೀಠಾಧ್ಯಕ್ಷರರಾದ ನಿರ್ಮಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ದುಬಾರಿ ಕಾಲದಲ್ಲೇ ಮನೆ ಕಟ್ಟುವುದು ಮದುವೆ ಮಾಡುವುದುಬಹಳ ಕಷ್ಟ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ಸಾಲದ ಭಾ ದೆಯಿಂದ ಎಷ್ಟೋ ಕುಟುಂಬಗಳು ಕಷ್ಟದಲ್ಲಿವೆ. ಇದನ್ನು ಮನಗಂಡು ದೇವಸ್ಥಾನದ ಸಮಿತಿಯವರುಬಡ ರಿಗೆ ನೆರವಾಗುವ ದೃಷ್ಟಿಯಿಂದ ವಿವಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದರು. ದೇವರ ಸನ್ನಿಧಿಯಲ್ಲಿ ಗುರು ಹಿರಿಯರ ಮಠಾಧೀಶರಿಂದ ಆಶೀರ್ವಾದ ಪಡೆದ ನೀವುಗಳು ಧನ್ಯರು. ನವ ದಾಂಪತ್ಯ ಜೀವನ ಸುಖಕರವಾಗಿರಲಿ ಸಂಸಾರದಲ್ಲಿ ಬರುವ ಕಷ್ಟ ಸುಖಗಳನ್ನು ಸಮನಾಗಿ ಸ್ವೀ ಕರಿಸಬೇಕು. ಜೀವನದಲ್ಲಿ ಕೋಪ ದುಡುಕು ನಿಮ್ಮಬದು ಕನ್ನು ಹಾಳುಮಾಡುತ್ತದೆ ಎಚ್ಚರದಿಂದ ಇರಬೇಕು. ಅತ್ತೆಮಾವಂದಿರನ್ನು ಗೌರವದಿಂದ ಕಾಪಾಡಬೇಕು. ಸೊಸೆಯಂದಿರನ್ನು ತಮ್ಮ ಮಕ್ಕಳಂತೆ ಭಾವಿಸಿ ಪರಸ್ಪರ kಅನೋನ್ಯತೆಯಿಂದ ಬದುಕು ಸುಂದರ ಮಾಡಿಕೊಳ್ಳಿ ಎಂದು ನವದಂಪತಿಗಳಿಗೂ ಹಾಗೂ ಪಾಲಕರಿಗೂ ಕಿವಿಮಾತು ಹೇಳಿದರು. ಈ ವೇಳೆ ವಧು ವರರಿಗೆ ಸೀರೆ ಪಂಚೆ ತಾಳಿ ಕಾಲುಂಗುರ ಕೊಡಲಾಯಿತು ಎಲ್ಲಾ ವಧು-ವರರ ಸಂಬಂಧಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ನವ ಜೋಡಿಗಳಿಗೆ ಉಚಿತವಾಗಿ ಟಿವಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲೂಕಿನ ಸಾವಿರಾರು ಸಂಖ್ಯೆಯ ಜನರು ಭಾಗವಹಿಸುವ ಮೂಲಕ ನವಜೋಡಿಗಳಿಗೆ ಶುಭ ಹಾರೈಸಿದರು.

Comments
Post a Comment