ಗಡಿ ಭಾಗದ ಜತ್ತ, ಅಕ್ಕಲಕೋಟೆಗೆ ಪ್ರಾಧಿಕಾರದಿಂದ ಹೆಚ್ಚಿನ ಅನುದಾನ; ಡಾ ಸಿ.ಸೋಮಶೇಖರ್

 ಗಡಿ ಭಾಗದ ಜತ್ತ, ಅಕ್ಕಲಕೋಟೆಗೆ ಪ್ರಾಧಿಕಾರದಿಂದ ಹೆಚ್ಚಿನ ಅನುದಾನ; ಡಾ ಸಿ.ಸೋಮಶೇಖರ್.

ಬೆಂಗಳೂರು : ಮರಾಠ  ಶಾಲೆಗಳ ಸ್ಥಾಪನೆಗೆ ಪ್ರಾಧಿಕಾರದಿಂದ ಕಟ್ಟು ವಿರೋಧಕ ಕರ್ನಾಟಕಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷ ಡಾ ಸಿ. ಸೋಮಶೇಖರ ಅವರ ಅಧ್ಯಕ್ಷ ಅವಧಿಯ ಎರಡು ವರ್ಷಗಳ ಪ್ರಾಧಿಕಾರದ ಸಾಧನೆಯ "ಸಾಧನಾ ದರ್ಶನ " ಕಿರು ಹೊತ್ತಿಗೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು

ಬಳಿಕ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಎಲ್ಲ ಗಡಿ ಜೆಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಮಾಡಿ ಚರ್ಚೆ ನಡೆಸಿದ್ದೇನೆ. ಪ್ರತಿ ತಿಂಗಳು ಗಡಿ ಭಾಗದ ಹಳ್ಳಿಗಳಿಗಳಿಗೆ ಜಿಲ್ಲಾಧಿಕಾರಿ ಗಳು ಬೇಟಿ ನೀಡಬೇಕೆಂದು ಸೂಚನೆ ನೀಡಿದ್ದೇನೆ.ಕೇರಳ ಗಡಿಭಾಗದ ಅಲ್ಪ ಸಂಖ್ಯಾತರ ಯೋಗಕ್ಷೇಮಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗಳಿಗಳಿಗೆ ಸೂಚಿದ್ದೇನೆ. ಕೈಯ್ಯಾರ ಕಿಞಣ್ಣ ರೈ ಹಾಗೂ ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು

ಗಡಿ ಭಾಗದ ಪರಿಶಿಷ್ಟ ಜಾತಿ, ಪಂಗಡದದವರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನವನ್ನು ಪ್ರಾಧಿಕಾರದ ವತಿಯಿಂದ ತೆಗದಿರಿಸಲಾಗಿದೆ. ಎಂಟು ಭಾಗದ ವಿಶ್ವವಿದ್ಯಾಲಯ ಮೂಲಕ ಗಡಿ ಭಾಗದ ಜನರ ಸಮಗ್ರ ಅಧ್ಯಯನ ಕ್ಕೆ ಮೂರನಾಲ್ಕು ಸುತ್ತು ಸಭೆ ನಡೆಸಲಾಗಿದೆ. ಗ್ರಾಮ ಪಂಚಾಯತಿ ಗಳಲ್ಲಿ ಸಾಂಸ್ಕೃತಿಕ ನಿಧಿ ಸ್ಥಾಪಿಸುವಂತೆ ಕನಿಷ್ಠ ಐದು ಲಕ್ಷ ರೂಪಾಯಿ ಇಡುವಂತೆ ಪತ್ರ ಬರೆಯಲಾಗಿದೆ. 4 ರಂಗಾಯಣಗಳಿಗೆ ಗಡಿ ಭಾಗದ ಕಲೆಯನ್ನು ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಆಕಾಶವಾಣಿ ಮೂಲಕ ಅವರ ಕಲೆಯನ್ನು ಪ್ರದರ್ಶನ ಮಾಡುವ ಬಗ್ಗೆ  ಕ್ರಮ ಕೈಗೊಳ್ಳಲಾಗಿದೆ ಎಂದರು.

ಗೋವಾ, ಅಕ್ಜಲಕೋಟೆ, ಕಾಸರಗೋಡಿನಲ್ಲಿ ಕನ್ನಡ ಭವನ ಕಟ್ಟಲು ಮುಖ್ಯಮಂತ್ರಿಗಳು ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಪ್ರಾರಂಭಿಕವಾಗಿ ಇವುಗಳಿಗೆ ಐದು ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಗಡಿ ಭಾಗದ ಪ್ರಾಥಮಿಕ ಶಾಲೆಗಳಲ್ಲಿ ಒದುತ್ತಿರುವ ಮಕ್ಕಳ ಹೆಸರಿನಲ್ಲಿ ಐದು ಸಾವಿರ ರೂಪಾಯಿ ನಿಧಿ ಇಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜತ್ತ, ಅಕ್ಕಲಕೋಟೆಯಲ್ಲಿ ಶಿಕ್ಷಣ, ಕನ್ನಡದ ಅಭಿವೃದ್ಧಿಗಾಗಿ ಪ್ರಾಧಿಕಾರದವತಿಯಿಂದ ಹೆಚ್ಚಿನ ಅನುದಾನವನ್ನು ಒದಗಿಸಲಾಗುತ್ತದೆ. ಇಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನವನ್ನು ನೀಡುವುದಿಲ್ಲ. ಈ ಕಾರಣಕ್ಕಾಗಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.


ಮರಾಠ ಶಾಲೆಗಳ ಸ್ಥಾಪನೆಗೆ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ ನಾವು ನಮ್ಮ ಪ್ರಾಧಿಕಾರದ ವತಿಯಿಂದ ಇದನ್ಬು ಕಟ್ಟುವಾಗಿ ವಿರೋದಿಸಿ ಅವುಗಳನ್ನು ಸ್ಥಗಿತಗೊಳಿಸುವಂತೆ ಕ್ರಮ ಕೈಗೊಂಡಿದ್ದೇವೆ. ಗಡಿಭಾಗದಲ್ಲಿ ಕನ್ನಡ  ಅಭಿವೃದ್ಧಿ ಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ ಆಯೋಜನೆಗೆ ಒಂದು ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims